ಮಹಿಳೆಯೊಬ್ಬಳು ಮನೆಯಲ್ಲಿ ಮಲಗಿದ್ದಾಗ ವ್ಯಕ್ತಿಯೊಬ್ಬ ಎಂಟ್ರಿಯಾಗಿ ನಿದ್ದೆಯಲ್ಲಿ ಆತನೇ ಪತಿ ಎಂದುಕೊಂಡ ಮಹಿಳೆ ಆತನೊಂದಿಗೆ ಸೆಕ್ಸ್ ಮಾಡಿದ್ದಾಳೆ. ಪರ ಪುರುಷನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ ಮೇಲೆ ಕೊಠಡಿಯಲ್ಲಿ ಕರೆಂಟ್ ಆನ್ ಮಾಡಿದ್ದು, ಈ ವೇಳೆ ಮಹಿಳೆಗೆ ತಾನು ಮಾಡಿರುವ ತಪ್ಪು ಅರಿವಿಗೆ ಬಂದಿದೆ. ಕೂಡಲೇ ಆಕೆ ಆರೋಪಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾಳೆ.
ಮುಂಬೈನ ಪೊವಾಯಿ ಎಂಬಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪೊವಾಯಿಯಲ್ಲಿ ಮಹಿಳೆ ಮನೆಯಲ್ಲಿ ತನ್ನ ಗಂಡನಿಗಾಗಿ ಕಾಯುತ್ತಿದ್ದಳು. ತಡರಾತ್ರಿಯಾದ್ರೂ ಗಂಡ ಬಂದಿಲ್ಲ. ಗೇಟ್ ಬೀಗ ಹಾಕದೇ ಗಂಡನಿಗಾಗಿ ಕಾಯುತ್ತಲೇ ನಿದ್ದೆ ಜಾರಿದ್ದಾಳೆ. ಇದೇ ತಕ್ಕ ಸಮಯ ನೋಡಿಕೊಂಡಿದ್ದ ಪಕ್ಕದ ಮನೆಯ ಕಾಮಕ ವ್ಯಕ್ತಿ ಬೆಡ್‌ರೂಮ್‌ನಲ್ಲಿ ಮಲಗಿದ್ದ ಮಹಿಳೆ ಪಕ್ಕ ಬಂದು ಮಲಗಿದ್ದಾನೆ. ಆಕೆ ಕೂಡಾ ತನ್ನ ಗಂಡನೇ ಬಂದಿದ್ದಾನೆಂದು ಆತನ ಜೊತೆ ರೊಮ್ಯಾನ್ಸ್ ಮಾಡಿದ್ದಾಳೆ. ಸೆಕ್ಸ್ ನಲ್ಲಿ ಕೂಡಾ ಭಾಗಿಯಾಗಿದ್ದಾಳೆ. ರೊಮ್ಯಾನ್ ಮುಗಿದ ನಂತರ ಗಂಡನಿಗೆ ಊಟ ಕೊಡಲು ಆಕೆ ಕೊಠಡಿಯಲ್ಲಿ ಲೈಟ್ ಆನ್ ಮಾಡಿದಾಗ ಬಂದಿರುವ ವ್ಯಕ್ತಿ ಗಂಡನಲ್ಲ, ಪಕ್ಕದ ಮನೆಯವ ಕಾಮುಕ ಎಂದು ಗೊತ್ತಾಗಿದೆ.
ಕೂಡಲೇ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು, ಅಕ್ಕಪಕ್ಕದವರೆಲ್ಲಾ ಬಂದಿದ್ದಾರೆ. ಪತಿ ಕೂಡಾ ಅದೇ ಸಮಯಕ್ಕೆ ಮನೆಗೆ ಬಂದಿದ್ದು, ಆರೋಪಿಯನ್ನು ಹಿಡಿದು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.