ಸಿಂಗಾರಿ ಹಾಜಿ ಮನೆ ದರೋಡೆ; ಆಪ್ತ ಬಳಗದ ಕೈವಾಡದ ಬಗ್ಗೆ ಮೂಡಿದೆ ಶಂಕೆ!

ಕರಾವಳಿ

ಬೇನಾಮಿ ಆಸ್ತಿ ಹೊಂದಿದ್ದ ಹಾಜಿ.. ಮಗನನ್ನು ಫಿಕ್ಸ್ ಮಾಡುತ್ತೇವೆಂದು ಇ.ಡಿ ದರೋಡೆ ತಂಡದ ಬೆದರಿಕೆ.. ಕೋಟಿಗಟ್ಟಲೆ ದುಡ್ಡಿನ ಗಂಟನ್ನೇ ತಂದಿಟ್ಟ ಹಾಜಿ.!

ಬಂಟ್ವಾಳ ಬೋಳಂತೂರು ನಾರ್ಶದ ಉದ್ಯಮಿ ಸಿಂಗಾರಿ ಬೀಡಿ ಮಾಲಕರಾದ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಲಭಿಸುತ್ತಿದೆ. ಕೆಲವು ದಿನಗಳ ಹಿಂದೆ ಇ.ಡಿ ಅಧಿಕಾರಿಗಳೆಂದು ನಂಬಿಸಿ ಹಣ ಲೂಟಿ ಮಾಡಿ ದರೋಡೆಕೋರರು ಪರಾರಿಯಾಗಿದ್ದರು. ಆದರೆ ಈ ದರೋಡೆ ಹಿಂದೆ ಆಪ್ತ ಬಳಗವೇ ಕೈಯಾಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ.

ಉದ್ಯಮಿ ಸುಲೈಮಾನ್ ಅವರು ಬಿ.ಸಿ ರೋಡಿನ ಸಮೀಪವಿರುವ ತನ್ನ ಜಾಗವನ್ನು ಕೋಟಿ ಕೋಟಿಗೆ ವಹಿವಾಟು ನಡೆಸಿ, ಆ ಹಣವನ್ನು ಮನೆಗೆ ತರದೆ ತನ್ನ ಆಪ್ತರೊಬ್ಬರಲ್ಲಿ ನೀಡಿದ್ದಾರಂತೆ. ದರೋಡೆಯಾಗುವ ಕೆಲವು ಗಂಟೆ ಮುಂಚೆಯಷ್ಟೇ ಆ ಹಣ ಸುಲೈಮಾನ್ ಹಾಜಿಯವರ ಮನೆ ಸೇರಿತ್ತು. ಶನಿವಾರದಂದು ಬೀಡಿ ಕಾರ್ಮಿಕರಿಗೆ ಬಟವಾಡೆ ನೀಡಲು ಇಟ್ಟಿದ್ದ ಕೋಟಿಗೂ ಅಧಿಕ ಮೊತ್ತ ಹಣವೂ ಇವರ ಬಳಿಯಿತ್ತು.

ಜಾರಿ ನಿರ್ದೇಶನಾಲಯ ಅಧಿಕಾರಿಯೆಂದು ಮನೆ ಪ್ರವೇಶಿಸಿ ಹಣ ಲೂಟಿದ ದರೋಡೆಕೋರರ ತಂಡ ಬೀಡಿ ಕಾರ್ಮಿಕರಿಗೆ ಬಟವಾಡೆ ಮಾಡುವ ಹಣ ಮಾತ್ರವಲ್ಲ, ಜಾಗ ಮಾರಾಟದ ಹಣ ಎಲ್ಲಿದೆ ಎಂದು ನೇರವಾಗಿ ಕೇಳಿದ್ದಾರಂತೆ. ಸುಲೈಮಾನ್ ಹಾಜಿ ಅವರ ಮನೆಗೆ ಈ ಹಿಂದೆಯೊಮ್ಮೆ incom Tex ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅವತ್ತು ಅಧಿಕಾರಿಗಳು ಕೇಸ್ ಮಾಡದೆ ಸೆಟ್ಲ್ ಮೆಂಟ್ ನಡೆಸಿ ಅಲ್ಲಿಂದ ತೆರಳಿದ್ದರಂತೆ. ಆದರೆ ಇದೀಗ ದಾಳಿ ನಡೆಸಿದ ಅಧಿಕಾರಿಗಳು ಹಿಂದಿನ ಕೇಸ್ ಅನ್ನು ರೀ ಓಪನ್ ಮಾಡುತ್ತೇವೆ, ತಮ್ಮ ಮಗನ ಮೇಲೆ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸಿದ ಕಾರಣ ಉದ್ಯಮಿ ಸೇಫಾಗಿ ಇಟ್ಟಿದ್ದ ಜಾಗ ಮಾರಾಟದ ಹಣವನ್ನು ತಂದು ತೋರಿಸಿದ್ದಾರಂತೆ. ನಕಲಿ ಅಧಿಕಾರಿಗಳು ಚಿನ್ನ, ಒಡವೆಗಳನ್ನು ಅಲ್ಲಿಯೇ ಬಿಟ್ಟು ತಮಗೆ ಬೇಕಾದಷ್ಟು ಹಣ ಸಿಕ್ಕಿದ ಕಾರಣ ಅಲ್ಲಿಂದ ಪರಾರಿಯಾಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ 5 ಕೋಟಿಗೂ ಅಧಿಕ ಹಣ ಡರೋಡೆಗೈಯ್ಯಲಾಗಿದೆ ಎಂಬ ಶಂಕೆ ಇದ್ದು, ಪೊಲೀಸ್ ದೂರಿನಲ್ಲಿ ಕೇವಲ 30 ಲಕ್ಷ ರೂಪಾಯಿ ದರೋಡೆಯಾಗಿರುವುದಾಗಿ ತಿಳಿಸಲಾಗಿದೆ. ಇದು ಅಧಿಕಾರಿಗಳಿಗೆ ಕಂಗ್ಗಟ್ಟಾಗಿದೆ. ತನ್ನ ಬೇನಾಮಿ ಸಂಪತ್ತನ್ನು ರಕ್ಷಿಸಲು ಹಾಜಿಯವರು ಇಂತಹ ಹೇಳಿಕೆ ನೀಡಿದರೇ.? ಇದು ದರೋಡೆಕೋರರಿಗೆ ವರವಾಗಬಹುದೇ.! ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಉದ್ಯಮಿ ಸುಲೈಮಾನ್ ಅವರು ಬೇನಾಮಿ ಆಸ್ತಿ ಹೊಂದಿದ್ದು, ಈ ಹಿಂದೆ ಅಷ್ಟೇನೂ ಶ್ರೀಮಂತರಾಗಿರದ ಇವರು ಏಕಾಏಕಿ ಕೋಟಿಗಟ್ಟಲೆ ಒಡೆಯರಾಗಿದ್ದರು. ಇದರ ಹಿಂದೆ ಬ್ಲ್ಯಾಕ್ ಮನಿಯ ಕರಾಳ ಹಸ್ತವೂ ಇದೆ ಅನ್ನುವುದು ಸ್ಥಳೀಯವಾಗಿ ಕೇಳಿ ಬರುತ್ತಿದೆ.

