ಕಡಬ ಕೋಡಿಂಬಾಳದಲ್ಲಿ ನಡೆದ ದುರ್ಘಟನೆ: ಚಲಿಸುತ್ತಿದ್ದ ಆಕ್ಟಿವಾ ಮೇಲೆ ಭಾರಿ ಗಾತ್ರದ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವು.

ಕರಾವಳಿ

ಕಡಬ-ಪಂಜ ರಸ್ತೆಯ ಕೋಡಿಂಬಾಳ ಸಮೀಪದ ಪುಳಿಕುಕ್ಕು ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದ ಅಘಾತಕಾರಿ ಘಟನೆ. ಎಡಮಂಗಲ ಗ್ರಾಮದ ದೇವಸ್ಯ ಸುಬ್ಬಣ್ಣ ಗೌಡರ ಪುತ್ರ ಎಡಮಂಗಲ ಸಿ.ಎ.ಬ್ಯಾಂಕಿನ ಪಿಗ್ಮಿ ಸಂಗ್ರಾಹಕ ಸೀತಾರಾಮ ಗೌಡ(58) ಮೃತಪಟ್ಟ ಸವಾರ.

ದೀಪಾವಳಿ ಪ್ರಯುಕ್ತ ಮನೆಯಲ್ಲಿ ದೈವಕ್ಕೆ ಹರಕೆ ಇದ್ದುದರಿಂದ ಕೋಳಿ ತರಲು ಕಡಬಕ್ಕೆ ಹೋಗಿ ತನ್ನ ಮನೆಗೆ ಹಿಂತಿರುಗುವಾಗ ರಸ್ತೆ ಬದಿಯ ಭಾರಿ ಗಾತ್ರದ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಸವಾರ ಸೀತಾರಾಮ ಗೌಡರ ತಲೆ ಮೇಲೆಯೇ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.