ಮೂಡ ಕಮೀಷನರ್ ಖಡಕ್ ರಿಯಾಕ್ಷನ್.! ಶಿಕ್ಷಣ ಉದ್ಯಮಿಯ 5 ಲಕ್ಷ ಗೋವಿಂದ.?

ಕರಾವಳಿ

ಮೂಪ, ಚೇಲಾಗಳು ಹಂಚಿ ತಿಂದರು. ಗಡದ್ದಾಗಿ ನಿದ್ರೆಗೆ ಜಾರಿದರು..!

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ದ ಸ್ವಾಹಾ ಪುರಾಣ ಬಗೆದಷ್ಟು ಬಿಚ್ಚಿಡುತ್ತಿದೆ! ಮೂಡ ಅಧಿಕಾರಿಗಳ ಅಮೇಧ್ಯ ತಿನ್ನುವ ಕಥೆ ಒಂದೆಡೆಯಾದರೆ, ಮೂಡಕ್ಕೆ ಸರಕಾರದಿಂದಲೇ ಆಯ್ಕೆಯಾಗಿ ಬಂದ ಮೂಪ, ಚೇಲಾ ಗಳದ್ದು ಇನ್ನೊಂದು ಕಥೆ.!ಅಬ್ಬಬ್ಬಾ..ಮೂಡ ರಣಹಸಿವಿಗೆ ಪುಲಿಸ್ಟಾಪ್ ಬೀಳುವಂತೆ ಕಾಣುತ್ತಿಲ್ಲ.

ಮೂಡ ಕಮೀಷನರ್ ಆಗಿ ಬಂದಿರುವ ಗಟ್ಟಿಗಿತ್ತಿ ಮಹಿಳೆ ಇತ್ತೀಚಿನ ದಿನಗಳಲ್ಲಿ ಮೂಡಕ್ಕೆ ಖಡಕ್ ಸರ್ಜರಿ ಮಾಡುತ್ತಿದ್ದಾರೆ. ಮೂಡದಲ್ಲಿ ಹಲವಾರು ಪ್ರಕರಣಗಳು ನಡೆದ ನಂತರ ಎಚ್ಚೆತ್ತುಕೊಂಡ ಆಯುಕ್ತೆ ಬ್ರೋಕರ್ ಗಳ ಅಡ್ಡೆಯಾಗಿಬಿಟ್ಟಿದ್ದ ಮೂಡಕ್ಕೆ ಬ್ರೋಕರ್ ಗಳು ಕಾಲಿಡಲು ಹೆದರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟಚಾರದ ಪರಮ ಅಡ್ಡೆಯಾಗಿದ್ದ ಮೂಡಕ್ಕೆ ಒಂದಿಷ್ಟು ಬಿಸಿ ಮುಟ್ಟಿಸಲು ಸಫಲರಾಗಿದ್ದಾರೆ. ಆತ್ತ ಅಧಿಕಾರಿ ವರ್ಗ ‘ಸರಿ’ ದಾರಿಗೆ ಬರುತ್ತಿದ್ದರೆ ಇತ್ತ ಮೂಡದ ಮೂಪ, ಚೇಲಾಗಳು ನುಂಗುಬಾಕರಾಗಿ ಬದಲಾಗುತ್ತಿದ್ದಾರೆ. ಕಾಂಗ್ರೆಸ್ ನಾಯಕ ಕಂ ಉಧ್ಯಮಿಯೊಬ್ಬರಿಂದ 5 ಲಕ್ಷ ರೂಪಾಯಿಗಳನ್ನು ಇಲ್ಲಿನ ಮೂಪ, ಚೇಲಾ ಗಳು ಮುಂಡಾಮೋಚಿದ್ದಾರೆ.

ದೇರಳ ಕಟ್ಟೆಯ ಉದ್ಯಮಿಯೊಬ್ಬರ ಫೈಲ್ ಕ್ಲಿಯರೆನ್ಸ್ ಗಾಗಿ ಮೂಡದ ಮೂಪ, ಚೇಲಾ ಗಳು 5 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಉಧ್ಯಮಿ ಕಂ ಶಿಕ್ಷಣ ವ್ಯಾಪಾರಿ ಕಾಂಗ್ರೆಸ್ ನಾಯಕರಾಗಿದ್ದು, ಮೂಡದ ಮೂಪ ಕಾಂಗ್ರೆಸ್ ಪ್ರಭಾವಿ ನಾಯಕರೊಬ್ಬರ ಶಿಫಾರಸ್ಸಿನ ಮೇರೆಗೆ ಆ ಜಾಗದಲ್ಲಿ ವಿರಾಜಮಾನರಾಗಿದ್ದರು. ಇದನ್ನು ನಂಬಿ ಉದ್ಯಮಿ 5 ಲಕ್ಷ ರೂಪಾಯಿ ಸಂದಾಯ ಮಾಡಿದ್ದರು. ಆದರೆ ಇವರು ಬಲು ಚಾಲಾಕಿಗಳು. ಅಧಿಕಾರಿಗಳಿಗಳಿಗೆ ಗೊತ್ತಾಗದೇ ಸಿಕ್ಕ 5 ಲಕ್ಷ ರೂಪಾಯಿಗಳಲ್ಲಿ ಮೂಪ 3 ಲಕ್ಷ ಇಟ್ಟು ಬಾಕಿ ತಲಾ 50 ಸಾವಿರದಂತೆ 2 ಲಕ್ಷ ರೂಪಾಯಿ ಚೇಲಾಗಳಿಕೆ ಹಂಚಿಕೆ ಮಾಡಿ ಗಡದ್ದಾಗಿ ತಿಂದು ತೇಗಿದ್ದರು.

