ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಮನೆಗಳಿಗೆ NIAತಂಡ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದೆ. ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಪೊಯ್ಯಗದ್ದೆ ಎಂಬಲ್ಲಿನ ನೌಷಾದ್(27) ಮನೆಗೆ ಇಂದು ಬೆಳಗ್ಗೆ NIA ತಂಡ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ನೌಷಾದ್ ಪತ್ತೆಗಾಗಿ ಈಗಾಗಲೇ ಸುಳಿವು ನೀಡಿದವರಿಗೆ ಎನ್.ಐ.ಎ. 2ಲಕ್ಷ ಬಹುಮಾನ ಘೋಷಿಸಿದೆ.
![](https://i0.wp.com/specialnewsmedia.com/wp-content/uploads/2024/12/IMG-20241205-WA0008.jpg?resize=397%2C547&ssl=1)
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮತ್ತೋರ್ವ ತಲೆಮರೆಸಿಕೊಂಡ ಆರೋಪಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ಪತ್ನಿ ಮತ್ತು ಸಹೋದರನ ಮನೆಗೂ NIAತಂಡ ದಾಳಿ ನಡೆಸಿದೆ. ಸಂಪ್ಯ ಠಾಣಾ ವ್ಯಾಪ್ತಿಯ ಕೆಯ್ಯೂರಿನಲ್ಲಿರುವ ಅಬೂಬಕ್ಕರ್ ಸಿದ್ದೀಕ್ ಪತ್ನಿಯ ಮನೆಗೆ ದಾಳಿ ನಡೆಸಿದ್ದು ಎನ್.ಐ.ಎ.ತಂಡ ಬಳಿಕ
ಕೆಯ್ಯೂರು ಅರಿಕ್ಕಿಲ ಎಂಬಲ್ಲಿರುವ ಅಬೂಬಕ್ಕರ್ ಸಿದ್ದೀಕ್ ಸಹೋದರನ ಮನೆಗೂ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಪ್ರವೀಣ್ ನೆಟ್ಟಾರ್ ಕೊಲೆಯಾದ ಸಂದರ್ಭ ಅಬೂಬಕ್ಕರ್ ಸಿದ್ದೀಕ್ ಸ್ಥಳದಲ್ಲಿದ್ದು ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ್ದಾನೆಂಬ ಆರೋಪ ಈತನ ಮೇಲಿದೆ. ಸಂಪ್ಯ ಠಾಣಾ ಪೊಲೀಸರು ಎನ್.ಐ.ಎ.ತಂಡಕ್ಕೆ ಸಹಕಾರ ನೀಡಿದ್ದಾರೆ.