ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೈಗಾರಿಕೆಗಳು, ಉದ್ಯಮ, ಬ್ಯಾಂಕಿಂಗ್ ಕ್ಷೇತ್ರ, ವ್ಯಾಪಾರಿ ಸಂಸ್ಥೆಗಳಲ್ಲಿ ಸ್ಥಳೀಯ ಯುವಜನತೆಯನ್ನು ಹೊರಗಿಡುತ್ತಿರುವ ವಿದ್ಯಮಾನಗಳು ಹಾಗೂ ಈ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಕಡ್ಡಾಯ ಅವಕಾಶಗಳಿಗೆ ನಡೆಸ ಬೇಕಾದ ಪ್ರಯತ್ನಗಳಿಗೆ ಸಂಬಂಧಿಸಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೋ. ಪುರುಷೋತ್ತಮೆ ಬಿಳಿಮಲೆಯವರೊಂದಿಗೆ ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಚರ್ಚಾಗೋಷ್ಟಿ ನಡೆಸಲಾಯಿತು.
ತುಳುನಾಡಿನ ಉದ್ಯಮಗಳಲ್ಲಿ ಸ್ಥಳೀಯರ ಉದ್ಯೋಗದ ಸ್ಥಿತಿಗತಿಗಳ ಕುರಿತಾದ ಆಗ್ರಹ ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷರಿಗೆ ಸಲ್ಲಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಲವು ಜನಪರ ಸಂಘಟನೆಗಳ ಪದಾಧಿಕಾರಿಗಳು, ಬರಹಗಾರರು, ಚಿಂತಕರು ಚರ್ಚಾಗೋಷ್ಟಿಯಲ್ಲಿ ಭಾಗವಹಿಸಿದರು. ಉದ್ಯೋಗದ ಹಕ್ಕಿಗಾಗಿ ಮುಂದೆ ನಡೆಸಬೇಕಾದ ಹೋರಾಟಗಳಿಗೆ ದಿಕ್ಕುತೋರುವ, ಶಕ್ತಿತುಂಬುವ ನಿಟ್ಟಿನಲ್ಲಿ ಸಭೆ ಯಶಸ್ವಿಯಾಗಿ ನಡೆಯಿತು.
ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ಶೇಖರ ಹೆಜಮಾಡಿ, ರಘು ಎಕ್ಕಾರು, ರೈತ ಸಂಘಟನೆಯ ಕೆ ಯಾದವ ಶೆಟ್ಟಿ, ಕಾರ್ಮಿಕ ಸಂಘಟನೆಯ ಮುಂದಾಳುಗಳಾದ ಬಿ ಶೇಖರ್, ಮುಕೇಶ್ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ನ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಜೀವನ್ ರಾಜ್ ಕುತ್ತಾರ್, ರಿಜ್ವಾನ್ ಹರೇಕಳ, ಎಐವೈಎಫ್ ನ ಪುಷ್ಪರಾಜ್ ಬೋಳೂರು, ಜಗತ್ ಪಾಲ್, ಸಾಮರಸ್ಯ ಮಂಗಳೂರು ಇದರ ಮಂಜುಳಾ ನಾಯಕ್, ಮುಹಮ್ಮದ್ ಕುಂಜತ್ತಬೈಲ್, ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೆಪಾಡಿ, ಚರಣ್ ಶೆಟ್ಟಿ, ಚಿಂತಕರು, ಬರಹಗಾರರಾದ ಎಮ್ ಜಿ ಹೆಗ್ಡೆ, ಡಾ.ಶಿವರಾಮ ಶೆಟ್ಟಿ, ಡಾ. ಉದಯ ಇರ್ವತ್ತೂರು, ಯು ಟಿ ಫರ್ಜ಼ಾನ, ಹಮೀದ್ ಪಡುಬಿದ್ರೆ, ಕೃಷ್ಣಾನಂದ ಡಿ ಎಸ್, ಸಾಮಾಜಿಕ ಕಾರ್ಯಕರ್ತರಾದ ಶ್ರೀನಾಥ್ ಕುಲಾಲ್, ನಿತಿನ್ ಬಂಗೇರ, ಸಮರ್ಥ್ ಭಟ್, ಕೇಶವ ಹೆಜಮಾಡಿ, ಅಶ್ರಫ್ ಹರೇಕಳ ಮುಂತಾದವರು ಉಪಸ್ಥಿತರಿದ್ದರು.