ಗೆಳೆಯನ ಮನೆಗೆ ಬಂದ ಮೂವರು ಯುವಕರು ಕಿಂಡಿ ಅಣೆಕಟ್ಟು ನೀರಿನಲ್ಲಿ ಮೋಜಿನಾಟ ನಡೆಸಲು ಹೋಗಿ ಪ್ರಾಣತೆತ್ತ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೇಣೂರು ಬರ್ಕಜೆ ನದಿಗೆ ಹಾಕಲಾಗಿದ್ದ ಕಿಂಡಿ ಅಣೆಕಟ್ಟು ನೀರಿನಲ್ಲಿ ಮುಳುಗಿ ಮೂವರು ಯುವಕರ ದುರ್ಮರಣ. ವೇಣೂರು ಚರ್ಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೆಳೆಯನ ಮನೆಗೆ ಬಂದಿದ್ದ ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಸಾವಿಗೀಡಾಗಿದ್ದಾರೆ.
ಕಟ್ಟೆ ರೆಸ್ಕ್ಯೂಮ್ ತಂಡದ ಕಾರ್ಯಕರ್ತರು ಅಣೆಕಟ್ಟು ನೀರಿನಲ್ಲಿ ಮುಳುಗಿದ್ದ ಮೂವರು ಯುವಕರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ವೇಣೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.