ಸತತ 6 ಬಾರಿ SGFI ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಉಡುಪಿಯ ಪ್ರನುಷಾ

ಕರಾವಳಿ

ಉಡುಪಿ : ಉಡುಪಿ ಮಠದಬೆಟ್ಟು ಮಹೇಶ್ ಪೂಜಾರಿ ಮತ್ತು ಪ್ರಮೀಳಾ ದಂಪತಿಗಳ ಪುತ್ರಿ ಕಲ್ಯಾಣಪುರ ಮಿಲಾಗ್ರೀಸ್ ಪಿ. ಯು ಕಾಲೇಜು ವಿದ್ಯಾರ್ಥಿನಿ ಹಾಗೂ ಪಿಕೆಸಿ ತಂಡದ ಕ್ರೀಡಾಪಟು ಪ್ರನುಷಾ ಎಂ. ಪೂಜಾರಿ ರಾಜ್ಯದಲ್ಲಿ ವಿಶೇಷ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ದ ರಾಷ್ಟ್ರಮಟ್ಟದ ಆಯ್ಕೆಗೆ ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸುವ ಕರಾಟೆ ಪಂದ್ಯಾವಳಿಯಲ್ಲಿ ಸತತ ಆರು ವರ್ಷ ಜಿಲ್ಲಾ ಮಟ್ಟದಿಂದ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ ಪ್ರತಿನಿಧಿ ಆರು ಬಾರಿ ಚಿನ್ನದ ಪದಕ ಪಡೆದು ವಿಶೇಷ ಸಾಧನೆಯನ್ನು ಮಾಡಿದ್ದಾರೆ.

ಇತ್ತೀಚೆಗೆ ಉಡುಪಿಯ ಮಿಲಾಗ್ರೀಸ್ ಪದವಿ ಪೂರ್ವ ಕಾಲೇಜಿನಿಂದ ಜಿಲ್ಲೆಯನ್ನು ಪ್ರತಿನಿಧಿಸಿ ದಾವಣಗೆರೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮುಖಾಂತರ ದಾಖಲೆಯನ್ನು ನಿರ್ಮಿಸಿ ಸತತ ಆರು ಬಾರಿ ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದು ವಿಜೇತ ಕ್ರೀಡಾಪಟುವಿಗೆ ಪಿಕೆಸಿ ಪರ್ಕಳ ಸಂಸ್ಥೆ ಪ್ರವೀಣ ಸುವರ್ಣ ಶೋಧನ್ ಸೂರಜ್ ಆದರ್ಶ್ ಮತ್ತು ಪೋಷಕರು, ಸುಮಾ ಸತೀಶ್ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಮತ್ತು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷ ಶಿವಮೊಗ್ಗ ವಿನೋದ್ ಶುಭ ಹಾರೈಸಿದ್ದಾರೆ.