ಪೆಬ್ರವರಿ 13, 14ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರ ವಿಧಾನಸೌಧ ಚಲೋ ಅಹೋರಾತ್ರಿ ಹೋರಾಟ

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಿಂಗಳಿಗೆ ರೂ. 15 ಸಾವಿರ ಪ್ರೋತ್ಸಾಹಧನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿರುವ ಆಶಾ ಕಾರ್ಯಕರ್ತೆಯರು, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಇದೇ ಪೆಬ್ರವರಿ 13 ಮತ್ತು 14ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ‘ವಿಧಾನಸೌಧ ಚಲೋ’ ಅಹೋರಾತ್ರಿ ಹೋರಾಟಹಮ್ಮಿಕೊಂಡಿದ್ದಾರೆ. ಪ್ರೋತ್ಸಾಹಧನಕ್ಕೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಆಗುತ್ತಿರುವ ವಂಚನೆ ತಡೆಯಲು ಆರ್.ಸಿ.ಎಚ್. ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಬೇರ್ಪಡಿಸಬೇಕು. ಮೊಬೈಲ್ ಬಳಕೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮೊಬೈಲ್ […]

Continue Reading

ಶೋಯಿಬ್​ನಿಂದ ಒಂದೇ ಒಂದು ರೂಪಾಯಿ ಜೀವನಾಂಶ ಪಡೆಯದಿರಲು ಸಾನಿಯಾ ನಿರ್ಧಾರ.!

ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇತ್ತು. ಆದರೆ, ಸಾನಿಯಾ ಆಗಲಿ, ಶೋಯಿಬ್​ ಆಗಲಿ ಅಧಿಕೃತವಾಗಿ ಮಾತನಾಡಿರಲಿಲ್ಲ. ಆದರೆ, ಅವರ ನಡೆ-ನುಡಿ ಮಾತ್ರ ಇಬ್ಬರ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿತ್ತು. ಇತ್ತೀಚೆಗಷ್ಟೇ ಸಾನಿಯಾ, ಮದುವೆ ಮತ್ತು ಡಿವೋರ್ಸ್​ ಬಗ್ಗೆಯೂ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದು ಕೂಡ ವದಂತಿ ಎಂದೇ ಹೇಳಲಾಗಿತ್ತು. ಆದರೆ […]

Continue Reading

ಹೃದಯಾಘಾತದಂತಹ ಪ್ರಕರಣಗಳು ಕೊರೊನಾದ ಕೊಡುಗೆಯಾಗಿದೆ. 2024ರಲ್ಲಿ ಹೃದಯಾಘಾತದಂತಹ ಪಿಡುಗು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ

ವಿಶ್ವದ ಹಲವಾರು ದೇಶಗಳು ಮತ್ತೊಮ್ಮೆ ಕೋವಿಡ್ ಪ್ರಕರಣಗಳ ಎದುರಿಸುತ್ತಿವೆ. ಇದು ಜಾಗತಿಕ ಆತಂಕಕ್ಕೂ ಕಾರಣವಾಗಿದೆ. ಕೋವಿಡ್‌ನಿಂದ ಇಡೀ ವಿಶ್ವವೇ ಚೇತರಿಸಿಕೊಳ್ಳಲಾದಷ್ಟು ಪರಿಣಾಮ ಎದುರಿಸಿ ಬಿಟ್ಟಿದೆ. ಹೀಗಾಗಿ ಈ ದಿನಗಳಲ್ಲಿ ಕೇಳಿಬರುತ್ತಿರುವ ಹೊಸ ರೂಪಾಂತರಗಳು ಮತ್ತಷ್ಟು ಭೀತಿ ಸೃಷ್ಟಿಸಿವೆ. ಅದರಲ್ಲೂ ಯೂರೋಪ್ ಖಂಡದಲ್ಲಿ ಕೋವಿಡ್ ಮತ್ತೆ ಆವರಿಸುತ್ತಿದೆ. ಆದರೆ ಕೋವಿಡ್‌ಗಿಂತಲೂ ಅದರ ನಂತರದ ಪರಿಣಾಮವೇ ಅತ್ಯಂತ ಭೀಕರ ಎನಿಸುತ್ತಿದೆ. ಇತ್ತೀಚಿಗೆ ನಾವು ಹೃದಯಾಘಾತದಂತಹ ಪ್ರಕರಣಗಳನ್ನು ಎದುರಿಸುತ್ತಿರುವುದು ಸಹ ಇದರ ಕೊಡುಗೆಯಾಗಿದೆ. ಆರೋಗ್ಯವಂತರೂ ಸಹ ಹೃದಯಾಘಾತದಂತಹ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇನ್ನು […]

