ಫ್ಯಾಟ್‌ನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕುಗಳಿಗೆ ಅನುಗುಣವಾಗಿ ಮಾಸಿಕ ನಿರ್ವಹಣಾ ವೆಚ್ಚ ಪಾವತಿಸಲು ಬದ್ದರು.
ಮಂಗಳೂರು: ಬಹುಮಹಡಿ ಕಟ್ಟಡಗಳಿಗೆ ಏಕರೂಪದ ಮಾಸಿಕ ನಿರ್ವಹಣಾ ವೆಚ್ಚ ವಸೂಲಿ ಮಾಡುವುದರ ವಿರುದ್ಧ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಮಹತ್ವದ ಆದೇಶ ನೀಡಿ ಅಸೋಸಿಯೇಷನ್ ಮಾಡಿರುವ ನಿರ್ಣಯವನ್ನು ವಜಾ ಗೊಳಿಸಿದೆ.
ಮಂಗಳೂರಿನ ಕೊಟ್ಟಾರದ ಬಳಿ ಇರುವ ಇವನ್ನಾ ಹೋಮ್ಸ್ ಬಹುಮಹಡಿ ಕಟ್ಟಡದಲ್ಲಿ 2018 – 2021ರವರೆಗೆ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆ ಕಟ್ಟಡ ಮಾಲಕರು ತಮ್ಮ ಫ್ಯಾಟ್‌ನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕುಗಳಿಗೆ ಅನುಗುಣವಾಗಿ ಮಾಸಿಕ ನಿರ್ವಹಣಾ ವೆಚ್ಚ ಪಾವತಿಸುತ್ತಿದ್ದರು. ಆದರೆ 2021ರಲ್ಲಿ ಕಟ್ಟಡದ ಅಸೋಸಿಯೇಷನ್ ಕಾನೂನಿಗೆ ವಿರುದ್ಧವಾಗಿ ಎಲ್ಲಾ ಫ್ಲ್ಯಾಟ್ ಮಾಲಕರು ಏಕರೂಪದ ಮಾಸಿಕ ನಿರ್ವಹಣಾ ವೆಚ್ಚ ಕೊಡಬೇಕಾಗಿ ನಿರ್ಣಯ ತೆಗೆದುಕೊಂಡಿತ್ತು. ಈ ನಿರ್ಣಯದ ವಿರುದ್ಧ ಈ ಕಟ್ಟಡದಲ್ಲಿ ವಸತಿ ಗೃಹ ಪಡಕೊಂಡ ಮಾಲಕರು ಕೋರ್ಟಿನಲ್ಲಿ ದಾವೆ ಹೊಡಿದ್ದರು.
ವಾದಿ ಮತ್ತು ಪ್ರತಿವಾದಿಯು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ಸಾಕ್ಷಿ ವಿಚಾರಣೆಯನ್ನು ಪರಿಗಣಿಸಿದ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ 1972ನೇ ಅಪಾರ್ಟ್‌ಮೆಂಟ್ ಮಾಲಕತ್ವ ಕಾಯ್ದೆಯನ್ವಯ ಮಾಲಕರು ತಮ್ಮ ಫ್ಲ್ಯಾಟ್‌ನ ವಿಸ್ತೀರ್ಣ ಅಥವಾ ಶೇಕಡಾವಾರು ಅವಿಭಜಿತ ಹಕ್ಕುಗಳ ಅನುಸಾರವಾಗಿ ಮಾಸಿಕ ನಿರ್ವಹಣಾ ವೆಚ್ಚ ಪಾವತಿಸಲು ಬದ್ಧರೇ ಹೊರತು ಎಲ್ಲಾ ಫ್ಲ್ಯಾಟ್‌ಗಳ ಮಾಲಕರು ಏಕರೂಪದ ವಂತಿಗೆಯನ್ನು ನೀಡಬೇಕಾಗಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಅಸೋಸಿಯೇಷನ್ ಮಾಡಿದ ನಿರ್ಣಯವನ್ನು ವಜಾ ಗೊಳಿಸಿದೆ
[ವಸತಿ ಸಂಘಗಳನ್ನು ನಿರ್ವಹಿಸುವ ನಿವಾಸಿಗಳ ಕಲ್ಯಾಣ ಸಂಘಗಳು ಮತ್ತು ಕಾನೂನುಬದ್ಧವಾಗಿ ಚುನಾಯಿತ ಸಂಸ್ಥೆಗಳು, ನಿವಾಸಿಗಳಿಂದ ಅವರ ಫ್ಲಾಟ್‌ಗಳ ಗಾತ್ರದ ಆಧಾರದ ಮೇಲೆ ನಿರ್ವಹಣಾ ಮೊತ್ತವನ್ನು ವಿಧಿಸಲು ಉಚಿತವಾಗಿದೆ ಎಂದು ತೆಲಂಗಾಣ ರಾಜ್ಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಈ ಹಿಂದೆಯೇ (2018 ರಲ್ಲಿ) ತೀರ್ಪು ನೀಡಿದೆ. ವಿ.ಶ್ರೀಕಾಂತ್ ವರ್ಸಸ್ ಇಂಡಿಯಾ ಬುಲ್ಸ್ ಸೆಂಟ್ರಮ್ ಮಾಲೀಕರ ಕ್ಷೇಮಾಭಿವೃದ್ಧಿ ಸಹಕಾರ ಸಂಘದ ಪ್ರಕರಣದಲ್ಲಿ ಹೌಸಿಂಗ್ ಸೊಸೈಟಿಗಳು ಎಲ್ಲ ಸದಸ್ಯರಿಗೂ ಏಕರೂಪದ ನಿರ್ವಹಣಾ ಶುಲ್ಕ ವಿಧಿಸಬೇಕು ಎಂದು ಹೈದರಾಬಾದ್ ಜಿಲ್ಲಾ ವೇದಿಕೆ ನೀಡಿದ ಹಿಂದಿನ ತೀರ್ಪಿಗೆ ರಾಜ್ಯ ಆಯೋಗದ ಆದೇಶ ವ್ಯತಿರಿಕ್ತವಾಗಿದೆ. ದೊಡ್ಡ ಫ್ಲಾಟ್‌ಗಳ ಮಾಲೀಕರು ಹೆಚ್ಚಿನ ಸಾಮಾನ್ಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ, ಏಕೆಂದರೆ ಅವರು ಹೆಚ್ಚು ಜನರಿಗೆ ಅವಕಾಶ ಕಲ್ಪಿಸುತ್ತಾರೆ ಎಂದು ರಾಜ್ಯ ಆಯೋಗ ಹೇಳಿದೆ.}