ಮೆಲ್ಕಾರ್-ಮುಡಿಪು ಹೆದ್ದಾರಿಯ ಮಾರ್ನಬೈಲು ಬಳಿ ಲಾರಿ ಮತ್ತು ಕಾರು ಮುಖಾಮುಖಿಯಾಗಿ; ಚಾಲಕನ ಸ್ಥಿತಿ ಗಂಭೀರ

ಕರಾವಳಿ

ಮೆಲ್ಕಾರ್-ಮುಡಿಪು ಹೆದ್ದಾರಿಯ ಮಾರ್ನಬೈಲು ಬಳಿ ಲಾರಿ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಗುರುತು ಹಚ್ಚಲಾರದಷ್ಟು ಜಖಂಗೊಂಡ ಕಾರು ಚಾಲಕನ ಸ್ಥಿತಿ ಗಂಭೀರ. ಸಜಿಪ ಎಂಬಲ್ಲಿ ಅಂಗಡಿ ಹೊಂದಿರುವ ಬೋಳಂಗಡಿ ಮುಸ್ತಫಾ ಎಂಬವರು ಚಲಾಯಿಸುತ್ತಿದ್ದ ಕ್ರೆಟಾ ಕಾರಿಗೆ ಮಾರ್ನಬೈಲು ಎಂಬಲ್ಲಿ ಲಾರಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಮಂಗಳೂರಿನ ಹೈಲೇಂಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.