ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಹಗ್ಗಜಗ್ಗಾಟ ಮುಂದುವರಿದಿರುವ ನಡುವೆಯೇ ಚನ್ನಪಟ್ಟಣ ತಾಲೂಕು ಬಿಜೆಪಿ ಕಚೇರಿಯಲ್ಲಿ ಆರೇಳು ತಿಂಗಳುಗಳಿಂದ ರಾರಾಜಿಸುತ್ತಿದ್ದ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿದ್ದ ಬ್ಯಾನರ್‌ನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೇಳು ತಿಂಗಳೊಳಗಾಗಿಯೇ ಮೈತ್ರಿಯಲ್ಲಿ ಮುನಿಸು ಮನೆ ಮಾಡಿದೆ.
ಎನ್‌ಡಿಎ ಅಭ್ಯರ್ಥಿ ಸಂಬಂಧ ಪೈಪೋಟಿ ಮುಂದುವರಿದಿದ್ದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶಗೊಂಡು, ಬಂಡಾಯ ಸ್ಫರ್ಧೆಯ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ತಾಲೂಕು ಬಿಜೆಪಿ ಕಚೇರಿಯಲ್ಲಿ ಅಳವಡಿಸಲಾಗಿದ್ದ ಜೆಡಿಎಸ್ ನಾಯಕರಿದ್ದ ಬ್ಯಾನರ್ ಏಕಾಏಕಿ ತೆರವುಗೊಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.