ಉಪಸಮರದಲ್ಲಿ ಗೆದ್ದು ಬೀಗಿದ ಕೈ ಗೆ ಈಗ ವಿಧಾನಪರಿಷತ್ ನಾಮ ನಿರ್ದೇಶನದ್ದೇ ಚಿಂತೆ; ಆಕಾಂಕ್ಷಿಗಳಿಂದ ಲಾಬಿ ಜೋರು.!

ರಾಜ್ಯ

ಉಪಸಮರದಲ್ಲಿ ಗೆದ್ದು ಬೀಗುತ್ತಿರುವ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲೀಗ ಮೇಲ್ಮನೆಯ ನಾಮನಿರ್ದೇಶನಕ್ಕೆ ಸಂಬಂಧಿಸಿದ ಚಟುವಟಿಕೆ ಗರಿಗೆದರಿದ್ದು, ತೆರವಾದ ಮತ್ತು ತೆರವಾಗಲಿರುವ ಸ್ಥಾನಗಳಿಗಾಗಿ ಆಕಾಂಕ್ಷಿಗಳಿಂದ ಲಾಬಿ ಬಹಳ ಚೋರಾಗಿ ನಡೆಯುತ್ತಿದೆ. ನೂತನ ಶಾಸಕ ಸಿ.ಪಿ. ಯೋಗೇಶ್ವರ್‌ ರಾಜೀನಾಮೆಯಿಂದ ತೆರವಾದ ಸ್ಥಾನ ಸೇರಿ 3 ಸ್ಥಾನಗಳು ಈಗಾಗಲೇ ಖಾಲಿಯಾಗಿದ್ದು, ಮತ್ತೊಂದು ಸ್ಥಾನ ಜನವರಿಯಲ್ಲಿ ತೆರವಾಗಲಿದೆ. ಇವುಗಳಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ.

ಪರಿಷತ್ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ಪ್ರಮುಖ ನಾಯಕರ ಮೂಲಕ ಪ್ರಭಾವ ಬೀರುತ್ತಿದ್ದಾರೆ. ಈ ಸಂಬಂಧದ ಆಯ್ಕೆಯಲ್ಲೂ ಬಣಗಳ ನಡುವೆ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹೊತ್ತಿಗೆ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಹೇಳಲಾಗುತ್ತಿದೆ.

ವಿ.ಎಸ್‌. ಉಗ್ರಪ್ಪ, ಸಿ.ಎಸ್‌. ದ್ವಾರಕನಾಥ್‌, ಬಾಲರಾಜ ನಾಯ್ಕ, ಬಿ.ಎಲ್‌. ಶಂಕರ್‌, ವಿನಯ ಕಾರ್ತಿಕ್‌, ನಟರಾಜ ಗೌಡ, ಪ್ರಕಾಶ ರಾಠೊಡ್‌, ಯು.ಬಿ. ವೆಂಕಟೇಶ್‌ ಇವರೆಲ್ಲಾ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.