ಆದರೆ ತಿಂಗಳು ಕಳೆದರೂ ಶಿಕ್ಷಣ ಉಧ್ಯಮಿಯ ಫೈಲ್ ಕ್ಲಿಯರೆನ್ಸ್ ಆಗಲೇ ಇಲ್ಲ. ಗಡದ್ದಾಗಿ ತಿಂದವರಲ್ಲಿ ಫೈಲ್ ಬಗ್ಗೆ ವಿಚಾರಿಸಿದಾಗ ಆಯುಕ್ತರಲ್ಲಿ ಮಾತನಾಡಿ ಎಂದು ಸಬೂಬು ಕೊಟ್ಟು ಪಲಾಯಣ ಮಾಡಿದರು. ಉಧ್ಯಮಿ ತನ್ನ ಫೈಲ್ ಬಗ್ಗೆ ಆಯುಕ್ತರಲ್ಲಿ ವಿಚಾರಿಸಿದಾಗ ಫೈಲ್ ಕ್ಲಿಯರ್ ಮಾಡಲು ಸಾಧ್ಯವೇ ಇಲ್ಲ, ಫೈಲೇ ಸರಿ ಇಲ್ಲ ಎಂದು ಉತ್ತರ ಕೊಟ್ಟರು. ಇದರಿಂದ ಕೆಂಡಮಂಡಲರಾದ ಉಧ್ಯಮಿ ಆಯುಕ್ತೆಗೆ ನಾನು ನೋಡಿಕೊಳ್ಳುತ್ತೇನೆ ಅನ್ನುವ ರೀತಿಯ ಆವಾಜ್ ಹಾಕಿದ್ದರು. ಇದಕ್ಕೆ ಸೊಪ್ಪು ಹಾಕದ ಕಮೀಷನರ್ ಖಡಕ್ ರಿಯಾಕ್ಷನ್ ಕೊಟ್ಟರು. ಬಂದ ದಾರಿಗೆ ಸುಂಕ ಇಲ್ಲ ಅನ್ನುವ ರೀತಿಯಲ್ಲಿ ಉದ್ಯಮಿ ಅಲ್ಲಿಂದ ನಿರ್ಗಮಿಸಿದರು.

ಈ ಬಗೆಗಿನ ದೂರು ಕಾಂಗ್ರೆಸ್ ಪ್ರಭಾವಿ ನಾಯಕರೊಬ್ಬರ ಅಂಗಳಕ್ಕೆ ತಲುಪಿತ್ತು. ಮಲ್ಲಿಕಟ್ಟೆಯ ಗೆಸ್ಟ್ ಹೌಸ್ ನಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ, ಶಿಕ್ಷಣ ವ್ಯಾಪಾರಿ, ಮೂಡ ಮೂಪ, ಚೇಲಾ ಗಳು ಕೂತು ಸಂದಾನ ನಡೆಯಿತು. ಅಲ್ಲಿಗೆ ಮೂಡ ಆಯುಕ್ತೆಯನ್ನು ಕರೆಯಿಸಲಾಯಿತು. ಶಿಕ್ಷಣ ವ್ಯಾಪಾರಿಯ ಫೈಲ್ ಕ್ಲಿಯರ್ ಮಾಡುವಂತೆ ಆಯುಕ್ತೆಗೆ ಪ್ರಭಾವಿ ನಾಯಕರೊಬ್ಬರು ಆದೇಶಿಸಿದರು. ಆದರೆ ಆಯುಕ್ತೆ ಈ ಫೈಲು ಕ್ಲಿಯರ್ ಮಾಡಲು ಸಾಧ್ಯವೇ ಇಲ್ಲ ಅನ್ನುವ ರೀತಿಯ ಉತ್ತರ ನೀಡಿದರು. ಪ್ರಭಾವಿ ನಾಯಕರು ‘ನೋಡಿ’ ಅನ್ನುವ ಮಾತನ್ನು ಹೇಳಿದರೂ ಆಯುಕ್ತೆಯಂತೂ ಈ ಫೈಲು ಸರಿ ಇಲ್ಲ, ಅದು ಮಾಡಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು. ಬೇಕಾದರೆ ನ್ಯಾಯಾಲಯದಲ್ಲಿ ನೋಡಿ ಕೊಳ್ಳಿ. ಪಂಚಾಯ್ತಿ ಅಲ್ಲಿಗೆ ಮುಗಿಯಿತು. ಅಲ್ಲಿಂದ ಹೊರಬಂದ ಶಿಕ್ಷಣ ವ್ಯಾಪಾರಿ ಕಂ ಉಧ್ಯಮಿ ಮುಖ ಬೆಪ್ಪು ತಕ್ಕಡಿಯಂತಾಗಿತ್ತು. ಮೂಪ, ಚೇಲಾಗಳನ್ನು ನಂಬಿ ಕೊಟ್ಟ 5 ಲಕ್ಷದ ಕಥೆ ಗೋವಿಂದ.. ಹಂಚಿಕೊಂಡು ಗಡದ್ದಾಗಿ ತಿಂದ ಮೂಪ, ಚೇಲಾಗಳು ಅಲ್ಲಿಂದ ಎಸ್ಕೇಪ್.. ಮೂಪ, ಚೇಲಾಗಳು ಮಾತ್ರ ಫೈಲ್ ಕ್ಲಿಯರ್ ಮಾಡಿಸುತ್ತೇವೆ ಎಂದೇಳಿ ಉದ್ಯಮಿಗಳಿಂದ ಲಕ್ಷ ಲಕ್ಷ ವಸೂಲಿ ಮಾಡಿ ದುಂಡಗಾಗುತ್ತಿದ್ದಾರೆ.