ಹೆನ್ಲೆ ಇಂಡೆಕ್ಸ್ ಶ್ರೇಯಾಂಕದಲ್ಲಿ 85 ಸ್ಥಾನಕ್ಕೆ ಜಾರಿದ ಭಾರತ
ಹೆನ್ಲೆ ಇಂಡೆಕ್ಸ್ ನೀಡುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೆಯಾಂಕದಲ್ಲಿ ಭಾರತ ಐದು ಸ್ಥಾನದ ಕುಸಿತವನ್ನು ಕಂಡು, 2024ರಲ್ಲಿದ್ದ 80ನೇ ಸ್ಥಾನದಿಂದ, 2025ರ ಹೊಸ ವರ್ಷದಲ್ಲಿ 85 ಸ್ಥಾನಕ್ಕೆ ಕುಸಿದಿದೆ. ಮೋಸ್ಟ್ ಪವರಫುಲ್ ಪಾಸ್ ಪೋರ್ಟ್ ನಲ್ಲಿ ಸಿಂಗಾಪುರ ಮೊದಲನೇ ಸ್ಥಾನ ಪಡೆದರೆ ಜಪಾನ್ ನಂತರದ ಸ್ಥಾನದಲ್ಲಿದೆ.
ಹಲವು ಮಾನದಂಡಗಳನ್ನು ಆಧರಿಸಿ ಹೆನ್ಲೆ ಪಾಸ್ ಪೋರ್ಟ್ ಇಂಡೆಕ್ಸ್ ನೀಡಲಾಗುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ 2025ರ ಸಾಲಿನಲ್ಲಿ ಐದು ಸ್ಥಾನದ ಕುಸಿತವನ್ನು ಕಂಡಿದೆ. ಕಳೆದ ಎರಡು ದಶಕಗಳಲ್ಲಿ ಭಾರತದ ಶ್ರೇಯಾಂಕದಲ್ಲಿ ಬದಲಾವಣೆಯಾಗುತ್ತಲೇ ಇದೆ. ಜಗತ್ತಿನ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ 80 ರಿಂದ 85ಸ್ಥಾನಕ್ಕೆ ಕುಸಿದಿದೆ. ಆ ಮೂಲಕ, ಐದು ಸ್ಥಾನ ಕೆಳಕ್ಕೆ ಇಳಿದಿದೆ ಎಂದು ಹೆನ್ಲೆ ಇಂಡೆಕ್ಸ್ ಹೇಳಿದೆ. ಹೆನ್ಲೆ, ಎಲ್ಲಾ 199 ರಾಷ್ಟ್ರಗಳಿಗೆ ಶ್ರೇಯಾಂಕವನ್ನು ನೀಡುತ್ತದೆ. ಅದರಲ್ಲೀಗ ಭಾರತ, 85ನೇ ಸ್ಥಾನದಲ್ಲಿದೆ.

ತಮ್ಮ ದೇಶದಲ್ಲಿ ವೀಸಾ ಇಲ್ಲದೇ ಎಷ್ಟು ರಾಷ್ಟ್ರಗಳ ಪ್ರಜೆಗಳು ಪ್ರಯಾಣಿಸಬಹುದು ಎನ್ನುವ ಆಧಾರದ ಮೇಲೆ ಈ ಶ್ರೇಯಾಂಕವನ್ನು ನೀಡಲಾಗುತ್ತದೆ. ಅಂತರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ ( IATA) ಒದಗಿಸುವ ದತ್ತಾಂಶದ ಆಧಾರದ ಮೇಲೆ ಶ್ರೇಯಾಂಕ ನಿಗದಿಯಾಗುತ್ತದೆ. ಇದರ ಪ್ರಕಾರ, ಭಾರತದ ಪಾಸ್ ಪೋರ್ಟ್ ಹೊಂದಿದವರು 57 ದೇಶಕ್ಕೆ ವೀಸಾ ಇಲ್ಲದೇ ಪ್ರಯಾಣಿಸಬಹುದಾಗಿದೆ. 2006ರಲ್ಲಿ 71ನೇ ಸ್ಥಾನದಲ್ಲಿ ಭಾರತದ ಪಾಸ್ ಪೋರ್ಟ್ ಇತ್ತು. ಪ್ರಮುಖವಾಗಿ, 2015 – 2021ರ ಅವಧಿಯಲ್ಲಿ ಬಹಳಷ್ಟು ಹಿನ್ನಡೆಯನ್ನು ಕಂಡಿತು.
2021ರಲ್ಲಿ 90ನೇ ಸ್ಥಾನಕ್ಕೆ ಭಾರತದ ಪಾಸಪೋರ್ಟ್ ಇಳಿದಿತ್ತು, ಕೋವಿಡ್ ಸಮಯದಲ್ಲಿ ಅಂತರಾಷ್ಟ್ರೀಯ ನಿರ್ಬಂಧಗಳು ಇದ್ದಿದ್ದರಿಂದ ಈ ಬದಲಾವಣೆಯಾಗಿತ್ತು ಎಂದು ಹೆನ್ಲೆ ತನ್ನ ವರದಿಯಲ್ಲಿ ಹೇಳಿದೆ. 2024ರಲ್ಲಿ ಭಾರತ 80ನೇ ಸ್ಥಾನದಲ್ಲಿತ್ತು.
ಯುನೈಟೆಡ್ ಅರಬ್ ಎಮಿರೇಟ್ಸ್ ಭಾರೀ ಏರಿಕೆಯನ್ನು ಕಂಡಿದ್ದು, ಟಾಪ್ ಟೆನ್ ಒಳಗೆ ಸ್ಥಾನವನ್ನು ಪಡೆದುಕೊಂಡ ಮೊದಲ ಅರಬ್ ಗಣರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕಾ ಮತ್ತು ಬ್ರಿಟನ್ ಕೂಡಾ ಶ್ರೇಯಾಂಕದಲ್ಲಿ ಹಿನ್ನಡೆಯನ್ನು ಕಂಡಿದೆ. 2015ರಲ್ಲಿ ಮೊದಲ ಸ್ಥಾನದಲ್ಲಿದ್ದ ಬ್ರಿಟನ್ ಐದನೇ ಸ್ಥಾನಕ್ಕೆ ಕುಸಿದಿದೆ. ಎರಡನೇ ಸ್ಥಾನದಲ್ಲಿ ಅಮೆರಿಕಾ 9ನೇ ಸ್ಥಾನಕ್ಕೆ ಮತ್ತು ಕೆನಡಾ ನಾಲ್ಕರಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ಶ್ರೇಯಾಂಕ ಪಟ್ಟಿಯಲ್ಲಿ ಸಿಂಗಾಪುರ ಮೊದಲನೇ ಸ್ಥಾನದಲ್ಲಿದೆ. ನಂತರದ 2ನೇ ಸ್ಥಾನದಲ್ಲಿ ಜಪಾನ್ ಇದೆ. ಫ್ರಾನ್ಸ್, ಜರ್ಮನಿ, ಇಟೆಲಿ, ಸ್ಪೇನ್, ಫಿನ್ ಲ್ಯಾಂಡ್ ಮತ್ತು ದಕ್ಷಿಣ ಮೂರನೇ ಸ್ಥಾನವನ್ನು ಅಲಂಕರಿಸಿಕೊಂಡಿದೆ.