ಮುಮ್ತಾಜ್ ಅಲಿ ಅನುಸ್ಮರಣೆ ಕಾರ್ಯಕ್ರಮದಲ್ಲಿ ಕೆಲವು ಬ್ಯಾರಿ ಕಾಕಾ.. ಗಳು ನಾಪತ್ತೆ.!

ಕರಾವಳಿ

ರೈಟ್ -ಲೆಪ್ಟ್ ಎಂದು ಕಾಣಿಸಿಕೊಂಡವರೆಲ್ಲ ಮಾಯ..ಮಾಯ!

ಓರ್ವ ವ್ಯಕ್ತಿಯ ಬಳಿ ಸಾಕಷ್ಟು ದುಡ್ಡು, ಅಧಿಕಾರ, ಶ್ರೀಮಂತಿಕೆ ಇದ್ದರೆ ಇರುವೆಗಳು ಮುತ್ತಿಕ್ಕುವಂತೆ ಸ್ನೇಹಿತರ ಬಳಗವೇ ಇರುತ್ತದೆ, ಆತ ಖಾಲಿಯಾದಾಗ ಆತನನ್ನು ಮೂಸುವವರು ಯಾರೂ ಇಲ್ಲ ಎಂದು ಸಾಮಾನ್ಯವಾಗಿ ಜನ ಹೇಳುವುದುಂಟು. ಅದೇ ರೀತಿ ಅಧಿಕಾರ, ಹುದ್ದೆ ಇದ್ದಾಗ ಲೆಫ್ಟ್, ರೈಟ್ ಎಂದು ದೋಸ್ತ್ ಗಳು ಅಡ್ಡಾಡುತ್ತಲೇ ಇರುತ್ತಾರೆ. ಆದರೆ ಆತ ಮರಣವನ್ನಪ್ಪಿದಾಗ ಆತನ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳಲು ಯಾರೂ ಇರುವುದಿಲ್ಲ. ಆತನಿಂದ ಲಾಭ ಪಡೆದವರೇ ಮಾಯವಾಗಿ ಬಿಡುತ್ತಾರೆ.

ಈ ಎಲ್ಲಾ ಪೀಠಿಕೆಗೆ ಮುಖ್ಯ ಕಾರಣ ಇತ್ತೀಚೆಗೆ ಆತ್ಮಹತ್ಯೆಗೈದ ಸಮುದಾಯದ ನಾಯಕ ಮುಮ್ತಾಜ್ ಅಲಿಯವರ ಹೆಸರಿನಲ್ಲಿ ಅವರ ಜಮಾಅತ್, ಸ್ನೇಹಿತ ವರ್ಗ, ಕುಟುಂಬಸ್ಥರು, ಸಂಘ ಸಂಸ್ಥೆಗಳು ಹಲವಾರು ಅನುಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಅವರ ಸರ್ಕಲ್ ನಲ್ಲಿದ್ದ ಅಪ್ತ ವಲಯದ ಕೆಲವು ಬ್ಯಾರಿ ಕಾಕಾ.. ಗಳು ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ.

