ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಗಣನೀಯ ಇಳಿಕೆ: ಎಐಎಸ್ ಎಚ್ ಇ ವರದಿಯಲ್ಲಿ ಉಲ್ಲೇಖ

ರಾಷ್ಟ್ರೀಯ

ಭಾರತ ಕೋಮು ಧ್ರುವೀಕರಣದತ್ತ ಸಾಗುತ್ತಿರುವುದು ಇಂತಹ ಬೆಳವಣಿಗೆಗೆ ಕಾರಣ ಎಂದ ವರದಿ

ಭಾರತದ ಉನ್ನತ ಶಿಕ್ಷಣದಲ್ಲಿ 2021-22 ರ ಅವಧಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಶೇಕಡಾ 4.87 ಕ್ಕೆ ಇಳಿಕೆಯಾಗಿದೆ ಎಂದು ಎಐಎಸ್ ಎಚ್ ಇ ವರದಿಯೊಂದು ಬಹಿರಂಗಪಡಿಸಿದೆ.

ದಾಖಲಾದ 43,268,181 ವಿದ್ಯಾರ್ಥಿಗಳಲ್ಲಿ ಮುಸ್ಲಿಮರು ಕೇವಲ 2,108,033 ಇದ್ದಾರೆ. ಇದು 2020 ರಲ್ಲಿ ಶೇಕಡಾ 5.5 ಇದ್ದುದು 2021 ರಲ್ಲಿ ಶೇಕಡಾ 4.6 ಕ್ಕೆ ನಿರಂತರ ಇಳಿಕೆಯಾಗಿರುವುದನ್ನು ಸೂಚಿಸಿದೆ.

ರಾಷ್ಟ್ರೀಯ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಶೇಕಡಾ 24.1. ಇದಕ್ಕೆ ಹೋಲಿಸಿದರೆ ಈ ಅಸಮಾನತೆಯು ಉನ್ನತ ಶಿಕ್ಷಣ ಪಡೆಯುವಲ್ಲಿ ಮುಸ್ಲಿಮರು ಎದುರಿಸುತ್ತಿರುವ ಗಮನಾರ್ಹ ಸವಾಲುಗಳನ್ನು ಒತ್ತಿ ಹೇಳುತ್ತದೆ ಎಂದು ಆಲ್ ಇಂಡಿಯಾ ಸರ್ವೇ ಆನ್ ಹೈಯರ್ ಎಜುಕೇಷನ್ (ಎಐಎಸ್ ಎಚ್ ಇ) ಹೇಳಿದೆ.

ಮುಸ್ಲಿಮರ ಪ್ರಾತಿನಿಧ್ಯದಲ್ಲಿ ಪ್ರಾದೇಶಿಕ ವ್ಯತ್ಯಾಸದ ಕುರಿತು ವರದಿ ಗಮನ ಸೆಳೆದಿದೆ. ಮುಸ್ಲಿಮರು ಬಹುಸಂಖ್ಯಾತರಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ದಾಖಲಾತಿ ಅನುಪಾತ ಶೇಕಡಾ 24.8. ಆದರೆ ಇಲ್ಲಿ ಮುಸ್ಲಿಮರ ಒಟ್ಟು ಪ್ರಾತಿನಿಧ್ಯ ಶೇಕಡಾ 34.5. ಇದಕ್ಕೆ ವ್ಯತಿರಿಕ್ತವಾಗಿ ಅರುಣಾಚಲ ಪ್ರದೇಶದಂತಹ ರಾಜ್ಯದಲ್ಲಿ ಅತಿ ಕಡಿಮೆ ಮುಸ್ಲಿಮರ ಪ್ರಾತಿನಿಧ್ಯ ದಾಖಲಾಗಿದೆ. ಈ ರಾಜ್ಯದಲ್ಲಿ ಒಟ್ಟು ದಾಖಲಾತಿ ಅನುಪಾತ ಶೇಕಡಾ 36.5 ಇದ್ದ ಹೊರತಾಗಿಯೂ ಮುಸ್ಲಿಮರ ಪ್ರಾತಿನಿಧ್ಯ ಶೇಕಡಾ 0.16 ದಾಖಲಾಗಿದೆ.

ಕೇರಳದಲ್ಲಿ ಒಟ್ಟು ದಾಖಲಾತಿ ಅನುಪಾತ ಶೇಕಡಾ 41.3 ಇದ್ದರೆ, ಮುಸ್ಲಿಂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಶೇಕಡಾ 14.36 ಇದೆ. ಹರ್ಯಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಮುಸ್ಲಿಮರಿಗೆ ಕನಿಷ್ಠ ಪ್ರಾತಿನಿಧ್ಯ ಶೇಕಡಾ 0.99 ಹಾಗೂ 0.41 ಕಂಡುಬಂದಿದೆ. ಉತ್ತರ ಪ್ರದೇಶದಲ್ಲಿ ಶೇಕಡಾ 4.68 ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಶೇಕಡಾ 12.33 ವರದಿಯಲ್ಲಿ ತಿಳಿಸಲಾಗಿದೆ.

ಇದು ಮಾತ್ರವಲ್ಲ ಮುಸ್ಲಿಂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗುತ್ತಿರುವ ಕಳವಳ ಸಂಗತಿಗಳನ್ನು ವರದಿಯಲ್ಲಿ ಬೊಜ್ಜು ಮಾಡಿ ತೋರಿಸಲಾಗಿದೆ. ಭಾರತವು ಕೋಮು ಧ್ರುವೀಕರಣದತ್ತ ಸಾಗುತ್ತಿರುವುದು ಇಂತಹ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.