ಉಪ್ಪಿನಂಗಡಿ: ಇಂದ್ರಪ್ರಸ್ಥ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್‌ ಮುಝಾಮಿಲ್‌ ಕರ್ವೇಲ್ ರಾಷ್ಟ್ರೀಯ ಆಹಾರ ತಂತ್ರಜ್ಞಾನ (NIFTEM) ಸಂಸ್ಥೆಗೆ ಆಯ್ಕೆ

ಕರಾವಳಿ

ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಬ್ಯಾಸ ಮಾಡಿರುವ ಕರ್ವೇಲ್ ನಿವಾಸಿ ಮಹಮ್ಮದ್‌ ಮುಝಾಮಿಲ್‌ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಗೆ (NIFTEM) ಆಯ್ಕೆಯಾಗಿದ್ದಾರೆ. ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮ ಶೀಲತೆ ಮತ್ತು ಉದ್ಯೋಗ (NIFT) ದೇಶದ ಪ್ರತಿಷ್ಠಿತ ಸಂಸ್ಥೆಯಾಗಿದೆ.

ಇದು ಭಾರತ ಸರಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿರುವ ಪ್ರಮುಖ ಸಂಸ್ಥೆಯಾಗಿದೆ.

ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ದೇಶದ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿ ಮುಹಮ್ಮದ್ ಮುಝಾಮೀಲ್ ಕರ್ವೇಲ್ ನಿವಾಸಿಗಳಾದ ಅಶ್ರಫ್ ಮತ್ತು ಶಮೀಮಾ ದಂಪತಿಗಳ ಪುತ್ರ.