ಇತ್ತೀಚೆಗೆ ನಗರದ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ಸ್ನೇಹ ಬಳಗದ ವತಿಯಿಂದ ಅನುಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮಕ್ಕೆ ಅವರ ಕೆಲವು ಒಡನಾಡಿಗಳು, ಹಿತೈಷಿಗಳು ಭಾಗವಹಿಸಿದ್ದರು. ಆದರೆ ಅವರ ಸುತ್ತ ಗಿರಾಕಿ ಹೊಡೆದು ತಿರುಗುತ್ತಿದ್ದ ಕೆಲವು ಹೈ ಫೈ ಬ್ಯಾರಿ ಕಾಕಾಗಳು ಕಾರ್ಯಕ್ರಮದಲ್ಲಿ ಭಾಗವಹಿಸದೆ ತಪ್ಪಿಸಿಕೊಂಡಿದ್ದಾರೆ. ಮುಮ್ತಾಜ್ ಅಲಿ ಜೀವಂತವಿದ್ದಾಗ ಹಲವಾರು ಕಾರ್ಯಕ್ರಮಗಳು ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದಿತ್ತು. ಆಲಿ ಸೇರಿದಂತೆ ಅಪ್ತವಲಯದ ಕೆಲವು ಬ್ಯಾರಿ ಕಾಕಾಗಳು ಅವರ ಲೆಫ್ಟ್ ರೈಟ್ ಎಂಬಂತೆ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದರು, ವೇದಿಕೆ ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಅವರ ಹೆಸರಿನಲ್ಲೇ ನಡೆದ ಅನುಸ್ಮರಣೆ ಕಾರ್ಯಕ್ರಮದಲ್ಲಿ ಅವರ ಅತ್ಯಂತ ಹತ್ತಿರದ ಕೆಲವು ಸ್ನೇಹಿತ ವರ್ಗ ನಾಪತ್ತೆಯಾಗಿರುವುದು ಅವರ ಆತ್ಮೀಯ ಬಳಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮುಮ್ತಾಜ್ ಅಲಿ ಒಬ್ಬ ಯಶಸ್ವಿ ಸಂಘಟಕರಾಗಿದ್ದರು. ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟು ಹಾಕಿ ತಮ್ಮ ಆತ್ಮೀಯರನ್ನೆಲ್ಲ ಸಂಘಟನೆಯ ಪದಾಧಿಕಾರಿಯನ್ನಾಗಿ ಮಾಡಿ ಅವರ ಯಶಸ್ಸಿಗೆ ಕಾರಣಕರ್ತರಾಗಿದ್ದರು. ಜಿಲ್ಲೆಯ ವೈಟ್ ಕಾಲರ್ ಬ್ಯಾರಿಗಳಿಗೆಂದೇ ಸಂಘಟನೆಯೊಂದಿದೆ ಅದು ಛೇಂಬರ್.! ಆ ಸಂಘಟನೆಯ ಯಶಸ್ಸಿಗೆ ಮುಖ್ಯ ಕಾರಣ ಮುಮ್ತಾಜ್ ಅಲಿಯವರಾಗಿದ್ದರು. ಅವರ ಆಪ್ತ ವಲಯದ ಕೆಲವು ಕಾಕಾಗಳು ಈ ಛೇಂಬರಲ್ಲಿ ಪರ್ಮನೆಂಟ್ ಬಿದ್ದಿದ್ದರು. ವಿದೇಶ ಪ್ರಯಾಣ, ಕಾರ್ಯಕ್ರಮ ಎಂದೆಲ್ಲಾ ಕೇರಳ, ಬಾಂಬೆ ಸುತ್ತಾಡಲು ಇವರ ಜೊತೆ ಇವರ ಸರ್ಕಲ್ ನಲ್ಲಿದ್ದ ಹೈ ಫೈ ಬ್ಯಾರಿ ಕಾಕಾ ಗಳಿದ್ದರು. ಕಾಕಾಗಳ ಬಳಿ ದುಡ್ಡು ದೌಲತ್ತ್ ಇದ್ದರೂ ಸಮಾಜದಲ್ಲಿ ಹೆಸರು, ವೇದಿಕೆ ಸಿಗಲು ಮುಖ್ಯ ಕಾರಣರಾಗಿದ್ದು ಇದೇ ಮುಮ್ತಾಜ್ ಅಲಿ. ಆದರೆ ಅವರ ಮರಣಾನಂತರ ಇವರೆಲ್ಲ ಕೈ ಬಿಟ್ಟಿದ್ದಾರೆ. ಇವರನ್ನು ವಿಘ್ನ ಸಂತೋಷಿಗಳೆಂದು ಹೇಳದೆ ಬೇರೆ ವಿಧಿಯಿಲ್ಲ.

ಮುಮ್ತಾಜ್ ಅಲಿ ಆತ್ಮಹತ್ಯೆಯ ಹಿಂದೆ ಇವರ ಸರ್ಕಲ್ ನಲ್ಲಿದ್ದ ಕೆಲವು ಬ್ಯಾರಿ ಕಾಕಾಗಳ ಕೈವಾಡವೂ ಇತ್ತು ಎಂಬ ಮಾತು ಚಾಲ್ತಿಯಲ್ಲಿದೆ. ಇದೀಗ ಅವರ ಅನುಸ್ಮರಣೆ ಕಾರ್ಯಕ್ರಮದಲ್ಲಿ ಇವರೆಲ್ಲರೂ ನಾಪತ್ತೆಯಾಗುವ ಮೂಲಕ ಇವರ ಪಾತ್ರದ ಬಗ್ಗೆ ಸಾರ್ವಜನಿಕರಿಂದ ಮತ್ತಷ್ಟು ಸಂಶಯದ ಮಾತುಗಳು ಹರಿದಾಡತೊಡಗಿದೆ. ನೈಜ ಸ್ನೇಹಿತರೆಂದರೆ ಅವರ ಕಷ್ಟಕಾಲದಲ್ಲೂ ಭಾಗಿಯಾಗಬೇಕು. ಆದರೆ ಇವರೆಲ್ಲರೂ ಅವಕಾಶವಾದಿಗಳು ಅನ್ನದೇ ಬೇರೆ ವಿಧಿಯಿಲ್ಲ.