ಶಾಸಕ ಉಮಾನಾಥ ಕೋಟ್ಯಾನ್ ರವರೇ ನೀವು ‘ಸೌಮ್ಯ’ ಆದರೆ ಸಾಕಾ..?

ಕರಾವಳಿ

ಇಲ್ಲಿನ ಉಪ ತಹಶೀಲ್ದಾರ್ ಗಳ ದರ್ಬಾರ್ ಗೆ ಬ್ರೇಕ್ ಹಾಕುವವರು ಯಾರು.?

ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ರವರ ಬಗ್ಗೆ ಸ್ಥಳೀಯವಾಗಿ ಒಳ್ಳೆಯ ಅಭಿಪ್ರಾಯವಿದೆ. ಪಕ್ಷ ಬಿಜೆಪಿಯಾದರೂ ನ್ಯಾಯದ ವಿಚಾರದಲ್ಲಿ ಎಲ್ಲರಿಗೂ ಒಂದೇ. ಅನುದಾನ ಕೂಡ ಹಾಗೆನೇ. ಓಟು ಹಾಕಿದವರು, ಹಾಕದವರು ಅನ್ನುವ ಭೇದಭಾವ ತೋರದೆ ಎಲ್ಲರನ್ನು ಸಮಾನ ಕಾಣುತ್ತಾರೆ. ಸೌಮ್ಯ ಸ್ವಭಾವದವರು ಅನ್ನುವ ಮಾತಿದೆ. ಆದರೆ ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡುವ ಕೆಲಸ ಮಾಡಬೇಕು. ಮೂಡಬಿದ್ರೆ ತಾಲೂಕು ಆಡಳಿತ ಸೌಧದಲ್ಲಿ ಪರ್ಮನೆಂಟ್ ತಹಶೀಲ್ದಾರ್ ಇಲ್ಲ. ಮೂಲ್ಕಿಯ ತಹಶೀಲ್ದಾರ್ ರಿಗೆ ಚಾರ್ಜ್ ಕೊಡಲಾಗಿದೆ. ಬೆದ್ರದ ಮಿನಿ ವಿಧಾನಸೌಧದಲ್ಲಿ ಉಪ ತಹಸೀಲ್ದಾರರು (ಡಿ.ಟಿ) ಗಳದ್ದೇ ಕಾರುಬಾರು. ಇವರು ಆಡಿದ್ದೇ ಆಟ. ಅದೇ ಮಿನಿ ವಿಧಾನಸೌಧದಲ್ಲಿ ಕಚೇರಿ ಹೊಂದಿರುವ ಶಾಸಕರಿಗೆ ಇವ್ಯಾವುದೂ ಕಣ್ಣಿಗೆ ಕಾಣುವುದಿಲ್ಲವೇ?

ಅದು ತಮ್ಮ ತಾಲೂಕಿನ ಹಾಗೂ ನಿಮ್ಮದೇ ವಿಧಾನಸಭಾ ಕ್ಷೇತ್ರದ ಜನತೆ ಇಲ್ಲಿಯ ಕೆಲಸ ಕಾರ್ಯಗಳಿಗೆ ಸುತ್ತಾಡಿ, ಲಂಚ ಕೊಟ್ಟು ಹೈರಣಾಗಿದ್ದಾರೆ. ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಉಪ ತಹಶೀಲ್ದಾರ್ ಗಳಿಬ್ಬರು ಐದಾರು ವರ್ಷಗಳಿಂದ ಇಲ್ಲೇ ಝಂಡಾ ಹೂಡಿದ್ದಾರೆ. ರೆಕಾರ್ಡ್ ರೂಂ, ಸರ್ವೇ ಇಲಾಖೆಯಲ್ಲಿ ಬಕಾಸುರರೇ ತುಂಬಿಕೊಂಡಿದ್ದಾರೆ. ಬ್ರೋಕರ್ ಗಳ ಅಡ್ಡೆಯಾಗುತ್ತಿದೆ. ಇದೆಲ್ಲ ಗೊತ್ತಿದ್ದು ಕಣ್ಮುಚ್ಚಿ ಕೂತಿದ್ದೀರಾ? ಇನ್ನಾದರೂ ಕ್ರಮ ಕೈಗೊಳ್ಳಿ.