ಫ್ಯಾಕ್ಟ್ ಚೆಕ್| ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ವಿವಾಹವಾಗಿದ್ದು ಸಿಂಧಿ ಹಿಂದೂ ಯುವಕ ಅನಿಶ್. ಆತ ಮುಸ್ಲಿಂ ಅಲ್ಲ.!

ರಾಷ್ಟ್ರೀಯ

ಈಗಿನ ಜಮಾನದ್ದು ಸೋಷಿಯಲ್ ಮೀಡಿಯಾ ಯುಗ. ಯಾವುದು ಸತ್ಯ, ಯಾವುದು ಸುಳ್ಳು ಅನ್ನುವುದು ಗೊತ್ತಾಗುವ ಮುನ್ನವೇ ವೈರಲ್ ಆಗಿ ಬಿಡುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಬರುವುದೇ ನಿಜವೆಂದು ನಂಬಿ ಫಾರ್ವರ್ಡ್ ಮಾಡಿ ಬಿಡುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಕೋಟಾದ ಉದ್ಯಮಿಯೋರ್ವರ ಪುತ್ರ ಮೊಹಮ್ಮದ್ ಅನೀಶ್ ಎಂಬ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದಾರೆ ಎಂದು ಪೋಸ್ಟ್ ವೈರಲ್ ಆಗಿತ್ತು.

ಆದರೆ ಇದರ ಸತ್ಯಾಂಶ ತಿಳಿದಾಗ ವೈರಲ್ ಆಗಿರುವ ಪೋಸ್ಟ್ ಸುಳ್ಳು ಎಂಬುವುದು ಗೊತ್ತಾಗಿದೆ. ನವೆಂಬರ್ 12, 2024 ರಂದು ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಸಿಂಧಿ ಹಿಂದೂ ಹುಡುಗ ಅನಿಶ್ ರಜನಿ ಎಂಬಾತನನ್ನು ವಿವಾಹವಾಗಿರುವುದಾಗಿ ವರದಿಯಾಗಿದೆ. ಬಿಜೆಪಿಯ ಪ್ರಮುಖರು, ಗಯಾದ ಮಾಜಿ ಸಂಸದರಾದ ಹರಿ ಮಾಂಝಿ ತನ್ನ ಎಕ್ಸ್ ಖಾತೆಯಲ್ಲಿ ಓಂ ಬಿರ್ಲಾ ಪುತ್ರಿಯ ವಿವಾಹದ ಆಮಂತ್ರಣ ಕಾರ್ಡ್ ಅನ್ನು ಹಂಚಿ ವದಂತಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಅಂಜಲಿ ಬಿರ್ಲಾ ಮದುವೆಯಾಗಿರುವ ವರ ಕೋಟಾದ ಪ್ರತಿಷ್ಠಿತ ಉದ್ಯಮಿಯ ಕುಟುಂಬಕ್ಕೆ ಸೇರಿದವನಾಗಿದ್ದು, ಆತ ಸಿಂಧಿ ಹಿಂದೂ ಆಗಿರುತ್ತಾನೆ. ಓಂ ಬಿರ್ಲಾ ಪುತ್ರಿ ಅಂಜಲಿ ಬಿರ್ಲಾ ಬಗ್ಗೆ ಈ ಹಿಂದೆಯೂ ಫೇಕ್ ಸುದ್ಧಿಗಳು ವೈರಲ್ ಆಗಿತ್ತು. ನಾಗರಿಕ ಸೇವೆಗಳ ಪರೀಕ್ಷೆಗೆ (ಸಿಎಸ್ ಇ) ಹಾಜರಾಗದೆ ಐಎಎಸ್ ಆಗಿದ್ದಾಳೆ ಎಂದಾಗಿತ್ತು ಆ ಸುದ್ದಿ.

ಆದರೆ ಇದೀಗ ಆಕೆ ಮದುವೆಯಾಗಿರುವುದು ಮುಸ್ಲಿಂ ಯುವಕನನ್ನು ಅಲ್ಲ. ಸಿಂಧಿ ಹಿಂದೂ ಯುವಕನನ್ನು ಎಂಬುದು ಸತ್ಯ. ವೈರಲ್ ಆಗುತ್ತಿರುವ ಸುದ್ದಿ ಫೇಕ್ ಆಗಿರುತ್ತದೆ.