ಮಂಗಳೂರು: ಸಬ್ ರಿಜಿಸ್ಟ್ರಾರ್ ಹುದ್ದೆಗೆ ಬ್ರಾಹ್ಮಣ ಅಧಿಕಾರಿಗಳ ಫೈಟಿಂಗ್.!

ಕರಾವಳಿ

ರಾಜ್ಯದ ಉಪನೋಂದಣಾಧಿ ಕಾರಿಗಳಿಗೆ ಎರಡು ವರ್ಷ. ಅದೇ ರೀತಿ ‘ಸಿ’ ವರ್ಗದ ಉಪನೋಂದಣಾಧಿಕಾರಿಗಳಿಗೆ ನಾಲ್ಕು ವರ್ಷ. ಎಫ್ ಡಿ ಎ, ಎಸ್ ಡಿ ಎಗೆ ನಾಲ್ಕು ವರ್ಷ. ಗ್ರೂಪ್ ‘ಡಿ’ ಐದು ವರ್ಷ ಎಂಬ ನಿಯಮವಿದೆ. ಆದರೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ. ಆದರೆ ಈ ನಿಯಮ ಪಾಲನೆಯಾಗಿದ್ದರೆ ಮಂಗಳೂರು ಸಿಟಿ ಸಬ್ ರಿಜಿಸ್ಟ್ರಾರ್ ಕವಿತಾ ಹತ್ತಾರು ಕಡೆಗೆ ವರ್ಗಾವಣೆಯಾಗಬೇಕಿತ್ತು. ಆದರೆ ಈಯಮ್ಮ ಕಳೆದ 10 ರಿಂದ 12 ವರ್ಷಗಳಿಂದ ಮಂಗಳೂರು ತಾಲೂಕು, ಸಿಟಿ ಸಬ್ ರಿಜಿಸ್ಟ್ರಾರ್ ಆಗಿ ಖಾಯಂ ಆಗಿದ್ದರು. ಆದರೆ ಈಗ ವರ್ಗಾವಣೆಯಾಗಿ ಮೂಡಬಿದ್ರೆ ಪ್ಲೇಸ್ ತೋರಿಸಿದರೂ ಮೂಡಬಿದ್ರೆಗೆ ನಾ ಹೋಗಲಾರೆ ಅಂದಿದ್ದಾರೆ. ಮತ್ತೆ ಮಂಗಳೂರಿಗೆ ಬರುವುದಕ್ಕೆ ಸರ್ಕಸ್ ಮಾಡುತ್ತಿದ್ದಾರೆ. ಇತ್ತ ಮೂಡಬಿದ್ರೆಯಿಂದ ಮಂಗಳೂರಿಗೆ ಜಂಪ್ ಆದ ರಘುರಾಮ ಇಲ್ಲೇ ಝಂಡಾ ಊರಲು ಕಸರತ್ತು ಮಾಡುತ್ತಿದ್ದಾರೆ. ಇಬ್ಬರು ಬ್ರಾಹ್ಮಣ ಅಧಿಕಾರಿಗಳ ಫೈಟಿಂಗ್ ಸಖತ್ತಾಗಿ ನಡೆಯುತ್ತಿದೆ.

ಹೇಳಿ ಕೇಳಿ ಸಬ್ ರಿಜಿಸ್ಟ್ರಾರ್ ಗಳು ಜಾಣರು. ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೋಂದಣಿ ಶುಲ್ಕದಲ್ಲಿ ಹೇಗೆ ಪಂಗನಾಮ ಹಾಕಬೇಕು, ಯಾವ ಯಾವ ನೋಂದಣಿಗೆ ಎಷ್ಟೆಷ್ಟು ಲಂಚ ಪಡೆಯಬೇಕು, ಅದರಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಏನೆಲ್ಲಾ ತಿನ್ನಿಸಿ ಅವರನ್ನು ಹೇಗೆ ಒಲಿಸಿಕೊಂಡು ಅಕ್ರಮ ನೊಂದಣಿ ಮಾಡಿದರೂ ಸಿಕ್ಕಿ ಹಾಕಿಕೊಳ್ಳದೆ ಹೇಗೆ ಎದೆ ನಿಗಿರಿಸಿಕೊಂಡು ಓಡಾಡಬೇಕು ಎಂಬ ತಂತ್ರ ಕುತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ.

