ಕಾರ್ಕಳ ಮುಟ್ಲುಪಾಡಿ, ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಶುಕ್ರವಾರ(ಡಿ.13) ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ.
ಶುಕ್ರವಾರ ಮಂಡ್ಯದಲ್ಲಿ ನಡೆಯುತ್ತಿದ್ದ ಕಬಡ್ಡಿಯಲ್ಲಿ ಭಾಗವಹಿಸಿದ್ದ ಪ್ರೀತಂಗೆ ಆಟವಾಡುತ್ತಿದ್ದಾಗಲೇ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಹೃದಯಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮೃತರು ತಾಯಿ ಮತ್ತು ಸಹೋದರನ ಜೊತೆಗೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಚಿಕ್ಕಂದಿನಿಂದಲೇ ಕಬಡ್ಡಿ ಆಟವನ್ನು ಮೆಚ್ಚಿಕೊಂಡಿದ್ಜ ಪ್ರೀತಂ ತನ್ನ ಸಾಧನೆಯಿಂದಲೇ ಉತ್ತುಂಗ ಶಿಖರವನ್ನೇರಿದ್ದರು ಎಂಬುದನ್ನು ಸ್ನೇಹಿತರು ಖಚಿತಪಡಿಸಿದ್ದಾರೆ. ಪ್ರೀತಂ ಶೆಟ್ಟಿಯವರು ಸಾಯಿರಾಂ ಫ್ರೆಂಡ್ಸ್ ಗುರುವಾಯನಕೆರೆ ತಂಡದ ಆಹ್ವಾನಿತ ಆಟಗಾರ, ಎಸ್.ಡಿ.ಎಂ.ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು.