ಚನ್ನಪಟ್ಟಣದಲ್ಲಿ ಗರಿಗೆದರಿದ ‘ಗಣೇಶ ರಾಜಕಾರಣ’.. ಆಪ್ತಮಿತ್ರನ ಪರ ‘HDK’ , ಬಿಜೆಪಿ ‘ಸೈನಿಕ’ ಕಂಗಾಲು.!
ಚನ್ನಪಟ್ಟಣ ಉಪ ಚುನಾವಣಾ ಪಾಲಿಟಿಕ್ಸ್ ರಂಗೇರುತ್ತಿದೆ. ದೋಸ್ತಿ ಪಕ್ಷ ಜೆಡಿಎಸ್ ನ ರಾಜಕೀಯ ಪಟ್ಟು ಆಟಗಳಿಗೆ ಬಿಜೆಪಿ ಅಕ್ಷರಶಃ ನಲುಗಿ ಹೋಗಿದೆ. ಹೈಕಮಾಂಡ್ ಮಟ್ಟದಲ್ಲಿ ಮೋದಿ -ಶಾ ರೊಂದಿಗೆ ದೋಸ್ತಿ ಮಾಡಿ ಎರಡು ಸ್ಥಾನ ಪಡೆದರೂ ಕುಮಾರಸ್ವಾಮಿ ಮಿನಿಸ್ಟರ್ ಪಡೆಯುವ ಮೂಲಕ ಬಂಪರ್ ಲಾಟ್ರಿ ಪಡೆದಿದ್ದರು. ಕುಮಾರಸ್ವಾಮಿ ಸಂಸದರಾಗುತ್ತಿದ್ದಂತೆ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಗುಡ್ ಬೈ ಹೇಳಿದ್ದರು. ಇನ್ನು ಕೆಲವೇ ತಿಂಗಳಲ್ಲಿ ಚನ್ನಪಟ್ಟಣದಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಅತ್ತ ಡಿಕೆಶಿ, ಇತ್ತ ಬಿಜೆಪಿ ಸೈನಿಕ ಸಿ.ಪಿ ಯೋಗೇಶ್ವರ್ ವಿರುದ್ಧ ತೊಡೆ ತಟ್ಟಿರುವ ಕುಮಾರಸ್ವಾಮಿ ತನ್ನ ಆಪ್ತಮಿತ್ರ ಜಯ ಮುತ್ತು ಗೆ ಟಿಕೆಟ್ ನೀಡುವ ಉತ್ಸುಕರಾಗಿದ್ದಾರೆ.
ಚನ್ನಪಟ್ಟಣದಲ್ಲಿ ಬಿಜೆಪಿ ಗೆ ಸ್ಥಾನ ಬಿಟ್ಟು ಕೊಡಲು ಕುಮಾರಸ್ವಾಮಿ ಸುತಾರಾಂ ಒಪ್ಪುತ್ತಿಲ್ಲ. ಅದರಲ್ಲೂ ಬಿಜೆಪಿ ಯ ಸಿ.ಪಿ ಯೋಗೇಶ್ವರ್ ಅವರಿಗಂತೂ ಟಿಕೆಟ್ ನೀಡಲು ಕುಮಾರಸ್ವಾಮಿ ಬಿಲ್ ಕುಲ್ ಒಪ್ಪುತ್ತಿಲ್ಲ. ಚನ್ನಪಟ್ಟಣದಲ್ಲಿ ಈ ಬಾರಿ ಜೆಡಿಎಸ್ ಕ್ಯಾಂಡಿಡೇಟ್ ಪಕ್ಕಾ. ಮಗ ನಿಖಿಲ್ ತಪ್ಪಿದ್ದರೆ ಆಪ್ತಮಿತ್ರ ಜಯಮುತ್ತು ಗೆ ಟಿಕೆಟ್ ಫಿಕ್ಸ್ ಅನ್ನುವ ಮನ:ಸ್ಥಿತಿಯಲ್ಲಿದ್ದಾರೆ ಕುಮಾರಸ್ವಾಮಿ. ಇದೊಂದು ಬಾರಿ ಯೋಗೇಶ್ವರ್ ಅವರಿಗೆ ಸೀಟು ಬಿಟ್ಟು ಕೊಡಿ ಎಂದು ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಷಿ, ಅಶೋಕ್, ಸಿ.ಟಿ ರವಿ, ಅಶ್ವತ್ಥ್ ನಾರಾಯಣ, ಅರವಿಂದ ಬೆಲ್ಲದ ಅವರು ದೆಹಲಿಯಲ್ಲಿ ಮನವೊಲಿಕೆ ಮಾಡಿದರೂ ಕುಮಾರಸ್ವಾಮಿ ಮಣಿದಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕುಮಾರಸ್ವಾಮಿ ಕೈ ಕಾಲು ಹಿಡಿದು ಟಿಕೆಟ್ ಗಾಗಿ ಬೇಡುವ ಪರಿಸ್ಥಿತಿ ರಾಜ್ಯ ಬಿಜೆಪಿ ನಾಯಕರಿಗೆ ಬಂದಿರುವುದು ಪ್ರಾಣ ಸಂಕಟ ತಂದೊಡ್ಡಿದೆ.
ಇತ್ತ ಚನ್ನಪಟ್ಟಣದಲ್ಲಿ ಟಿಕೆಟ್ ದೊರೆಯದಿದ್ದರೆ ಪಕ್ಷೇತರ ನಾಗಿ ಕಣಕ್ಕಿಳಿಯುವುದಾಗಿ ಯೋಗೇಶ್ವರ್ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಇದು ದೋಸ್ತಿ ಪಕ್ಷದ ಮೈತ್ರಿಗೆ ಬಿರುಕು ಉಂಟಾಗುವ ಎಲ್ಲಾ ಸಾಧ್ಯತೆ ಇರುವುದರಿಂದ ರಾಜ್ಯ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ. ಇತ್ತ ತನಗೆ ಟಿಕೆಟ್ ಗಾಗಿ ಪಕ್ಷದ ನಾಯಕರು ಜೆಡಿಎಸ್ ಕೈ ಕಾಲು ಹಿಡಿಯುವ ಪರಿಸ್ಥಿತಿ ಬಂದಿರುವುದಕ್ಕಾಗಿ ಸೈನಿಕ ಯೋಗೇಶ್ವರ್ ಕಂಗಾಲಾಗಿದ್ದಾರೆ.
ಈ ನಡುವೆ ಗಣೇಶ ಹಬ್ಬದ ಹೆಸರಿನಲ್ಲಿ ರಾಜಕೀಯ ಪಾಲಿಟಿಕ್ಸ್ ಗರಿಗೆದರಿದ್ದು, ಬಿಜೆಪಿ ಯ ಸಿ.ಪಿ ಯೋಗೇಶ್ವರ್, ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿ, ಕುಮಾರಸ್ವಾಮಿ ಆಪ್ತಮಿತ್ರ ಜಯಮುತ್ತು ಗಣೇಶ ಹಬ್ಬಕ್ಕೆ ಗಣೇಶ ಮೂರ್ತಿ ವಿತರಣೆಗೆ ಮುಂದಾಗಿ ಈಗಾಗಲೇ ನೋಂದಣಿ ಆರಂಭಿಸಿದ್ದಾರೆ.
ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಆಪ್ತಮಿತ್ರ ಜಯಮುತ್ತು ಗೆ ಟಿಕೆಟ್ ನೀಡುವ ಲೆಕ್ಕಾಚಾರದಲ್ಲಿ ಇದ್ದು, ಬಿಜೆಪಿಯ ಯಾವುದೇ ಮನವೊಲಿಕೆಗೆ ಬಗ್ಗುತ್ತಿಲ್ಲ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಆಟ ಬಿಜೆಪಿಗೆ ಪ್ರಾಣಸಂಕಟ ತಂದೊಡ್ಡಿರುವುದು ಸುಳ್ಳಲ್ಲ.