ಮಂಗಳೂರು: ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆ

ಎಡ-ಬಲ ಇರುವವರ ಮೇಲೆ ಮೊದಲು ಕಣ್ಣಿಡಿ, ಯೋಗ್ಯರನ್ನು ಎಡ-ಬಲದಲ್ಲಿ ಇಟ್ಟುಕೊಳ್ಳಿ ಉಸ್ತುವಾರಿ ಸಚಿವರೇ : ಮುನೀರ್ ಕಾಟಿಪಳ್ಳ ಮಂಗಳೂರಿನಲ್ಲಿ ಉತ್ತುಂಗ ತಲುಪಿರುವ, ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆಯ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು “ಗಣಿ ಮತ್ತು ಭೂ ವಿಜ್ಞಾನ ಇಲಾಖೆ” ಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡದ್ದನ್ನು ಕಂಡು ಅಚ್ಚರಿಯಾಯ್ತು. ಸಚಿವರು ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವಾಗ ಮಂಗಳೂರು ನಗರ ಪೊಲೀಸ್ […]

Continue Reading

ಕುಂದಾಪುರ ಪುರಸಭೆ: ಕಂಸಾಸುರರು.!

ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಅಗ್ರಗಣ್ಯ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕು ಹೆಚ್ಚು ಪ್ರಸಿದ್ಧಿ ಪಡೆದ ತಾಲೂಕು. ಕುಂದಾಪುರದ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ ಅಪಾರ್ಟ್ ಮೆಂಟ್ ಗಳು ಒಳ್ಳೆಯ ಆದಾಯವನ್ನು ತಂದಿಡುತ್ತಿದೆ. ರಕ್ಷಕರೆ ಭಕ್ಷಕರಾದರೆ ಏನಾಗಬಹುದು? ಅದೆಲ್ಲವೂ ಇಲ್ಲಿ ಮಾಮೂಲಿಯಾಗಿಬಿಟ್ಟಿದೆ. ಕುಂದಾಪುರ ಪುರಸಭೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ. ಇಲ್ಲಿಗೆ ಬಂದಿರುವ ಆನಂದನೆಂಬ ಮುಖ್ಯಾಧಿಕಾರಿ ಕುಂದಾಪುರದ ಜನತೆಗೆ ಪರಮಾನಂದವೇನೂ ಕೊಟ್ಟಿಲ್ಲ. ಬರೀ […]

Continue Reading

ಬ್ಯಾರಿ (ಬಾರಿ) ಗಳಾರು.? ಈ ಬ್ಯಾರಿ ಎಂಬ ಹೆಸರು ಎಲ್ಲಿಂದ ಬಂತು.? ಹೇಗೆ ಬಂತು.? ಏಕೆ ಬಂತು.?

‘ತಖಲ್ಲಸ ಮಿನ್ ಕುಲ್ಲಿ ಐಬಿನ್ (تخلص من كل غيب) ಅಂದರೆ ಎಲ್ಲಾ ನ್ಯೂನತೆಗಳಿಂದಲೂ ಪಾರದವನು ಈ ‘ಬಾರಿ’. ✍️. ಬಹು ಭಾಷಾ ಸಾಹಿತಿ, ಮಹಮ್ಮದ್ ಬಡ್ಡೂರ್ ​25 ವರ್ಷಗಳ ಮೊದಲು ಬ್ಯಾರಿ ಆಂದೋಲನ ಆರಂಭವಾಯಿತು. ಆಮೇಲೆ ಕಳೆಗಿಡಗಳಂತೆ(ಜಗಟೆ-ತಜಂಕೆ) ಬ್ಯಾರಿ ಹೆಸರಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಸರಕಾರದ ವತಿಯಿಂದ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ದಕ್ಕಿತು. ಇಷ್ಟೆಲ್ಲಾ ಆದುದು ಒಂದು ಸ್ಪರ್ಧಾತ್ಮಕ ಪೈಪೋಟಿ ಮತ್ತು ಸ್ವಾರ್ಥದ ಲಾಲಚೆಯಿಂದ ಹೊರತು, ಸಾಮುದಾಯಿಕ ದೃಷ್ಟಿಕೋನದಿಂದ ಆದುದೇನೂ ಅಲ್ಲ. ಈ ಬ್ಯಾರಿ ಎಂಬ […]

Continue Reading

ಸಿಂಗಾರಿ ಬೀಡಿ ಮನೆ ದರೋಡೆ: ಕೇಡಿ ಪೊಲೀಸ್ ಅರೆಸ್ಟ್

ದರೋಡೆಗೆ ಇಂಚಿಂಚೂ ಮಾಹಿತಿ ನೀಡಿದ್ದ ನಾರ್ಶ ಸಿರಾಜ್, ಮಟನ್ ಇಕ್ಬಾಲ್, ಅಳಪೆ ಅನ್ಸಾರ್ ಅಂದರ್ ಬಂಟ್ವಾಳ ಬೋಳಂತೂರು ನಾರ್ಶದ ಉದ್ಯಮಿ ಸಿಂಗಾರಿ ಬೀಡಿ ಮಾಲಕರಾದ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಸ್ಥಳೀಯರು ಸೇರಿದಂತೆ ಮಲಯಾಳಿ ಎಎಸ್ ಐ ಯೊಬ್ಬನಿಗೆ ಕೋಳ ತೊಡಿಸುವಲ್ಲಿ ಜಿಲ್ಲೆಯ ಪೊಲೀಸರು ಸಫಲರಾಗಿದ್ದಾರೆ. ಜನವರಿ 3 ರಂದು ಇ.ಡಿ ಅಧಿಕಾರಿಗಳೆಂದು ನಂಬಿಸಿ ಸಿಂಗಾರಿ ಬೀಡಿ ಮಾಲಿಕರ ಮನೆಗೆ ನುಗ್ಗಿ ಹಣ ಲೂಟಿ ಮಾಡಿ […]

Continue Reading

ಬಣ ಬಡಿದಾಟದ ಸೊಕ್ಕು ಮುರಿಯಲು ಮುಂದಾದ ಬಿಜೆಪಿ ಹೈಕಮಾಂಡ್

ಬಿಜೆಪಿ -ಜೆಡಿಎಸ್ ವಿಲೀನಕ್ಕೆ ನಡೆಯುತ್ತಿದೆ ಮೆಗಾ ಪ್ಲ್ಯಾನ್.. ಕುಮಾರಸ್ವಾಮಿ ಹೆಗಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ.? ಬಣ ರಾಜಕಾರಣದ ಮೂಲಕ ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾಗಿರುವ ರಾಜ್ಯ ನಾಯಕರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಆಘಾತಕಾರಿ ಪ್ರಯೋಗಕ್ಕೆ ಮುಂದಾಗಿರುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ಎರಡೂ ಬಣಗಳನ್ನು ಹೊರಗಿಟ್ಟು ತಟಸ್ಥ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ. ಆರಂಭದಲ್ಲಿ ಬಿಜೆಪಿ ತಟಸ್ಥ ಬಣದಲ್ಲಿ ಗುರುತಿಸಿಕೊಂಡವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿತ್ತು. ಆದರೆ ತಟಸ್ಥ ಬಣದವರೇ ಬಣ ರಾಜಕಾರಣಕ್ಕೆ […]

