ತೀರಾ ಮೃದು ಸ್ವಭಾವದ ವ್ಯಕ್ತಿಯಾಗಿದ್ದು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳ ಮುಂದಾಳು ವಿಟ್ಲ ಹೊರವಲಯದ ವಿಠಲ ಪೂಜಾರಿ (49) ಅತಿಕಾರಬೈಲು ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವಕೇಸರಿ ಅತಿಕಾರಬೈಲು ಸಂಘಟನೆ, ಚಂದಳಿಕೆ ಶಾಲಾ SDMCಯ ಅಧ್ಯಕ್ಷರಾಗಿ, ನಾಟಕ ಕಲಾವಿದ ಮತ್ತು ಬಿಲ್ಲವ ಸಂಘದಲ್ಲಿ ತೊಡಗಿಸಿಕೊಂಡಿದ್ದ ವಿಠಲ ಪೂಜಾರಿ ಮನೆ ಸಮೀಪದ ಕೊಟ್ಟಿಗೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.