ಅತ್ಯಾಚಾರ ಆರೋಪ ಪ್ರಕರಣ: ಆರೋಪಿ ಖುಲಾಸೆ, ವಾದ ಮಂಡಿಸಿದ ನ್ಯಾಯವಾದಿ ಅರುಣ್ ಬಂಗೇರ

ಕರಾವಳಿ

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ರವರನ್ನು ಖುಲಾಸೆಗೊಳಿಸಿ, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2019ರಲ್ಲಿ ಆರೋಪಿ ಉಮೇಶ್ ಸಾಲ್ಯಾನ್ ಎಂಬುವರು ಬಸ್ಸಿನಲ್ಲಿ ಚಾಲಕ ಮಾಡಿಕೊಂಡಿರುವಾಗ ಪಿರ್ಯಾದಿದಾರರನ್ನು ಪರಿಚಯಿಸಿಕೊಂಡು ಆತ್ಮೀಯತೆಯಿಂದಿದ್ದು, ನಂತರದ ದಿನಗಳಲ್ಲಿ ತನ್ನ ತಂದೆಯ ಶಸ್ತ್ರಚಿಕಿತ್ಸೆಗೆ ಹಣಬೇಕು ಎಂದು ಒಂದು ಲಕ್ಷ ಹಣವನ್ನು ಪಿರ್ಯಾಧಿದಾರರಿಂದ ಪಡೆದುಕೊಂಡು, ಸದ್ರಿ ಹಣವನ್ನು 2 ತಿಂಗಳಲ್ಲಿ ಕೊಡುತ್ತೇನೆಂದು ಹೇಳಿ, ನಂತರ ಪಿದ್ಯಾಧಿದಾರರು ಆರೋಪಿಯಲ್ಲಿ ಹಣ ಕೇಳಿದಾಗ ಆರೋಪಿಯು ಹಣ ಕೊಡದೇ ಸತಾಯಿಸುತ್ತಿದ್ದು, ವಿನಾಂಕ 20-11-2019ರಂದು ಹಣ ಕೊಡುವುದಾಗಿ ಹೇಳಿ ಪಿರ್ಯಾಧಿದಾರರನ್ನು ತನ್ನ ಮನೆಗೆ ಕರೆಸಿಕೊಂಡು ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದು, ನಂತರ ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದು ಇದರಿಂದ ಪಿರ್ಯಾಧಿದಾರರು ಗರ್ಭಿಣಿ ಆಗಿದ್ದು, ನಂತರದ ದಿನಗಳಲ್ಲಿ ಆರೋಪಿಯು ಪಿರ್ಯಾದಿದಾರರನ್ನು ಮದುವೆಯಾಗಲು ಒಪ್ಪಿರುವುದಿಲ್ಲ.

ದಿನಾಂಕ: 4-8-2020ರಂದು ಪಿರ್ಯಾದಿದಾರರು ಒಂದು ಹೆಣ್ಣು ಮಗುವಿಗೆ ಜನ್ಮನೀಡಿರುವುದಾಗಿದೆ. ಇದರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಬಜ್ಪೆ ಪೊಲೀಸರು ಆರೋಪಿ ಉಮೇಶ್ ಸಾಲ್ಯಾನ್ ವಿರುದ್ಧ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಅತ್ಯಾಚಾರ ಪ್ರಕರಣವನ್ನು ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಕಾಂತರಾಜು ಎಸ್.ವಿ.ರವರು ಆರೋಪಿ ಉಮೇಶ್ ಸಾಲ್ಯಾನ್‌ರವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಬಿ. ಅರುಣ್ ಬಂಗೇರ ಮತ್ತು ರಿಹಾನ ಪರ್ವೀನ್, ನಿತೀನ್ ಕುತ್ತಾರ್ ರವರು ವಾದಿಸಿದ್ದರು.