ತೀವ್ರ ಕುತೂಹಲ ಕೆರಳಿಸಿರುವ ಪ್ರವೀಣ್ ಕುಮಾರ್ ಮಾವಿನಕಾಡು ವಿರಚಿತ ‘ಕತ್ತಲೆ ಜಗತ್ತು’ ಕೃತಿ.
ಟಿಕೆಟ್ ವಂಚಿತ ಪ್ರತಾಪ್ ಸಿಂಹ ಕುರಿತ ‘ಕತ್ತಲೆ ಜಗತ್ತು’ ಪುಸ್ತಕ
ಬೆತ್ತಲೆ ಜಗತ್ತಿನ ನಿದ್ದೆಗೆಡಿಸಿದ ‘ಕತ್ತಲೆ ಜಗತ್ತು’
ಬೆಂಗಳೂರು: ಪತ್ರಕರ್ತ ಹಾಗೂ ‘ಬೆತ್ತಲೆ ಜಗತ್ತು’ ಅಂಕಣ ಖ್ಯಾತಿಯ ಪ್ರತಾಪ್ ಸಿಂಹ ಎರಡು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸಂಸತ್ತಿಗೆ ಆಯ್ಕೆಗೊಂಡಿದ್ದರಾದರೂ ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಈ ಟಿಕೆಟ್ ವಂಚಿತರಾಗಲು ಕಾರಣ ಏನು ಎಂಬ ಕುತೂಹಲ ಎಲ್ಲರದ್ದಾಗಿದೆ. ಈ ಕುರಿತ ನಿಗೂಢ ರಹಸ್ಯಗಳನ್ನು ಪ್ರವೀಣ್ ಕುಮಾರ್ ಮಾವಿನಕಾಡು ಅವರು ‘ಕತ್ತಲೆ ಜಗತ್ತು’ ಕೃತಿ ಮೂಲಕ ಬಯಲು ಮಾಡಿದ್ದಾರೆ. ಲೇಖಕ, ಅಂಕಣಗಾರ ಪ್ರವೀಣ್ ಕುಮಾರ್ ಮಾವಿನಕಾಡು ಅವರ ಈ ‘ಕತ್ತಲೆ ಜಗತ್ತು’ ಪುಸ್ತಕ ಮಾರುಕಟ್ಟೆಯಲ್ಲಿ ಬಿಸಿ-ಬಿಸಿ ದೋಸೆಯಂತೆ ಬಿಕಾರಿಯಾಗಿದ್ದು, ಅಧಿಕೃತ ಬಿಡುಗಡೆಗೂ ಮುನ್ನವೇ ಸಕತ್ ಸದ್ದೆಬ್ಬಿಸಿದೆ.
‘ಕತ್ತಲೆ ಜಗತ್ತು’ ಈ ಪುಸ್ತಕದಲ್ಲಿ ಪ್ರತಾಪ್ ಸಿಂಹ ಅವರ ನಡೆ-ನುಡಿ-ವಿವಾದಗಳ ಬಗ್ಗೆ ಹೆಚ್ಚಾಗಿ ಸಂಗತಿಗಳು ಇದೆ ಎಂಬ ಕಾರಣಕ್ಕಾಗಿ ಬಾರೀ ಸುದ್ದಿಗೆ ಗ್ರಾಸವಾಗಿದೆ. ಪ್ರತಾಪ್ ಸಿಂಹ ಅವರ ರಾಜಕೀಯ ಎದುರಾಳಿಗಳ ಕೈಯಲ್ಲೇ ಈ ಪುಸ್ತಕ ಹರಿದಾಡುತ್ತಿದ್ದು ಈ ಬೆಳವಣಿಗೆ ಬಗ್ಗೆ ಪ್ರತಾಪ್ ಸಿಂಹ ಅವರು ಗಲಿಬಿಲಿಗೊಂಡಿದ್ದಾರೆ. ಈ ಪುಸ್ತಕದಲ್ಲಿನ ಬರಹಗಳು ತಮ್ಮ ಬಗ್ಗೆ ಅಪರಾಚರ ಮಾಡುವಂತಿದ್ದು ಇದರ ಬಿಡುಗಡೆಗೆ ನಿರ್ಬಂಧ ಕೋರಿ ಪ್ರತಾಪ್ ಸಿಂಹ ಅವರು ಕೋರ್ಟ್ ಮೊರೆಹೋಗಿದ್ದಾರೆ. ಸಧ್ಯಕ್ಕೆ ಬೆಂಗಳೂರಿನ ಸಿವಿಲ್ ಕೋರ್ಟ್ ‘ಕತ್ತಲೆ ಜಗತ್ತು’ ಪುಸ್ತಕದ ಬಿಡುಗಡೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ ಅಷ್ಟರಲ್ಲೇ ಸಾವಿರಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಬಿಕಾರಿಯಾಗಿವೆ ಎನ್ನಲಾಗುತ್ತಿದೆ.
ಸಾಹಿತ್ಯ ಲೋಕದಲ್ಲಿ ಕೌತುಕದ ಕೇಂದ್ರಬಿಂದುವಾಗಿರುವ ‘ಕತ್ತಲೆ ಜಗತ್ತು’ ಪ್ರವೀಣ್ ಕುಮಾರ್ ಮಾವಿನಕಾಡು ಅವರ ಹಲವು ದಿನಗಳ ಪ್ರಯತ್ನದ ಕೂಸು. ಆದರೆ ಈ ಕೃತಿಯು ಪ್ರತಾಪ್ ಅವರ ಬದುಕಿನ ಮಜಲುಗಳತ್ತ ಬೆಳಕು ಚೆಲ್ಲಿದ್ದು, ತಾನು ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈ ವೇ ಕಾರಣಕರ್ತ ಎನ್ನುತ್ತಾ ಬಿಜೆಪಿ ಟಿಕೆಟ್ ಖಚಿತ ಎಂಬಾ ನಿರೀಕ್ಷೆಯಲ್ಲಿದ್ದ ಪ್ರತಾಪರಿಗೆ ಅದು ಹೇಗೆ ಕೈ ತಪ್ಪಿತು ಎಂಬ ಕುತೂಹಲವನ್ನು ಈ ಕೃತಿ ತಣಿಸಿದಂತಿದೆ.
ಈ ನಡುವೆ, ‘ಬೆತ್ತಲೆ ಜಗತ್ತು’ ಎಂಬ ಅಂಕಣದಿಂದ ಖ್ಯಾತಿ ಗಳಿಸಿರುವ ಪ್ರತಾಪ್ ಅವರನ್ನು ಇದೀಗ ‘ಕತ್ತಲೆ ಜಗತ್ತು’ ನಿದ್ದೆಗೆಡಿಸಿದೆ. ಸದ್ಯಕ್ಕೆ ಕೋರ್ಟ್ ತಡೆಯಾಜ್ಞೆಯಿಂದಾಗಿ ಪ್ರತಾಪ್ ಸಿಂಹ ಬಗೆಗಿನ ‘ಕತ್ತಲೆ ಜಗತ್ತು’ ಪುಸ್ತಕ ಬಿಡುಗಡೆಗೆ ಬ್ರೇಕ್ ಬಿದ್ದಿದೆ. ಹೀಗಿದ್ದರೂ ಹರಿದಾಡುತ್ತಿರುವ ಪುಸ್ತಕದ ವಿಚಾರವು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.