ಗ್ರಾಮ ಆಡಳಿತ ಅಧಿಕಾರಿ (VA) ಹುದ್ದೆ ಭರ್ತಿಗೆ ಸರಕಾರದ ಮೀನಮೇಷ

ರಾಜ್ಯ

ಒಬ್ಬ ಗ್ರಾಮಾಧಿಕಾರಿಗೆ ನಾಲ್ಕೈದು ಗ್ರಾಮದ ಜವಾಬ್ದಾರಿ ವಹಿಸಿಕೊಡುವ ಮೂಲಕ ಸರಕಾರಗಳು ಎಡವಟ್ಟು ಮಾಡಿಕೊಳ್ಳುತ್ತಿದೆ.

ಗ್ರಾಮ ಆಡಳಿತ ಅಧಿಕಾರಿ (VA) ಗ್ರಾಮದ ಕಂದಾಯದ ಸಮಸ್ಯೆಗಳಿಗೆ ಜನಸಾಮಾನ್ಯರ ಕೈಗೆ ಸಿಗುವಂತಹ ಕೆಳಹಂತದ ಅಧಿಕಾರಿಗಳು. ಮೇಲಾಧಿಕಾರಿಗಳು ಕಚೇರಿ, ಸಭೆ ಎಂದು ಜನಸಾಮಾನ್ಯರ ಸಮಸ್ಯೆಗಳಿಗೆ ಸಿಗದಿದ್ದರೂ ಗ್ರಾಮ ಆಡಳಿತ ಅಧಿಕಾರಿಗಳು ಅವೆಲ್ಲವನ್ನು ನಿಭಾಯಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅನಿವಾರ್ಯತೆ ಇದೆ. ಈ ನಡುವೆಯೇ ಗ್ರಾಮ ಆಡಳಿತ ಅಧಿಕಾರಿಗಳನ್ನು ನಾಲ್ಕೈದು ಗ್ರಾಮದ ಜವಾಬ್ದಾರಿ ವಹಿಸಿಕೊಡುವ ಮೂಲಕ ಸರಕಾರಗಳು ಎಡವಟ್ಟು ಮಾಡಿಕೊಳ್ಳುತ್ತಿದೆ.

ಜನಸಾಮಾನ್ಯರು ಸರಕಾರಿ ಕೆಲಸಕ್ಕೆ ಪರೀಕ್ಷೆ ಮೇಲೆ ಪರೀಕ್ಷೆ ಬರೆದು ನೇಮಕಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರೂ, ಸರಕಾರಗಳು ಹೊಸ ನೇಮಕಾತಿ ನಡೆಸದೆ ಇದ್ದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ನೀಡುವ ಮೂಲಕ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 286 ಗ್ರಾಮ ವೃತ್ತಗಳಿಗೆ ಸದ್ಯಕ್ಕೆ 205 ವಿಎಒ ಗಳಿದ್ದರೂ ಇವರಲ್ಲಿ 66 ಮಂದಿ ಕಂದಾಯ ಇಲಾಖೆ ಕಚೇರಿ ಗಳಿಗೆ ನಿಯೋಜಿತ ಜಿಲ್ಲೆಯ 422 ಗ್ರಾಮಗಳನ್ನು ಕೇವಲ 138 ಮಂದಿ ವಿಎಒ ಗಳು ನೋಡಿಕೊಳ್ಳಬೇಕಿದೆ. ನಿವೇಶನ, ಪ್ರಾಕೃತಿಕ ವಿಕೋಪ, ಮಾಸಾಶನ, ಹಲವು ಬಗೆಯ ಸಮೀಕ್ಷೆಗಳು, ಚುನಾವಣೆ- ಹಲವು ಹೊಣೆಗಳು ಈ ಅಧಿಕಾರಿಗಳಿವೆ. ದ.ಕ. ಜಿಲ್ಲೆಯಲ್ಲಿ 286 ಗ್ರಾಮ ವೃತ್ತ(ವಿಲೇಜ್‌ ಸರ್ಕಲ್‌)ಗಳಿದ್ದು, ಒಂದೊಂದು ವೃತ್ತಗಳಿಗೆ ಒಬ್ಬರು ವಿಎಒ ಗಳಿರಬೇಕು. ಭೂಮಿ ಕೇಂದ್ರವೂ ಸಹಿತ ಜಿಲ್ಲೆಗೆ ಒಟ್ಟು 325 ವಿಎಒ ಗಳ ಹುದ್ದೆ ಮಂಜೂರಾಗಿದ್ದು, ಸದ್ಯಕ್ಕೆ 91 ಹುದ್ದೆಗಳು ಖಾಲಿ ಇವೆ. ಅಂದರೆ ಗ್ರಾಮ ವೃತ್ತಗಳ ಪೈಕಿ 81 ಹಾಗೂ ಭೂಮಿ ಕೇಂದ್ರದ ಪೈಕಿ 10 ವಿಎಒ ಹುದ್ದೆಗಳು ಖಾಲಿ ಇವೆ.

ಈ ಮಧ್ಯೆ ಕೇಸ್‌ ವರ್ಕರ್‌ಗಳು ಇಲ್ಲ ಎನ್ನುವ ಕಾರಣಕ್ಕೆ ವಿಎಒಗಳನ್ನೇ ಡಿಸಿ ಕಚೇರಿ, ಎಸಿ ಕಚೇರಿ, ತಾಲೂಕು ಕಚೇರಿಗಳಿಗೆ ನಿಯೋಜಿಸಿರುವ ಪರಿಣಾಮ ಗ್ರಾಮಗಳಲ್ಲಿ ಕೆಲಸ ಮಾಡುವ ವಿಎಒಗಳ ಒತ್ತಡ ಹೆಚ್ಚಾಗಿದೆ. ಹೀಗೆ ನಿಯೋಜಿತರಾದವರು ಗ್ರಾಮಗಳಿಗೆ ತೆರಳಬೇಕಾದ ಒತ್ತಡವೂ ಇದೆ.

ರಾಜ್ಯದಲ್ಲಿ ವಿಎಒಗಳ ಒಟ್ಟು 9,839 ಮಂಜೂರು ಹುದ್ದೆಗಳಾಗಿದ್ದು, ಈ ಪೈಕಿ 1,887 ಹುದ್ದೆಗಳು ಖಾಲಿ ಇವೆ. ಉಡುಪಿಯಲ್ಲಿ 215 ರಲ್ಲಿ 41 ಹುದ್ದೆಗಳು ಖಾಲಿಯಿದ್ದರೆ, ಕೊಡಗಿನಲ್ಲಿ 131ರಲ್ಲಿ 10 ಖಾಲಿಯಿವೆ. ಸಾವಿರ ಹುದ್ದೆ ಭರ್ತಿಗೆ ಪ್ರಕ್ರಿಯೆ ರಾಜ್ಯದಲ್ಲಿ ಪ್ರಸ್ತುತ ಒಂದು ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಗೊಂಡಿದೆ. ಈ ಪೈಕಿ ಕೊಡಗಿಗೆ 6, ಉಡುಪಿಗೆ 22 ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ 50 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.