ರಾಜ್ಯದಲ್ಲಿ ಎಚ್ ಐ ಸೋಂಕು ಗಣನೀಯ ಪ್ರಮಾಣದಲ್ಲಿ ಏರಿಕೆ

ರಾಜ್ಯ

MBBS, ಇಂಜಿನಿಯರಿಂಗ್, ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಅಧಿಕ.!

ರಾಜ್ಯದಲ್ಲಿ ಎಚ್ ಐ ವಿ ಸೋಂಕು ಮತ್ತೆ ಜನರನ್ನು ಕಾಡುತ್ತಿದ್ದು, ಸೋಂಕಿನ ಸುಳಿಗೆ ಸುಶಿಕ್ಷಿತರು ಹಾಗೂ ಯುವ ಜನಾಂಗ ಹೆಚ್ಚಾಗಿ ಸಿಲುಕಿರುವುದು ಕಂಡುಬಂದಿದೆ.

ರಾಜ್ಯದಲ್ಲಿ ಒಟ್ಟು 4,23,369 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಪುರುಷರು 1,82,973, ಮಹಿಳೆಯರು 2,15,519, ಯುವಕರು 87,266 ಹಾಗೂ 10,376 ಯುವತಿಯರಲ್ಲಿ ಸೋಂಕು ಕಂಡುಬಂದಿದೆ. ಎಂಬಿಬಿಎಸ್, ಎಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ ಐ ವಿ ಸೋಂಕು ಹೆಚ್ಚಾಗಿದೆ ಎಂದು ಅಂಕಿ -ಅಂಶಗಳು ಹೇಳುತ್ತವೆ. ರಾಜ್ಯದಲ್ಲಿ ಒಟ್ಟು 12,481 ಯುವಕರು ಹಾಗೂ 10,376 ಯುವತಿಯರು ಎಚ್ ಐ ವಿ ಸೋಂಕಿನಿಂದ ಬಳಲುತ್ತಿದ್ದಾರೆ.

ಸೋಂಕಿತರಲ್ಲಿ ಬೆಂಗಳೂರು ಮೊದಲ ಹಾಗೂ ಬೆಳಗಾವಿ 2 ನೇ ಸ್ಥಾನದಲ್ಲಿವೆ. 3ನೇ ಸ್ಥಾನದಲ್ಲಿ ಬಾಗಲಕೋಟ, 4ನೇ ಸ್ಥಾನದಲ್ಲಿ ಗಡಿನಾಡು ಬಳ್ಳಾರಿ ಹಾಗೂ 5ನೇ ಸ್ಥಾನದಲ್ಲಿ ವಿಜಯಪುರ ಇದ್ದರೆ, ಕೊನೆ ಸ್ಥಾನದಲ್ಲಿ ಕೊಡಗು ಇದೆ.

ಯುವಕರಲ್ಲಿ ಎಚ್‌ಐವಿ‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜನವರಿಯಿಂದ ಆಗಸ್ಟ್ 2023 ರವರೆಗೆ, 500 ಯುವಕರು ಈ ಕಾಯಿಲೆಗೆ ಧನಾತ್ಮಕವಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದಲ್ಲಿ 25 ವರ್ಷ ದಾಟಿದ ಟ್ರಕ್ ಡ್ರೈವರ್‌ಗಳು, ಲೈಂಗಿಕ ಕಾರ್ಯಕರ್ತರು, ವಲಸೆ ಕಾರ್ಮಿಕರಲ್ಲಿ ಏಡ್ಸ್ ಹೆಚ್ಚಾಗಿತ್ತು. ಈಗ ಇದು 18 ರಿಂದ 25 ವರ್ಷದೊಳಗಿನ ಯುವಕರಲ್ಲಿ ಹೆಚ್ಚಾಗಿದೆ.

ದಕ್ಷಿಣ ಕನ್ನಡದಲ್ಲಿ, ಜನವರಿಯಿಂದ ಆಗಸ್ಟ್ 17, 2023 ರವರೆಗೆ 130 ಹೊಸ HIV/AIDS ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 17 MSM ಪ್ರಕರಣಗಳಾಗಿವೆ. ಆಗಸ್ಟ್ ತಿಂಗಳಿನ 17 ದಿನಗಳಲ್ಲಿ ಯುವಕರಲ್ಲಿ ಐದು ಪ್ರಕರಣಗಳು ಕಂಡುಬರುತ್ತವೆ. ಇದು ಸರ್ಕಾರಿ ಆಸ್ಪತ್ರೆಗಳು ನೀಡಿರುವ ಅಂಕಿ-ಅಂಶಗಳು. ಖಾಸಗಿ ಆಸ್ಪತ್ರೆಗಳ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ಯುವ ಜನಾಂಗದಲ್ಲೇ HIV ಸೋಂಕು ಹೆಚ್ಚಾಗಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಮಾತ್ರವಲ್ಲದೆ ವಿಧ್ಯಾವಂತರಲ್ಲೇ ಈ ಸೋಂಕು ಅಧಿಕ ಕಂಡುಬರುತ್ತದೆ. MBBS, ಇಂಜಿನಿಯರಿಂಗ್, ವೃತ್ತಿಪರ ಕೋರ್ಸ್ ಅಧ್ಯಯನ ಮಾಡುವವರಲ್ಲೇ ಎಚ್ಐವಿ ಸೋಂಕು ಹೆಚ್ಚಾಗಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ.