ಉಳ್ಳಾಲ ಕಲ್ಲಾಪು ನೇತ್ರಾವತಿ ಸೇತುವೆ ಬಳಿ ನಡೆದ ಬೈಕ್ ಅಪಘಾತದಲ್ಲಿ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಮೃತಪಟ್ಟ ಯುವಕನನ್ನು ಬಂಟ್ವಾಳ ಲೊರೊಟ್ಟೋ ಪದವು ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರೀಸ್ ಎಂದು ಗುರುತಿಸಲಾಗಿದೆ. ಈತ ದೇರಳಕಟ್ಟೆ ಪಿ.ಎ ಕಾಲೇಜಿನ ಫಾರ್ಮಸಿ ಕಲಿಯುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಸಹ ಸವಾರ ಮುಹಮ್ಮದ್ ಶಾಕೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.