” ಸರಕಾರಿ ಆಸ್ಪತ್ರೆಗಳನ್ನು ಉಳಿಸಿ ಹೋರಾಟ ಸಮಿತಿ, ಗುರುಪುರ ಹೋಬಳಿ” ಇದರ ಪ್ರಮುಖರ ನಿಯೋಗ ಹೋಬಳಿ ವ್ಯಾಪ್ತಿಯ ಕುಪ್ಪೆಪದವು, ಕೊಂಪದವು, ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಕೇಂದ್ರಗಳ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿತು. ಮಂಜೂರಾಗಿರುವ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ನಡೆಯದಿರುವುದು, ಇರುವ ಸಿಬ್ಬಂದಿಗಳಿಗೆ ಒಂದಕ್ಕಿಂತ ಹೆಚ್ಚು ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ನಿಯೋಜನೆ ಹೊಂದಿರುವುದು, ಕೊರತೆ, ವೈದ್ಯರ ಕೊರತೆಗಳು ಸಮಿತಿಯ ಗಮನಕ್ಕೆ ಬಂದವು. ಇದು ಈಗಿರುವ ವೈದ್ಯಕೀಯ ಸಿಬ್ಬಂದಿಗಳ ಮೇಲೆ ಒತ್ತಡ ಉಂಟುಮಾಡಿರುವುದನ್ನು ಸಮಿತಿ ಗಮನಿಸಿತು. ಹೋಬಳಿಗೆ ವಿಸ್ತೀರ್ಣ, ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚವರಿ ಆರೋಗ್ಯ ಕೇಂದ್ರದ ಅಗತ್ಯ ಇರುವುದು, ಕನಿಷ್ಟ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾದರು 24×7 ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸುವ ಅರ್ಹತೆಣ ಅಗತ್ಯ ಇರುವುದನ್ನು ನಿಯೋಗ ಗಮನಿಸಿತು. ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ
ಈ ಎಲ್ಲಾ ಅಂಶಗಳನ್ನು ಒಳಗೊಂಡ ವರದಿ, ಹಾಗೂ ಬೇಡಿಕೆಯನ್ನು ಸಿದ್ದಪಡಿಸಿ ಆರೋಗ್ಯ ಸಚಿವರಿಗೆ ಸಲ್ಲಿಸಲು, ಅದರ ಆಧಾರದಲ್ಲಿ ಹೋರಾಟ ಮುಂದುವರಿಸಲು ಹೋರಾಟ ಸಮಿತಿ ನಿರ್ಧರಿಸಿದೆ.
ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಗುರುಪುರ ಹೋಬಳಿ ಸರಕಾರಿ ಆಸ್ಪತ್ರೆಗಳ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಕಾರ್ಮಿಕ ನಾಯಕ ಸದಾಶಿವ ದಾಸ್, ಪತ್ರಕರ್ತ ಬಾವಾ ಪದರಂಗಿ, ಬೀಡಿ ಕಾರ್ಮಿಕರ ಸಂಘಟನೆಯ ವಸಂತಿ ಕುಪ್ಪೆಪದವು, ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಶೆರೀಫ್ ಕಜೆ, ಪಂಚಾಯತ್ ಸದಸ್ಯ ಎಂ ರಫೀಕ್, ಪ್ರಾಂತ ರೈತ ಸಂಘದ ನೋಣಯ್ಯ ಗೌಡ ಮುಂತಾದವರು ಇದ್ದರು.