ಸಿಂಗಾರಿ ಬೀಡಿ ಮಾಲಕರ ಮನೆ ಡರೋಡೆ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ. ಪಕ್ಕಾ ದರೋಡೆಕೋರರ ಕೃತ್ಯ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ದರೋಡೆಕೋರರಾಗಿದ್ದರೆ ಹಣದೊಂದಿಗೆ ಚಿನ್ನ, ಒಡವೆಗಳನ್ನು ಬಿಟ್ಟು ಪರಾರಿಯಾಗುತ್ತಿರಲಿಲ್ಲ. ಎಲ್ಲವನ್ನೂ ದೋಚಿ ಪರಾರಿಯಾಗುತ್ತಿದ್ದರು. ಉದ್ಯಮಿ ಇತ್ತೀಚೆಗೆ ಜಾಗ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಪಡೆದ ವಿಷಯ ಕೆಲವೇ ಕೆಲವು ಆಪ್ತ ಬಳಗಕ್ಕೆ ಮಾತ್ರ ಗೊತ್ತಿತ್ತು. ದರೋಡೆಕೋರರು ದಾಳಿ ನಡೆಸಿದಾಗ ಜಾಗ ಮಾರಾಟದ ಹಣ ಕೇಳಿರುವುದು ಇದರ ಹಿಂದೆ ಅವರಿಗೆ ಗೊತ್ತಿದ್ದವರೇ ಇದರ ಹಿಂದೆ ಕೈಯಾಡಿಸಿರುವ ಶಂಕೆ ಮೂಡುತ್ತಿದೆ. ಮಾತ್ರವಲ್ಲ ಈ ಹಿಂದೆ income Tax ಅಧಿಕಾರಿಗಳು ದಾಳಿ ನಡೆಸಿ ಸೆಟ್ಲ್ ಮೆಂಟ್ ನಡೆಸಿದ ವಿಚಾರ ಕೂಡ ಇವರ ಅತ್ಯಂತ ಆಪ್ತರಿಗೆ ಮಾತ್ರ ತಿಳಿದಿತ್ತು. ಒಂದರ್ಥದಲ್ಲಿ ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇರುವುದಂತೂ ಸತ್ಯ.

ಸುಲೈಮಾನ್ ಹಾಜಿ ಅವರ ಬೇನಾಮಿ ಆಸ್ತಿಯ ಬಗ್ಗೆ ಇವರಿಗೆ ಗೊತ್ತಿದ್ದವರೇ ದರೋಡೆ ತಂಡಕ್ಕೆ ಮಾಹಿತಿ ನೀಡಿ ದರೋಡೆ ನಡೆಸಲಾಗಿದೆ ಅನ್ನುವ ಅನುಮಾನ ಹೆಚ್ಚಾಗುತ್ತಿದೆ. ಈ ದರೋಡೆ ಹಿಂದೆ ನಕಲಿ ಇ ಡಿಯ ಕಾರು ಚಾಲಕ ಪ್ರಧಾನ ಸೂತ್ರಧಾರಿಯಾಗಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕೆಲವು ತಿಂಗಳ ಹಿಂದೆ ನೀರುಮಾರ್ಗ ಪೆರ್ಮಂಕಿ ಬಳಿ ಕಾಂಗ್ರೆಸ್ ನಾಯಕ, ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣದಲ್ಲಿ ಕೋಟ್ಯಾನ್ ರ ಆಪ್ತರೇ ಕೃತ್ಯದಲ್ಲಿ ಭಾಗವಹಿಸಿದ್ದು ತನಿಖೆಯಿಂದ ತಿಳಿದುಬಂದಿತ್ತು. ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣದಲ್ಲೂ ಅವರ ಅತ್ಯಾಪ್ತರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.