ಅನಿವಾಸಿ ಉದ್ಯಮಿ ಹಾಜಿ ಅಬ್ದುಲ್ ಸಲಾಂ ಕೊಲೆ ಪ್ರಕರಣ: ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ

ಕರಾವಳಿ

ಅನಿವಾಸಿ ಉದ್ಯಮಿ ಅಬ್ದುಲ್ ಸಲಾಂ ಹಾಜಿ ಕೊಲೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.50 ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಕಾಸರಗೋಡು ಮೊಗ್ರಾಲ್ ಪೆಟ್ಟಾಡಿ ಮೂಲೆಯ ನಿವಾಸಿ ಹಾಜಿ ಅಬ್ದುಲ್ ಸಲಾಂ ಅವರನ್ನು 2017 ಏಪ್ರಿಲ್ 30 ರಂದು ಮಾಲಿಯಂಗರ ಕೋಟೆ ಸಮೀಪ ಕೊಲೆಗೈಯ್ಯಲಾಗಿತ್ತು. ಅವರ ಜೊತೆಗಿದ್ದ ನೌಶಾದ್ ಎಂಬಾತ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದ.

ಅಬ್ದುಲ್ ಸಲಾಂ ಜೊತೆಗಿದ್ದವರು ಸಿದ್ದೀಕ್ ನ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಅಬ್ದುಲ್ ಸಲಾಂ ಹಾಜಿ ಅವರನ್ನು ಕೊಂದಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿತ್ತು.

ಕೊಲೆಗೆ ಸಂಬಂಧಿಸಿದಂತೆ 114 ಸಾಕ್ಷಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು. ಆರೋಪಿಗಳಾದ ಕುಂಬಳೆ ಬದ್ರಿಯಾನಗರದ ಸಿದ್ದೀಕ್, ಉಮರ್ ಫಾರೂಕ್, ಪೆರುವಾಡಿನ ಶಹೀರ್, ಪೆರಾಲ್ ನ ನಿಯಾಝ್, ಪೆರುವಾಡ್ ಕೋಟೆಯ ಲತೀಫ್, ಅರಿಕ್ಕಾಡ್ ಬಂಬ್ರಾಣದ ಹರೀಶ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅರುಣ್ ಕುಮಾರ್, ಖಲೀಲ್ ಎಂಬವರನ್ನು ಖುಲಾಸೆಗೊಳಿಸಲಾಗಿದೆ.