ಸವಣೂರಿನ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಿ, ಮುಂದಿನ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ನೆಪವೊಡ್ಡಿದ 18ರ ಹರೆಯದ ಯುವತಿ ದೀಕ್ಷಾ ಮನೆಯವರನ್ನು ನಂಬಿಸಿ ಕಳೆದ ಆಗಸ್ಟ್ 25 ರಂದು ಮನೆ ಬಿಟ್ಟಿದ್ದಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು ಹೊಂದಿರುವ ಮೂರು ಮಕ್ಕಳ ಪೋಷಕರಾಗಿರುವ ದೀಕ್ಷಾ ತಂದೆ ತಾಯಿ ಅವಿದ್ಯಾವಂತರಾದ ಕಾರಣ ಮಗಳು ಹೇಳುವ ಕತೆಯನ್ನು ನಿಜವೆಂದೇ ನಂಬಿದ್ದರು. ತನ್ನ ಜೊತೆ ಕಲಿತ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿದ್ದು, ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ತನ್ನನ್ನು ಬೀಳ್ಕೊಡಲು ಬಂದಿರುವುದಾಗಿಯೂ ಪೋಷಕರಿಗೆ ನಂಬಿಸಿದ್ದಳು. ಅದರಂತೆ ವಿಮಾನ ನಿಲ್ದಾಣದವರೆಗೂ ಗೆಳತಿಯರ ಜೊತೆ ಹೋದ ದೀಕ್ಷಾ ಬಳಿಕ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ದಂತೆ ಗೆಳತಿಯರು ವಾಪಾಸ್ ಬಂದಿದ್ದರು. ವಿಚಿತ್ರ ಏನೆಂದರೆ ದೀಕ್ಷಾ ತನ್ನ ಗೆಳತಿಯರಿಗೆ ತನಗೆ ಅಪ್ಪ ಅಮ್ಮ ಇಲ್ಲವೆಂದೇ ಕಥೆ ಕಟ್ಟಿ ಅವರಿಂದ ಹಣದ ಸಹಾಯ ಪಡೆದಿದ್ದಳು ಎನ್ನಲಾಗಿದೆ.
ದೀಕ್ಷಾ ಪೋಷಕರು ತಮ್ಮ ಮಗಳು ವಿದೇಶಕ್ಕೆ ಹೋದಳೆಂದು ನಂಬಿದ್ದರೆ, ವಿಮಾನ ನಿಲ್ದಾಣದಲ್ಲಿ ಸವಣೂರು ಮೂಲದ ಅನ್ಯಕೋಮಿನ ಯುವಕನ ಜೊತೆ ಸೇರಿದ ದೀಕ್ಷಾ ಬಳಿಕ ವಿಮಾನ ನಿಲ್ದಾಣದಿಂದ ಹೊರಬಂದು ವಾಪಾಸ್ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಳು. ಆದರೆ ಆ ಬಸ್ ನ ನಿರ್ವಾಹಕ ಅನುಮಾನಗೊಂಡು ಆತ ಯುವತಿಯ ಫೋಟೋ ತೆಗೆದು ಹಿಂದೂ ಸಂಘಟನೆಯ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅದು ಪುತ್ತೂರಿನ ಹಿಂದೂ ಸಂಘಟನೆಗಳಿಗೂ ಮಾಹಿತಿ ಹೋಗಿತ್ತು. ಬಳಿಕ ಯುವತಿಯ ಫೋಟೋ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿರುವ ಯುವತಿ ಕೊಲ್ಲಮೊಗ್ರಿನ ದೀಕ್ಷಾ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ನಂತರ ಬೆಂಗಳೂರಿಗೆ ತೆರಳಿದ ದೀಕ್ಷಾ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕಳೆದ 28ರಂದು ದೂರು ನೀಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ..