ಡಿ.ಟಿ ದಿವಾಕರ ನುಂಗಿ ಕರಗಿಸಿದ ಕರ; ಭೂ ಮಾಪನ ಇಲಾಖೆಯ ಗಡವಗಳು.! ಉಪ ನೋಂದಣಾಧಿಕಾರಿಯ ಗೋಲ್ಮಾಲ್
‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನುವ ಬೋರ್ಡ್ ನೇತು ಹಾಕುತ್ತಿದ್ದ ಸರಕಾರಿ ಕಚೇರಿಗಳಲ್ಲಿ ಇವತ್ತು ‘ಎಚ್ಚರಿಕೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ’ ಅನ್ನುವ ಬೋರ್ಡ್ ನೇತು ಹಾಕಲಾಗಿದೆ. ನೀವೇ ಊಹಿಸಿ. ಈ ಕಚೇರಿಯಲ್ಲಿ ಲಂಗರು ಹಾಕಿದ ನುಂಗಾಸುರರು ಎಷ್ಟು ಮುಂಡಾಮೋಚಿರಬೇಕು. ಇವತ್ತು ನಾವು ಹೇಳ ಹೊರಟಿರುವುದು ಬಂಟ್ವಾಳ ಹೃದಯ ಭಾಗದ ಮಿನಿ ವಿಧಾನಸೌಧದಲ್ಲಿ ಮುಕ್ಕಲು ರೆಡಿಯಾಗಿ ನಿಂತಿರುವ ತಿಮಿಂಗಿಲಗಳ ಬಗ್ಗೆ.!
ಬಂಟ್ವಾಳ ಮಿನಿ ವಿಧಾನಸೌಧದ ಖದರ್ರೆ ಕರಕಲಾಗಿದೆ. ಇಲ್ಲಿನ ಬಹುತೇಕ ಸರಕಾರಿ ಅಧಿಕಾರಿಗಳ ಹಣೆಬರಹವೂ ಇದೇ ಆಗಿದೆ. ಗೆಬರಿ ತಿನ್ನುವ ಗಢವರ ಪಾಲಿಗೆ ಬಂಟ್ವಾಳ ಎಂಬುವುದು ಅಪ್ಪಟ ಆಯಕಟ್ಟಿನ ಜಾಗ ಮಾತ್ರವಲ್ಲ, ಒಂದು ರೀತಿಯ ‘ಅಮ್ಮನ ಮನೆ’ ಇದ್ದಂತೆ.! ಹೀಗೆ ಅಧಿಕಾರದಲ್ಲಿರುವಷ್ಟು ಸಮಯವೂ ಅಕ್ರಮವಾಗಿ ಅಗಿದಗಿದು ತಿನ್ನುವುದನ್ನೇ ಅಭ್ಯಾಸ ಮಾಡಿಕೊಂಡು ಬಂದ ಈ ಅತೀ ಭ್ರಷ್ಟರು, ಅದೆಷ್ಟೋ ಸಾಧ್ಯವೋ ಅಷ್ಟನ್ನೂ ನೊಣೆದು ತಿಂದು ಬಿಡುತ್ತಾರೆ.
ನಾವು ಯಾವುದಾದರೂ ಹೊಟೇಲ್ ಗಳಿಗೆ ಹೋದರೆ ಅಲ್ಲಿ ಮೊದಲು ಕೊಡುವುದು ಮೆನ್ಯೂ ಕಾರ್ಡ್. ಅದೇ ತರಹ ಇಲ್ಲಿ ರೆವೆನ್ಯೂ ಮೆನ್ಯೂ (Revenue Menue) ವನ್ನು ಇಟ್ಟುಕೊಂಡಿದ್ದಾರಂತೆ. ಮ್ಯೂಟೇಷನ್ ಗೆ ಇಷ್ಟು ಫಿಕ್ಸ್, ಭೂ ಹಿಡುವಳಿಗೆ ಇಷ್ಟು ಫಿಕ್ಸ್, ಪೆನ್ ಷನ್ ನಲ್ಲಿ ಇಷ್ಟು ಫಿಕ್ಸ್ ಅಂತ ಮಾಡಿಟ್ಟು ಕೊಂಡಿದ್ದಾರಂತೆ. ಕ್ಯಾಪ್ಟನ್ ಒಳ್ಳೆಯವರು. ಪಾಪ ಅ ಮಹಿಳೆ ಈ ಕೆಳಹಂತದ ಅಮೇದ್ಯ ತಿನ್ನುವ ಬಕಾಸುರರನ್ನು ಹದ್ದು ಬಸ್ತಿನಲ್ಲಿಡಲು ಪ್ರಯತ್ನ ಪಡುತ್ತಿದ್ದಾರೆ. ಆದರೇನು ಮಾಡುವುದು ಈ ಲಂಚಕೋರರಿಗೆ ಮೂಗುದಾರ ಹಾಕಲು ಸಾದ್ಯವಾಗುತ್ತಿಲ್ಲ ಎಂಬ ಬೇಸರದಲ್ಲಿದ್ದಾರೆ. ಕೆಳ ಹಂತದ ಅಧಿಕಾರಿಗಳು ಪಾಖಂಡಿತನ ಮೆರೆಯುತ್ತಿದ್ದಾರೆ. ಮುಕ್ಕುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇಲ್ಲಿ ಜನನ ಮರಣ ಪ್ರಮಾಣ ಪತ್ರಕ್ಕೂ ಐನೂರರ ನೋಟು ಕೈ ಬಿಸಿ ಮಾಡಿಕೊಂಡರಷ್ಟೇ ಸಲೀಸಾಗಿ ಸಿಗುತ್ತದೆ. ಇಲ್ಲವಾದರೆ ನಿಮ್ಮನ್ನು ಗಂಟೆಗಟ್ಟಲೆ ಕಾಲ ಕಾಯಿಸುತ್ತಾರೆ. ಇವತ್ತು ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬ್ರೋಕರ್ ಗಳದ್ದೇ ಅಡ್ಡೆ. ಬ್ರೋಕರ್ ಗಳಿಂದ ಇಂತಿಷ್ಟು ಪರ್ಸಂಟ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದಾಯವಾಗುತ್ತಿದೆ ಅನ್ನುವ ಗುರುತರ ಆರೋಪವಿದೆ.

ಭೂ ಮಾಪನ ಇಲಾಖೆಯ ಗಡವಗಳು!
ಬಂಟ್ವಾಳದ ಭೂ ಮಾಪನ ಇಲಾಖೆಯ ಲಂಚವತಾರದ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಹತ್ತಾರು ವರ್ಷಗಳಿಂದ ಇಲ್ಲಿ ಝಂಡಾ ಊರಿ ಕುಳಿತಿರುವ ಸರ್ವೇಯರ್ ಗಳು ಮುಂಡಾಮೋಚಿದ್ದೆ ಇನ್ನೊಂದು ಇಂಟರೆಸ್ಟಿಂಗ್ ಸ್ಟೋರಿ. ಏನೆಂದರೆ ಒಂದು ಕುಟುಂಬದ ಆಸ್ತಿ ಭಾಗಕ್ಕಾಗಿ ವಿವಾದವಿದ್ದರೆ ಭೂ ಮಾಪನ ಇಲಾಖೆಯ ಸಿಬ್ಬಂದಿಗಳಿಗೆ ಹಬ್ಬವಿದ್ದಂತೆ. ಇಬ್ಬರನ್ನು ದಾರಿ ತಪ್ಪಿಸಿ ಹಣ ಸಂಪಾದಿಸಲು ಮುಂದಾಗುತ್ತಾರೆ. ಇಲ್ಲಿಯ ಭೂ ದಾಖಲೆಯ ಸಹಾಯಕ ನಿರ್ದೇಶಕ (ADLR) ಪರಮಭ್ರಷ್ಟ. ಮಂಗಳೂರು ಸಿಟಿ, ಉಳ್ಳಾಲದಲ್ಲಿ ADLR ಆಗಿದ್ದ ಈತ ನುಂಗುವ ಕಲೆಯನ್ನು ಚೆನ್ನಾಗಿ ಕರಗತಮಾಡಿಕೊಂಡಿದ್ದಾನೆ. ಇದೀಗ ಬಂಟ್ವಾಳದಲ್ಲಿ ಈತನ ಊಟದ ಸ್ಪೀಡಿಗೆ ಬ್ರೇಕೆ ಇಲ್ಲದಂತಾಗಿದೆ. ಇನ್ನೂ ಪರ್ಯಾವೇಕ್ಷಕನದ್ದಂತೂ ಹೇಳಿ ಪ್ರಯೋಜನವಿಲ್ಲ. ಲಂಚ ಕಂಡರೆ ಕಣ್ಣು, ಬಾಯಿ ಬಿಡುತ್ತಾನೆ. ಇನ್ನು ಸರ್ವೇಯರ್ ಗಳಂತೂ ಜೇಬು ಭರ್ತಿ ಮಾಡಿಕೊಳ್ಳುವುದೇ ಡ್ಯೂಟಿ ಅಂತ ತಿಳಿದುಕೊಂಡಿದ್ದಾರೆ. ಅಕ್ರಮ ಸಕ್ರಮ ಇಲಾಖೆಯ ಸರ್ವೇಯಂತೂ ಮೃಷ್ಟಾನ್ನ ಭೋಜನ. ದರಖಾಸ್ತು ಸರ್ವೆಯದ್ದು ಚೈನ್ ಸಿಸ್ಟಮ್ ತರಹ. ಸರ್ವೇಯರ್ ಗಳಿಗೆ 10 ರಿಂದ 15 ಸಾವಿರ ಕೊಡಲೇ ಬೇಕಿದೆ. ಸೂಪರ್ ವೈಸರ್ ಗೆ 5 ಸಾವಿರ ಪಾವತಿಯಾಗುತ್ತದೆ. ADLR, ಉಪತಹಸೀಲ್ದಾರ್ ಇವರ ಕೈ ಬೆಚ್ಚ ಮಾಡಿದರಷ್ಟೇ ನಿಮ್ಮ ಕೆಲಸ ಆಗುವುದು.
ಡಿ.ಟಿ ದಿವಾಕರನ ಕಮೀಷನ್ ದಂಧೆ
ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಉಪ ತಹಶೀಲ್ದಾರ್ ದಿವಾಕರನದ್ದೇ ಕಾರುಬಾರು. ಈತನ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲದೆ ಬಿಹೇವ್ ಮಾಡುತ್ತಾರೆ ಅನ್ನುವ ಆರೋಪಗಳಿವೆ. ದುಡ್ಡು ಹಿಡಿದುಕೊಂಡು ಬರುವ ಬ್ರೋಕರ್ ಗಳಿಗೆ ಗಂಟೆಗಟ್ಟಲೆ ಚೇಂಬರಿನಲ್ಲಿ ಕುಳ್ಳಿರಿಸಿ ಹರಟೆ ಹೊಡೆಯುವ ಈ ಅಸಾಮಿ ಬಡವರು, ವೃದ್ಧರು ಕೆಲಸದ ನಿಮಿತ್ತ ಈತನ ಚೇಂಬರಿಗೆ ಹೋದರೆ ಪಕ್ಕನೆ ಅಲ್ಲಿಂದ ಎಸ್ಕೇಪ್ ಆಗಿ ಮಾಯವಾಗಿಬಿಡುತ್ತಾನೆ. ಬಂಟ್ವಾಳದ ಸುತ್ತಮುತ್ತ ಕೆರೆ, ಕುಂಟೆ, ರಾಜಕಾಲುವೆ, ಗೋಮಾಳ ಇತ್ಯಾದಿಗಳು ಕಣ್ಮರೆಯಾಗುತ್ತಿರುವುದರ ಹಿಂದೆ ದಿವಾಕರನ ಕೈವಾಡವಿದೆ. ಭೂಗಳ್ಳರ ಜೊತೆ ಶಾಮೀಲಾಗಿ ಸಖತ್ ದುಡ್ಡು ಮಾಡಿಕೊಂಡಿದ್ದಾನಂತೆ. ದುಡ್ಡು ಎಂದರೆ ಜೀವ ಬಿಡುವ ಈತ 40% ಕಮಿಷನ್ ಅಲ್ಲ, 90% ಕಮಿಷನ್ ಮೇಯುವಷ್ಟು ದುಡ್ಡು ಬಾಕತನ ಹೊಂದಿದ್ದಾನೆ. ಪತ್ರಕರ್ತರಿಗೆ ಸಾವಿರ ಬಿಸಾಕಿ ಬುಟ್ಟಿಗೆ ಹಾಕಬಹುದು ಎಂದು ಲಬೊ ಲಬೋ.. ಒದರುತ್ತಾನೆ. ಪತ್ರಕರ್ತರು ಈತನಂತೆ ಬೇಡುವವರಲ್ಲ ಎಂಬುದನ್ನು ಈತ ತನ್ನ ಮೆದುಳೇ ಕರಗಿದ ಮಸ್ತಕದಲ್ಲಿ ಫೀಡ್ ಮಾಡಿ ಇಡುವುದು ಒಳಿತು. ಈತ ಮೆದದ್ದು, ತಿಂದಿದ್ದು, ಮುಕ್ಕಿದ್ದು ಎಲ್ಲವೂ ಹೊರಬೀಳಲಿದೆ.
ಇನ್ನು ಕೇಸು ವರ್ಕರ್ ವಿಶುಕುಮಾರನದ್ದು ವಿಚಿತ್ರ ಖಯಾಲಿಗಳು. ಚುನಾವಣಾ ಶಾಖೆಯನ್ನೇ ಬಂಡವಾಳ ಮಾಡಿಕೊಂಡು ಈತ ಮುಕ್ಕುವುದಕ್ಕೆ ಲೆಕ್ಕವಿಲ್ಲ. ಅಟೆಂಡರ್ ಸುಂದರನದ್ದು ಸುಂದರವಾದ ಇನ್ನೊಂದು ಕಥೆ.

ಉಪ ನೋಂದಣಾಧಿಕಾರಿ ಗೋಲ್ಮಾಲ್ ಕವಿತಾ!
ಸಬ್ ರಿಜಿಸ್ಟ್ರಾರ್ ಗಳು ಎಷ್ಟು ಜಾಣರು, ನಯ-ನಾಜೂಕಿನವರು ಎಂದರೆ ‘ಕಳ್ಳನಿಗೆ ಒಂದು ಪಿಳ್ಳೆ ನೆವ’ ಎಂಬಂತೆ ಒಂದೇ ಒಂದು ಯಾವುದಾದರೂ ಆದೇಶದ ತುಣುಕು ಸಿಕ್ಕಿದರೆ ಸಾಕು ಅದರಡಿಯಲ್ಲಿ ಮಾಡಬಾರದ ಗೋಲ್ಮಾಲ್ ಮಾಡಿ ಗೋಲಕ ತುಂಬಿಸಿಕೊಳ್ಳುತ್ತಾರೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೋಂದಣಿ ಶುಲ್ಕದಲ್ಲಿ ಹೇಗೆ ಪಂಗನಾಮ ಹಾಕಬೇಕು. ಯಾವ ಯಾವ ನೋಂದಣಿಗೆ ಎಷ್ಟೆಷ್ಟು ಲಂಚ ಪಡೆಯಬೇಕು ಅನ್ನುವುದರಲ್ಲಿ ಎಕ್ಸ್ ಫರ್ಟ್. ಈಯಮ್ಮ ಬಂಟ್ವಾಳದಲ್ಲಿ ಝಂಡಾ ಹೂಡಿ ದುಡ್ಡಿನ ಮೂಟೆ ಮಾಡಿಕೊಂಡಿದ್ದಾಳಂತೆ. ಇದೀಗ ಇಲ್ಲಿಂದ ವರ್ಗಾವಣೆಯಾಗಿ ಮಂಗಳೂರು ಮಿನಿ ವಿಧಾನಸೌಧಕ್ಕೆ ಪವಿತ್ರ ಪಾದ.! ಇನ್ನು ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಥೆ ಅಯ್ಯೋ.. ಗೋವಿಂದ.
ಕೈ ಕಟ್ಟಿ ಕುಳಿತ ಶಾಸಕರು!
ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಲಂಚದ ಆರ್ಭಟ ಜೋರಾಗಿ ಜನಸಾಮಾನ್ಯರು ಸರಕಾರಿ ಕಚೇರಿಗೆ ಹೋಗುವುದೇ ದು:ಸ್ವಪ್ನದಂತೆ ಕಾಡುತ್ತಿರುವಾಗ ಇಲ್ಲಿನ ಶಾಸಕರು ವ್ಯವಹಾರದಲ್ಲಿ ಬ್ಯುಸಿಯಿದ್ದಂತೆ ಕಾಣುತ್ತದೆ.! ಶಾಸಕರು ಸೌಮ್ಯ ಸ್ವಭಾವದ ಒಳ್ಳೆಯ ವ್ಯಕ್ತಿ. ಮಿನಿ ವಿಧಾನಸೌಧದಲ್ಲಿನ ಲಂಚಗುಳಿತನ ಹೋಗಲಾಡಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಯಾವ ಕೆಲಸವೂ ಮಾಡುತ್ತಿಲ್ಲ ಎಂಬ ಅಪವಾದ ಅವರಿಗಿದೆ. ಶಾಸಕರ ಬಗ್ಗೆ ಇಲ್ಲಿನ ಅಧಿಕಾರಿಗಳಿಗೆ ಭಯವಿದ್ದಂತೆ ಕಾಣುತ್ತಿಲ್ಲ. ಶಾಸಕರು ಇನ್ನಾದರೂ ರಫ್ ಅಂಡ್ ಟಫ್ ಆಗಿ ಅಧಿಕಾರಿಗಳ ಚಳಿಬಿಡಿಸಬೇಕಾಗಿದೆ.

ಲೋಕಾಯುಕ್ತ ಇಲಾಖೆ ಕಣ್ಮುಚ್ಚಿ ಕುಳಿತಿದೆ!
ಜಿಲ್ಲೆಯ ಅಲ್ಲಲ್ಲಿ ರೇಡು ಮಾಡುವ ಸುದ್ಧಿಯಲ್ಲಿರುವ ಲೋಕಾಯುಕ್ತ ಬಂಟ್ವಾಳ ಮಿನಿ ವಿಧಾನಸೌಧವನ್ನು ಏಕೆ ಮರೆತಿದೆ.? ಅನ್ನುವುದು ಸಾರ್ವಜನಿಕರ ಪ್ರಶ್ನೆ. ಇಲ್ಲಿನ ಅಧಿಕಾರಿಯಿಂದ ಹಿಡಿದು ಗುಮಾಸ್ತನವರೆಗೆ ಆಮೇದ್ಯ ತಿಂದೇ ಕೋಟಿಗೆ ತೂಗುತ್ತಿದ್ದಾರೆ. ಲೋಕಾಯುಕ್ತ ಇಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದರೆ ಬಹುಪಾಲು ನಾಗರಿಕರಿಗೆ ನೆಮ್ಮದಿ ತರಬಹುದು. ಆದರೆ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ಲೋಕಾಯುಕ್ತದ ಕೆಲವು ಅಧಿಕಾರಿಗಳು ಮೆಯಿದೇ ಬಂದವರು.! ಮತ್ತೆ ಯಾರನ್ನು ಹದ್ದು ಬಸ್ತಿನಲ್ಲಿಡುತ್ತಾರೆ.? ಮುಂದಕ್ಕೆ ಬಂಟ್ವಾಳದ ನಾಗರಿಕರನ್ನು ಅ ಪರಮಾತ್ಮನೇ ರಕ್ಷಿಸಬೇಕು.!