ಮಹಾರಾಷ್ಟ್ರ: ಮಹಾ ಆಘಾದಿ ಲಗಾಡಿ.. ಬಿಜೆಪಿ ಸುನಾಮಿ..!

ರಾಷ್ಟ್ರೀಯ

ಮೋದಿ-ಷಾ ಇಲ್ಲದೆಯೂ ರಾಜ್ಯ ಗೆಲ್ಲಬಹುದು ಅನ್ನುವ ಸಂದೇಶ ರವಾನಿಸಿದ ಆರ್ ಎಸ್ ಎಸ್.!

ಜಾರ್ಖಂಡ್: ಬಿಜೆಪಿಗೆ ಬಿಗ್ ಶಾಕ್.!

ದೇಶದ ಗಮನ ಸೆಳೆದಿದ್ದ ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಇಂಡಿಯಾ ಮೈತ್ರಿಕೂಟ ಮಕಾಡೆ ಮಲಗಿದೆ. ಎನ್ ಡಿಎ ಒಕ್ಕೂಟ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ಅದರಲ್ಲೂ ಬಿಜೆಪಿ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ ಸುನಾಮಿಯಂತೆ ಎದ್ದು ನಿಂತಿದೆ. ಮಹಾಯುತಿ ವರ್ಸಸ್ ಮಹಾ ಆಘಾದಿ ಲಡಾಯಿಯಲ್ಲಿ ಬಿಜೆಪಿ ಮೈತ್ರಿಕೂಟ ಕೈ ಮೇಲಾಗಿದೆ.

ಮಹಾರಾಷ್ಟ್ರ ದೇಶದ ಫೈನಾನ್ಸಿಯಲ್ ರಾಜಧಾನಿ ಅಂದರೂ ತಪ್ಪಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾ ಆಘಾದಿ ಮೈತ್ರಿಕೂಟ 30 ಸ್ಥಾನ ಪಡೆಯುವ ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಉದ್ಧವ್ ಠಾಕ್ರೆ, ಶರದ್ ಪವಾರ್ ರಂತಹ ದಿಗ್ಗಜರ ಎದುರು ಬಿಜೆಪಿ ದಿಗ್ವಿಜಯ ಸಾಧಿಸಿ ತನ್ನ ಅಸಲಿ ಪವರ್ ತೋರಿಸಿದೆ. ಒಟ್ಟಾರೆ ಚುನಾವಣೆ ಫಲಿತಾಂಶ
ಶಿವಸೇನೆಗೆ ತೀವ್ರ ಹೊಡೆತ ನೀಡಿದ್ದು, ಶಿವಸೇನೆ ಬಿಕ್ಕಟ್ಟಿನಿಂದ ಮತದಾರರು ರೋಸಿ ಹೋಗಿ ಗೆಲ್ಲುವ ಅವಕಾಶ ಇರುವ ಪ್ರಬಲ ಬಿಜೆಪಿಗೆ ಮಣೆ ಹಾಕಿದ್ದಾರೆ. ಮಹಾರಾಷ್ಟ್ರ ಫಲಿತಾಂಶ ಇಂಡಿಯಾ ಮೈತ್ರಿಕೂಟದಲ್ಲಿ ದೊಡ್ಡ ಬಿರುಕು ಮೂಡುವ ಸಾಧ್ಯತೆ ಇದ್ದು, ಉದ್ಧವ್ ಬಣ ಮತ್ತೆ ಬಿಜೆಪಿ ಜೊತೆ ಕೈ ಮೀಲಾಯಿಸುತ್ತದಾ ಅನ್ನುವ ಚರ್ಚೆ ಶುರುವಾಗಿದೆ. ಇನ್ನು ದೇಶದ ಚುನಾವಣಾ ಚಾಣಕ್ಯ ಎಂದೇ ಕರೆಯಿಸಿಕೊಳ್ಳುವ ಶರದ್ ಪವಾರ್ ಪಕ್ಷ ತೀವ್ರ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ತೀಲಾಂಜಲಿ ಇಡುತ್ತರಾ ಕಾದುನೋಡಬೇಕಿದೆ. ಈ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಇನ್ನು ಮಹಾರಾಷ್ಟ್ರದಲ್ಲಿ ಮೋದಿ ಮೇನಿಯಾಕ್ಕಿಂತ ಇಲ್ಲಿ ವರ್ಕೌಟ್ ಆಗಿದ್ದು ಆರ್ ಎಸ್ ಎಸ್ -ಬಿಜೆಪಿ ಜುಗಲ್ ಬಂದಿ. ದೇವೇಂದ್ರ ಘಡ್ನವೀಸ್ -ಆರ್ ಎಸ್ ಎಸ್ ನಾಯಕರ ನಡುವಿನ ವಿಶ್ವಾಸಾರ್ಹತೆ ಪಕ್ಷವನ್ನು ಅಭೂತಪೂರ್ವ ಜಯದ ದಡಕ್ಕೆ ತಲುಪಿಸಿದೆ. ಮಹಾ ಆಘಾದಿ ಮೈತ್ರಿಕೂಟ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.

