ಕಾರಾಗೃಹ ಎಡಿಜಿಯಾಗಿ ನೇಮಕ ಆಗುತ್ತಾರಾ.. ರಫ್ ಆ್ಯಂಡ್ ಟಫ್ ಅಧಿಕಾರಿ ಅಲೋಕ್ ಕುಮಾರ್.? ಭ್ರಷ್ಟ ಜೈಲಾಧಿಕಾರಿಗಳಿಗೆ ಶುರುವಾಯ್ತು ನಡುಕ.!

ರಾಜ್ಯ

ಕಾರಾಗೃಹ ಎಡಿಜಿಯಾಗಿ ನೇಮಕ ಆಗುತ್ತಾರಾ.. ರಫ್ ಆ್ಯಂಡ್ ಟಫ್ ಆಫೀಸರ್ ಅಲೋಕ್ ಕುಮಾರ್.? ಹೀಗಾಗಿ ಭ್ರಷ್ಟ ಅಧಿಕಾರಿಗಳಿಗೆ ಶುರುವಾಯ್ತು ನಡುಕ ಜೈಲಿನ ಅವ್ಯವಾಹರದಿಂದ ಮುಜಗರಕ್ಕಿಡಾಗಿರೋ ಸರ್ಕಾರ. ಹೀಗಾಗಿ ಎಡಿಜಿಪಿ ಅಲೋಕ್ ಕುಮಾರ್ ನೆನಪಾಗಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ರಸ್ತೆ ಸುರಕ್ಷಿತೆ ಮತ್ತು ಸಂಚಾರ ರಾಜ್ಯ ಎಡಿಜಿಪಿಯಾಗಿರೋ ಅಲೋಕ್ ಕುಮಾರ್ ಅವರನ್ನು ಕಾರಾಗೃಹ ಎಡಿಜಿಪಿಯಾಗಿ‌ ವರ್ಗಾವಣೆ ಮಾಡಲು ಸರ್ಕಾರದಲ್ಲಿ ಚಿಂತನೆ ನಡೆಸುತ್ತಿದೆ. ಅಲೋಕ್ ಕುಮಾರ್ ಸಿಸಿಬಿ ಮುಖ್ಯಸ್ಥರಾಗಿ, ಕಮಿಷನರ್ ಆಗಿದ್ದ ಸಮಯದಲ್ಲಿ ದೊ ನಂಬರ್ ದಂಧೆಕೋರರನ್ನು, ಬೆಂಗಳೂರಿನ ರೌಡಿಗಳನ್ನು ಊರು ಬಿಡುವಂತೆ ಮಾಡಿದ್ದರು.

ಅಲೋಕ್ ಕುಮಾರ್ ಮೇಲಿನ ಭಯಕ್ಕೆ ಅದೆಷ್ಟೋ ರೌಡಿಗಳು ಊರು ಬಿಟ್ಟಿದ್ರೆ, ಕೆಲ ರೌಡಿಗಳು ಜೈಲು ಸೇರಿದ್ರು. ಈಗ ಜೈಲಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿ ರಾಜತಿಥ್ಯ ಪಡೆಯುತ್ತಿದ್ದಾರೆ ಹೀಗಾಗಿ ಅಲೋಕ್ ಕುಮಾರ್ ನೇಮಿಸಿ ಕಂಟ್ರೋಲ್ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.