ವಿಟ್ಲ ಠಾಣಾ ವ್ಯಾಪ್ತಿಯ ಉರಿಮಜಲು ಪರಿಸರದಲ್ಲಿ ಕಳೆದ ಕೆಲ ಸಮಯಗಳಿಂದ ಗಾಂಜಾ, ಎಂಡಿಎಂಎ ಮಾದಕ ದ್ರವ್ಯಗಳ ನಶೆಯಲ್ಲಿ ತೂರಾಡುತ್ತಿರುವ ಕೆಲ ಪುಂಡರು ಹಲ್ಲೆ-ಗಲಾಟೆ ನಡೆಸುತ್ತಾ ಸಾರ್ವಜನಿಕರ ಪಾಲಿಗೆ ಕಂಠಕರಾಗಿದ್ದರು. ಅಶಾಂತಿಗೆ ಕಾರಣವಾಗುವ ಯುವಕರಿಗೆ ಡ್ರಗ್ಸ್ ವಿತರಣೆ ಮಾಡುವುದು ಯಾರೆಂಬ ಬಗ್ಗೆ ಸ್ಥಳೀಯರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು.
ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಅಳಕೆಮಜಲು ಫ್ಲ್ಯಾಟ್ ನಲ್ಲಿರುವ ಮಾಜಿ ಬಸ್ ಚಾಲಕ ಸಮದ್ ಎಂಬವನನ್ನು ಗುರುವಾರ ಮುಸ್ಸಂಜೆ ಸ್ಥಳೀಯ ಯುವಕರ ತಂಡ ಉರಿಮಜಲು ಜಂಕ್ಷನ್ ಗೆ ಆಕ್ಟಿವಾದಲ್ಲಿ ಬರುತ್ತಿದ್ದಾಗ ತಡೆದು ವಿಚಾರಣೆ ನಡೆಸಿದೆ. ಆ ಸಮಯ ಆತ ‘ನಾನೇ ಎಂಡಿಎಂಎ ಕೊಡುವುದು. ನನ್ನನ್ನೇನು ಮಾಡುತ್ತೀರಿ. ಎಂದು ಉದ್ಧಟತನ ತೋರಿದ ಕಾರಣ ಆಕ್ರೋಶಗೊಂಡ ಯುವಕರು ಒಂದಿಷ್ಟು ಗೂಸಾ ನೀಡುತ್ತಿದ್ದಂತೆ ಆತ ಅಕ್ಟಿವಾ ಏರಿ ವಿಟ್ಲ ಕಡೆಗೆ ಪರಾರಿಯಾಗಿದ್ದಾನೆ.