Continue Reading

ಬಂಟ್ವಾಳ: ಸರಕಾರಿ ಅಧಿಕಾರಿ ಮಟ್ಕಾ ದಾಸ.! ಅಕ್ರಮ-ಸಕ್ರಮದಲ್ಲೂ ಸಖತ್ ಲೂಟಿ

ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಬಕಾಸುರರ ಕಥೆಗಳನ್ನು ಪತ್ರಿಕೆಯ ಕಳೆದ ಸಂಚಿಕೆಯಲ್ಲಿ ಓದಿದ್ದೀರಿ ತಾನೇ. ಬಂಟ್ವಾಳ ಹೃದಯ ಭಾಗದ ಮಿನಿ ವಿಧಾನಸೌಧದಲ್ಲಿ ಮುಕ್ಕಲು ರೆಡಿಯಾಗಿ ಕೂತ ತಿಮಿಂಗಿಲಗಳ ಬಗ್ಗೆ ವಿಸ್ತೃತ ವರದಿಯನ್ನು ದಾಖಲಿಸಿದ್ದೆವು. ಅಲ್ಲಿ ಕುರ್ಚಿಗೆ ಅಂಟಿಕೊಂಡು ಕೂತಿರುವ ಅಧಿಕಾರಿಯೊಬ್ಬನ ರಗಳೆಯನ್ನು ಓದಿರಬೇಕು ತಾನೇ. ಇದೀಗ ಈತನ ಒಂದೊಂದು ಬಣ್ಣ ಬಯಲಾಗುತ್ತಿದೆ. ಬಂಟ್ವಾಳ ತಾಲೂಕಿನಲ್ಲೇ ಪರಮಭ್ರಷ್ಟ ಈತ. ವಿವಿಧ ನಾಮಕರಣದಿಂದ ಬಂಟ್ವಾಳ ತಾಲೂಕಿನಲ್ಲಿ ಕುಖ್ಯಾತಿಯ ಈತನ ದಗಲ್ಬಾಜಿ ಪುರಾಣಗಳು ಒಂದೊಂದಾಗಿ ಹೊರಬರುತ್ತಿದೆ. 12 ವರ್ಷಗಳ ಮುಂಚೆ ಪಾಣೆಮಂಗಳೂರು ಕಸ್ಬಾದಲ್ಲಿ […]

Continue Reading

ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಿಟ್ಲ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ.

ವಿಟ್ಲದ ಹೃದಯ ಭಾಗದ ನಾಲ್ಕು ರಸ್ತೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಜಂಟಿಯಾಗಿ ಸಾರಿಗೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ನಡೆಸಿದರು. ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದ್ದರೂ ಬೇಕಾಬಿಟ್ಟಿಯಾಗಿ ನಿಯಮ ಉಲ್ಲಂಘಿಸುವ ಸವಾರರಿಗೆ ಇಂದಿನ ಕಾರ್ಯಾಚರಣೆ ಬಿಸಿ ಮುಟ್ಟಿಸಿದೆ. ಮಾಸಾಚರಣೆ ಅಂಗವಾಗಿ ಯಾವುದೇ ದಂಡ ವಿಧಿಸದೇ ಸವಾರರಿಗೆ ಕಾನೂನಿನ ಬಗ್ಗೆ ವಿವರಿಸಿದ ಅಧಿಕಾರಿಗಳು ಮಿತಿ ದರದಲ್ಲಿ ತಲಾ ಐನೂರರಂತೆ ಹೆಲ್ಮೆಟ್ ಪಡೆಯಲು ಸೂಚಿಸಿದರು. ಎಳೆಯ ಪುಟಾಣಿಗಳ ಬೇಜವಾಬ್ದಾರಿಯಿಂದ ಕುಳ್ಳಿರಿಸುವ ಸವಾರರಿಗೆ […]

Continue Reading

ಅಮ್ಮುಂಜೆ: ರಿಕ್ಷಾ ಪಲ್ಟಿ; ಚಾಲಕ ಸ್ಪಾಟ್ ಡೆತ್: ಮೂವರು ಮಕ್ಕಳಿಗೆ ಗಂಭೀರ ಗಾಯ

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕಬೈಲ್ ಗಾಣೆಮಾರ್ ಎಂಬಲ್ಲಿ ಫೆಬ್ರವರಿ 14 ರ ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಚರಂಡಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ರಿಕ್ಷಾದಲ್ಲಿದ್ದ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಎಡಪದವು ಮಿಜಾರಿನಲ್ಲಿ ನಡೆಯುತ್ತಿರುವ ಜಾತ್ರೆಗೆ ಸಂಬಂಧಿಕ ಮೂವರು ಮಕ್ಕಳೊಂದಿಗೆ ತೆರಳಿದ್ದ ಮಹಾಬಲ ಪೂಜಾರಿ ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಚಾಲಕನ […]

Continue Reading

ಸ್ಯಾಂಡಲ್ ವುಡ್ ಗೆ ‘ಕಪ್ಪು’.. ಕೋಸ್ಟಲ್ ವುಡ್ ಗೆ ‘ಚಿಪ್ಪು’

ಒರಿಯರ್ದೊರಿ ಅಸಲ್..! ತುಳು ಚಿತ್ರರಂಗ ಸಾಗಿ ಬಂದ ಹಾದಿ ಹೂವ ಹಾಸಿಗೆಯಲ್ಲ.ಕನ್ನಡ ಚಿತ್ರರಂಗದ ಮಡಿಲಲ್ಲೇ ತುಳು ಚಿತ್ರರಂಗವೂ ಇದೆ. ಸೀಮಿತ ಮಾರುಕಟ್ಟೆ, ಸೀಮಿತ ಬಜೆಟ್‌ನಲ್ಲಿಯೇ ಜನರನ್ನು ರಂಜಿಸುತ್ತಾ, ಪ್ರಯೋಗಗಳನ್ನು ಮಾಡುತ್ತಾ ಬಹುದೂರ ಸಾಗಿ ಬಂದಿದೆ ತುಳು ಚಿತ್ರೋದ್ಯಮ. ಅರ್ಧ ಶತಕ ದಾಟಿರುವ ತುಳು ಚಿತ್ರೋದ್ಯಮ ಸಾಗಿ ಬಂದ ಹಾದಿ ಹೂವಿನದ್ದಾಗಿರಲಿಲ್ಲ. ಹಲವು ಕಲ್ಲು-ಮಳ್ಳುಗಳನ್ನು ದಾಟಿಯೇ ಐದು ದಶಕ ತನ್ನ ಅಸ್ಥಿತ್ವ ಉಳಿಸಿಕೊಂಡು ಬಂದಿದೆ. ಅಸ್ಥಿತ್ವ ಉಳಿಸಿಕೊಳ್ಳುವ ಹೋರಾಟ ಈಗಲೂ ಜಾರಿಯಲ್ಲಿದೆ. ತುಳು ಚಿತ್ರರಂಗದ ಇತಿಹಾಸ ಆರಂಭವಾಗುವುದು ‘ಎನ್ನ […]

Continue Reading

ಶಿಕ್ಷಕಿಯರಿಬ್ಬರ ಜಡೆಜಗಳ. ಕನ್ಯಾನ-ಕಣಿಯೂರು ಸರ್ಕಾರಿ ಶಾಲೆಯ ದುರಂತ ಕಥೆ.

ಅಧಿಕಾರಿಗಳ ಮುಂದೆ ಶಿಕ್ಷಕಿಯರ ಜನ್ಮ ಜಾಲಾಡಿ ಪೋಷಕರ ಆಕ್ರೋಶ.‌ ವಿಟ್ಲ: ಶಿಕ್ಷಕಿಯರಿಬ್ಬರ ಒಣ ಪ್ರತಿಷ್ಠೆ ಮತ್ತು ಒಳಜಗಳದಿಂದಾಗಿ ಕನ್ಯಾನ ಗ್ರಾಮದ ಕಣಿಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಂತಾಗಿದೆ. ನಲ್ವತ್ತಾರು ವಿದ್ಯಾರ್ಥಿಗಳಿರುವ ಕಣಿಯೂರು ಸರ್ಕಾರಿ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದಾರೆ. ಇಪ್ಪತ್ತಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನಿತಾ ಎಂಬವರು ಮುಖ್ಯ ಶಿಕ್ಷಕಿಯಾಗಿದ್ದಾರೆ. ಏಳೆಂಟು ವರ್ಷಗಳಿಂದ ಲವಿನಾ ಎಂಬವರು ಸಹಾಯಕ ಶಿಕ್ಷಕಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಸನ ಮೂಲದ ಸುಮಯ್ಯ ಎಂಬವರು ಇದೇ ಕಣಿಯೂರು ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದಾರೆ. […]

Continue Reading