ಮಂಗಳೂರು ಸಿಟಿ ಸಬ್ ರಿಜಿಸ್ಟ್ರಾರ್ ಆಗಿದ್ದ ಕವಿತಾ ಕಳೆದ 15 ವರ್ಷಗಳಿಂದ ದಕ್ಷಿಣ ಕನ್ನಡ ಬಿಟ್ಟು ಬೇರೆ ಕಡೆ ಹೋಗಿಲ್ಲ. ಅದರಲ್ಲೂ ಕಳೆದ 10 ರಿಂದ 12 ವರ್ಷ ಮಂಗಳೂರೇ ಈಯಮ್ಮಗೆ ಖಾಯಂ! ಈಕೆ ಮೂಲತಃ ಪುತ್ತೂರಿನವರು. ಈಗ ಮಂಗಳೂರಿನ ಬೆಂದೂರ್ ವೆಲ್ ನಲ್ಲಿ ವಾಸವಿದ್ದಾರೆ. ಕಳೆದ 15 ದಿನಗಳ ಹಿಂದೆ ಇವರ ಮೂಡಬಿದ್ರೆಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಮೂಡಬಿದ್ರೆ ಸಬ್ ರಿಜಿಸ್ಟ್ರಾರ್ ಆಗಿದ್ದ ರಘುರಾಮ್ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದರು.

ಕವಿತಾ ಮೂಡಬಿದ್ರೆಗೆ ಹೋಗಲು ಒಲ್ಲೆ ಎಂದಿದ್ದಾರೆ. ಮತ್ತೆ ಸಿಟಿ ಸಬ್ ರಿಜಿಸ್ಟ್ರಾರ್ ಆಗಿ ಪ್ರತಿಷ್ಠಾಪನೆಗೊಳ್ಳಲು ಎಲ್ಲ ತಯಾರಿ ನಡೆಸುತ್ತಿದ್ದಾರೆ. ಮಂಗಳೂರು ಸಬ್ ರಿಜಿಸ್ಟ್ರಾರ್ ಅನ್ನುವುದು ಚಿನ್ನದ ಮೊಟ್ಟೆ ಇಡುವ ಕೋಳಿ ತರಹ. ಅದನ್ನು ಬಿಟ್ಟು ಹೋಗಲು ಯಾರಿಗೂ ಮನಸ್ಸಿಲ್ಲ. ಕಳೆದ 12 ವರ್ಷಗಳಿಂದ ಇಲ್ಲಿಯೇ ಇದ್ದರೂ ಇಲ್ಲಿಂದ ಬಿಟ್ಟು ಹೋಗಲು ಮನಸ್ಸು ಇಲ್ಲ ಅಂದರೆ ನೀವೇ ಯೋಚಿಸಿ. ಎಷ್ಟು ಕೋಟಿ ತೂಗಬಹುದು ಈ ಹುದ್ದೆ.!

ರಾಜ್ಯದಲ್ಲಿ ಯಾವುದೇ ಸರಕಾರ ಬರಲಿ, ಮಂಗಳೂರಿನ ಸಬ್ ರಿಜಿಸ್ಟ್ರಾರ್ ಹುದ್ದೆ ಕವಿತಾ ಮೆಂಡಮ್ ಗೆ ಪರ್ಮನೆಂಟ್. ಅಷ್ಟೊಂದು ಪ್ರಭಾವಶಾಲಿ. ಬಿಜೆಪಿ ಸರಕಾರ ಇದ್ದಾಗ ತನ್ನದೇ ಸಮುದಾಯದ ಕಲ್ಲಡ್ಕ ಹೈಕಮಾಂಡ್ ಮುಖಾಂತರ ಪ್ರಭಾವ ಬಳಸಿ ಇಲ್ಲಿಯೇ ಝಂಡಾ ಊರಿದ್ದರು. ಕಾಂಗ್ರೆಸ್ ಸರಕಾರ ಬಂದ ನಂತರ ಹಿರಿಯ ಕಾಂಗ್ರೆಸ್ ನಾಯಕರ ಪ್ರಭಾವ ಬಳಸಿ ತನ್ನ ಸ್ಥಾನ ಗಟ್ಟಿ ಮಾಡಿದ್ದರು. ಈ ಹಿಂದೆ ಮಂಗಳೂರು ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇದ್ದು ಸಿಟಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಜಂಪ್ ಮಾಡಿದ್ದರು. ಎಷ್ಟೊಂದು ವಿಚಿತ್ರ ನೋಡಿ. ಪ್ರಮೋಷನ್ ಆದರೂ ಈ ಜಾಗವನ್ನಂತೂ ಬಿಟ್ಟು ಕದಲಲೇ ಇಲ್ಲ. ಇಲ್ಲಿ ಮಾಡುವಷ್ಟು ಕಮಾಯಿ ಬೇರೆ ಕಡೆ ಆಗುವುದಿಲ್ಲ ಅನ್ನುವುದನ್ನು ಚೆನ್ನಾಗಿ ಅರಿತುಕೊಂಡವರು ಬೇರೆ ಯಾರೂ ಇರಲಿಕ್ಕಿಲ್ಲ.

ಈ ಹಿಂದೆ ಹಳೆಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮೇಲಾಧಿಕಾರಿಗಳ ಅನುಮತಿಯನ್ನು ಪಡೆಯದೆ ಕಚೇರಿಯ ನೆಲಕ್ಕೆ ಟೈಲ್ಸ್ ಗಳನ್ನು ಹಾಕಿಸಿದ್ದರು. ಈ ಟೈಲ್ಸ್ ಗಳನ್ನು ಬಿಲ್ಡರ್ ವೊಬ್ಬರ ಮುಖಾಂತರ ಪಡೆದಿದ್ದರು. ಅನುಮತಿ ಪಡೆಯದೆ ಟೈಲ್ಸ್ ಹಾಕಿದ್ದಕ್ಕೆ ಇವರ ಮೇಲೆ ಪ್ರಕರಣ ಕೂಡಾ ದಾಖಲಾಗಿತ್ತು. ಕಳೆದ 7-8 ವರ್ಷಗಳಿಂದ ಈ ಕೇಸು ನ್ಯಾಯಾಲಯದಲ್ಲಿದೆ. ಆದರೆ ಈಕೆ ಬಲು ಚಾಣಾಕ್ಷೆ. ಕೇಸು ಮುಗಿಸಲು ಮುಂದಾಗುತ್ತಿಲ್ಲ. ಏಕೆಂದರೆ ಈ ಕೇಸು ಕ್ಲಿಯರ್ ಆದರೆ ಈಕೆಗೆ ಪ್ರಮೋಷನ್ ಆಗಿ ಬಿಡುತ್ತದೆ. ಪ್ರಮೋಷನ್ ಆದರೆ ಇಲ್ಲಿಂದ ಜಾಗ ಖಾಲಿ ಮಾಡಲೇಬೇಕಾಗಿದೆ.

ದುಡ್ಡು ಕಂಡರೆ ಹೆಣವೂ ಬಾಯಿ ಬಿಡುತ್ತದೆ ಅನ್ನುವ ಗಾದೆ ಮಾತಿನಂತೆ ದುಡ್ಡು ಕೊಟ್ಟರೆ ಏನೂ ಬೇಕಾದರೂ ಮಾಡುತ್ತಾರೆ. ಮಂಗಳೂರು ಸಿಟಿ ಸಬ್ ರಿಜಿಸ್ಟ್ರಾರ್ ಹುದ್ದೆ ಬಿಡಲು ಸುತಾರಾಂ ಯಾರೂ ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ಇಲ್ಲಿ ದಿನನಿತ್ಯವೆಂದರೂ ಕನಿಷ್ಠ 50 ರಿಂದ 70 ರಿಜಿಸ್ಟ್ರೇಶನ್ ಫೈಲ್ ಬರುತ್ತದೆ. ಒಂದು ಫೈಲ್ ರಿಜಿಸ್ಟ್ರೇಶನ್ ಮಾಡಲು ಕನಿಷ್ಠ 10 ರಿಂದ 20 ಸಾವಿರ ಕೊಡಲೇಬೇಕು. ಕೋಟಿ ವ್ಯಾಲ್ಯುವೇಷನ್ ಫೈಲ್ ಬಂದರೆ ಮೃಷ್ಟಾನ್ನ ಭೋಜನ.

ಬ್ರಾಹ್ಮಣ ಅಧಿಕಾರಿಗಳ ಫೈಟಿಂಗ್!

ಇತ್ತೀಚೆಗೆ ಸರಕಾರ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಒಂದು ಕಡೆ ಕೆಲಸ ಮಾಡಿರುವ ಉಪ ನೋಂದಣಾಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿತ್ತು. ಇದರನ್ವಯ ಮೂಡಬಿದ್ರೆ ಸೀನಿಯರ್ ಸಬ್ ರಿಜಿಸ್ಟ್ರಾರ್ ಆಗಿದ್ದ ರಘುರಾಮ್ ಮಂಗಳೂರು ಸಿಟಿಗೆ, ಮಂಗಳೂರು ಸಿಟಿಯಲ್ಲಿದ್ದ ಕವಿತಾ ಮೂಡಬಿದ್ರೆಗೆ ವರ್ಗಾಯಿಸಿ ಸರಕಾರ ಆದೇಶಿಸಿತ್ತು. ಈ ಆದೇಶದ ಪ್ರಕಾರ ರಘುರಾಮ್ ಸಿಟಿ ಸಬ್ ರಿಜಿಸ್ಟ್ರಾರ್ ಆಗಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಆದರೆ ಈ ಕವಿತಾ ಮೂಡಬಿದ್ರೆಗೆ ಹೋಗಲು ರೆಡಿ ಇಲ್ಲ. ರಜೆ ಪಡೆದು ಮನೆಯಲ್ಲಿ ಆರಾಮವಾಗಿ ಕುಳಿತು ಬಿಡುತ್ತಾರೆ. ಕರ್ತವ್ಯದಲ್ಲಿ ಇದ್ದಂತಹ ರಘುರಾಮನನ್ನು ಮೇಲಾಧಿಕಾರಿಗಳ ಮುಖಾಂತರ 4 ದಿನ ಕಡ್ಡಾಯ ರಜೆ ಹಾಕಿಸಲು ಹೇಳಿಸುತ್ತಾರೆ. 4 ದಿನ ರಜೆಯಲ್ಲಿ ಹೋದಂತಹ ರಘುರಾಮ ಬಂದು ನೋಡಿದಾಗ ಆ ಸೀಟಿನಲ್ಲಿ ಈ ಕವಿತಾ ಕುಳಿತುಕೊಂಡು ರಿಜಿಸ್ಟ್ರೇಶನ್ ಕಾರ್ಬಾರ್ ಮಾಡುತ್ತಾರೆ. ಈ ನಾಲ್ಕು ದಿನದಲ್ಲಿ ತನ್ನ ಪ್ರಭಾವ ಬಳಸಿ ಲಾಗಿನ್ ಓಪನ್ ಮಾಡಿಸಿ ತನ್ನ ಕೆಲಸ ಮಾಡಿಕೊಂಡಿದ್ದರು. ಇದು ಗೊತ್ತಾಗಿ ರಘುರಾಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಸ್ಟೇ ಮಾಡಿಸುತ್ತಾರೆ. ಆದರೆ ಈಕೆ ನಾನು ಕೆಲಸ ಮಾಡುವುದಾದರೆ ಮಂಗಳೂರಿನಲ್ಲಿ. ಅದು ಬಿಟ್ಟು ಬೇರೆ ಕಡೆ ಮಾಡಲ್ಲ ಅಂತ ಧಿಮಾಕಿನಿಂದ ರಜೆ ಹಾಕಿ ಹಠ ಹಿಡಿದು ಕುಳಿತುಕೊಂಡಿದ್ದಾರೆ. ಮಂಗಳೂರು ಸಬ್ ರಿಜಿಸ್ಟ್ರಾರ್ ಈಕೆಯ ಹೆಸರಿಗೆ ಪರ್ಮನೆಂಟ್ ಬರೆದುಕೊಟ್ಟಿದಿಯಾ? ರಜೆ ಹಾಕಿದರೂ ಸಂಬಳ ಪಡೆಯುತ್ತಿರುವುದು ಯಾವ ನ್ಯಾಯ? ಜನರ ತೆರಿಗೆ ದುಡ್ಡು ಈ ರೀತಿ ಪೋಲಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಜಿಲ್ಲಾ ನೋಂದಣಾಧಿಕಾರಿ ಯಾಕೆ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ? ಐಜಿಆರ್ ದಯಾನಂದ್ ಯಾಕೆ ಮೌನಕ್ಕೆ ಜಾರಿದ್ದಾರೆ.

ರಘುರಾಮ್ ಪ್ರಸಾದ್ ಸಾಚರೇನಲ್ಲ!

ಈ ರಘುರಾಮ್ ಪ್ರಸಾದ್ ಈ ಹಿಂದೆ ಮಂಗಳೂರು ತಾಲೂಕು ಸಬ್ ರಿಜಿಸ್ಟ್ರಾರ್ ಆಗಿದ್ದವರು. ಅಲ್ಲಿಂದ ‘ಕಾಣಿಕೆ’ ಕೊಟ್ಟು ಸಿಟಿ ಸಬ್ ರಿಜಿಸ್ಟ್ರಾರ್ ಆಗಿ ಬಂದಿದ್ದರು. ಅಲ್ಲಿಂದ ಮೂಡಬಿದ್ರೆಗೆ, ಇದೀಗ ಮತ್ತೆ ಸಿಟಿ ಸಬ್ ರಿಜಿಸ್ಟ್ರಾರ್ ಆಗಿ ಬಂದಿದ್ದಾರೆ. ಮೂಡಬಿದ್ರೆಯಲ್ಲಿ ದೊಡ್ಡ ಗೋಲ್ಮಾಲ್ ನಡೆಸಿದ ಸುದ್ಧಿಯೂ ಇದೆ. ಅಲ್ಲಿನ ವಕೀಲರೊಬ್ಬರು ಈತನ ಪುರಾಣದ ಬಗ್ಗೆ ವಾರ್ನಿಂಗ್ ಕೊಟ್ಟಿದ್ದಾರಂತೆ. ರಘುರಾಮ್ ಪ್ರಸಾದ್ ಸಾಚಾರೇನಲ್ಲ. ಫೈಲ್ ಮೂವ್ ಆಗಬೇಕಾದರೆ 5 ರಿಂದ 10 ಸಾವಿರ ಕೊಡಬೇಕಂತೆ. ಮಂಗಳೂರಿನ ಸಜ್ಜನ ಸಬ್ ರಿಜಿಸ್ಟ್ರಾರ್ ಬಶೀರ್ ಅಹಮ್ಮದ್ ಬಂಟ್ವಾಳಕ್ಕೆ ವರ್ಗಾವಣೆ ಹಿಂದೆ ಇದೇ ರಘುರಾಮ್ ಪ್ರಸಾದ್ ಕೈಯಾಡಿಸಿದ್ದಾರೆ ಅನ್ನುವ ಗುಸು ಗುಸು ಇದೆ. ಕೋಮುವಾದಿ ರಘುರಾಮ ಮೂಡಬಿದ್ರೆಯಲ್ಲಿ ಮಾಡಿರುವ ಅವಾಂತರಗಳನ್ನು ದಾಖಲೆ ಸಮೇತ ಮುಂದೆ ತಿಳಿಸಲಿದ್ದೇವೆ.