ಇಡೀ ದೇಶವನ್ನು ಮೋದಿ- ಷಾ ಹೆಸರಿನಲ್ಲಿ ಗೆಲ್ಲಲು ಸಾಧ್ಯವಿಲ್ಲ. ಆರ್ ಎಸ್ ಎಸ್ ಎಳೆದ ಗೆರೆಗೆ ಬಿಜೆಪಿ ದಾಟಲೇ ಇಲ್ಲ. ಎಲ್ಲಾ ನಿರ್ಣಾಯಕ ಪಾತ್ರ ಆರ್ ಎಸ್ ಎಸ್ ನದ್ದಾಗಿತ್ತು. ಮೋದಿ ಷಾ ಚುನಾವಣಾ ಪ್ರಚಾರಕ್ಕೆ ಬಂದಿದ್ದೇ ಕೆಲವು ಕಡೆ. ಆದರೆ ನಿತಿನ್ ಗಡ್ಕರಿ 72 ಕಡೆ ಪ್ರಚಾರ ರ್ಯಾಲಿ ನಡೆಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡದೆ ಸೈಲೆಂಟಾಗಿದ್ದ ಆರ್ ಎಸ್ ಎಸ್ ಮೋದಿ -ಷಾ ಜೋಡಿ ಇಲ್ಲದೆಯೂ ಬಿಜೆಪಿ ಗೆಲ್ಲಬಹುದು ಎಂಬುದನ್ನು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ಗೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದೆ.

ಜಾರ್ಖಂಡ್ ನಲ್ಲಿ ಎಲ್ಲಾ ಸಮೀಕ್ಷೆಗಳು ಉಲ್ಟಾಪಲ್ಟಾ ಆಗಿದೆ. 2000 ಇಸವಿಯಲ್ಲಿ ಬಿಹಾರದಿಂದ ಬೇರ್ಪಟ್ಟು ಜಾರ್ಖಂಡ್ ಹೊಸ ರಾಜ್ಯವಾಗಿ ಉದಯಿಸಿತ್ತು. ಈ ಬಾರಿ ಜಾರ್ಖಂಡ್ ನಲ್ಲಿ ಬಿಜೆಪಿ ರಾಜ್ಯಭಾರ ನಡೆಸಲಿದೆ ಎಂದು ಹೇಳಲಾಗಿತ್ತು. ಆದರೆ ಫಲಿತಾಂಶ ಕಾಂಗ್ರೆಸ್ ಮೈತ್ರಿಕೂಟ ಪರವಾಗಿ ಬಂದಿದೆ. ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಆರ್ ಜೆಡಿ ಮೈತ್ರಿಕೂಟ ಗದ್ದುಗೆ ಏರಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ರನ್ನು ಹಣಿಯಲು ಬಿಜೆಪಿ ಎಷ್ಟೇ ಪ್ರಯತ್ನಪಟ್ಟರೂ ಆದಿವಾಸಿ ನಾಡಲ್ಲಿ ಮತದಾರ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ.

ಒಟ್ಟಾರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಅದರ ಪೂರ್ಣ ಕ್ರೆಡಿಟ್ ಮೋದಿ ಷಾ ಗೆ ದೊರಕುತ್ತಿಲ್ಲ. ಆರ್ ಎಸ್ ಎಸ್ ಆ ಸ್ಥಾನವನ್ನು ಅಲಂಕರಿಸಿದೆ.