Continue Reading

ಜೆಎನ್.1 ಆತಂಕಪಡುವ ಉಪತಳಿ ಅಲ್ಲ; ಸೋಂಕಿನಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೃತರಾಗಲಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ: WHO ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್

ದೇಶದಾದ್ಯಂತ ಮತ್ತೆ ಕೊರೊನಾ ಉದ್ಭವ ಭೀತಿ ಉಂಟಾಗಿದ್ದು, ಈಗಾಗಲೇ ಅಂದಾಜು ಮೂರು ಸಾವಿರದಷ್ಟು ಕೊರೊನಾ ಸೋಂಕಿತರು ದೇಶದಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ “ಜೆಎನ್‌.1 ಆತಂಕಕಾರಿ ಉಪತಳಿಯಾಗಿ ಮಾರ್ಪಟ್ಟಿಲ್ಲ. ಕೇವಲ ಆಸಕ್ತಿಕರ ಉಪತಳಿ ಎನಿಸಿದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದಿದ್ದಾರೆ. “ಜನರು ಮುಂಜಾಗ್ರತೆ ವಹಿಸುವುದು ಮುಖ್ಯ. ಸುಖಾಸುಮ್ಮನೆ ಆತಂಕಪಡುವ ಅಗತ್ಯವಿಲ್ಲ. ಜೆಎನ್ 1 ಸೋಂಕಿನಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮೃತರಾಗಲಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ. […]

Continue Reading

ಇಸ್ರೇಲಿನ ಗುಪ್ತಚರ ಏಜೆಂಟ್ ನನ್ನು ಗಲ್ಲಿಗೇರಿಸಿದ ಇರಾನ್.!

ತನ್ನ ಗೌಪ್ಯ ಆಪರೇಶನ್‌ಗಳಿಂದ ಖ್ಯಾತಿ ಪಡೆದ ಮೊಸಾದ್‌ ಸ್ಪೈ ಯ ಒಬ್ಬರನ್ನು ಗಲ್ಲಿಗೇರಿಸುತ್ತಿದ್ದೇವೆ ಅಂತ ಇರಾನ್‌ ಹೇಳಿಕೆ ನೀಡಿದೆ. ಅಮೆರಿಕದ CIA ಬಿಟ್ರೆ ಅತ್ಯಂತ ಗೌಪ್ಯ ಹಾಗೂ ಎದುರಾಳಿಗೆ ಸುಳಿವೇ ಸಿಗದಂತೆ ಆಪರೇಶನ್‌ ಮಾಡಿ ಮುಗಿಸೋ ಏಜೆನ್ಸಿ ಯಾವುದಾದರೂ ಇದ್ದರೆ ಇಸ್ರೇಲಿನ ಮೊಸಾದ್‌ ಮಾತ್ರ. ಈಗ ಆ ಮೊಸಾದ್‌ನ ಏಜೆಂಟ್‌ ಒಬ್ಬನನ್ನು ನೇಣಿಗೆ ಏರಿಸುತ್ತಿದ್ದೇವೆ ಅಂತ ಇರಾನ್‌ ಹೇಳಿ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಇರಾನಿ ಸಿಸ್ತಾನ್-ಬಲೂಚೆಸ್ತಾನ್‌ ಪ್ರಾಂತ್ಯದ ಜಾಹೆದಾನ್‌ ಜೈಲಲ್ಲಿ ಈ ಏಜೆಂಟನನ್ನು ಗಲ್ಲಿಗೇರಿಸಲಾಗಿದೆ […]

Continue Reading

ಮೂಲಭೂತವಾದಿ ಗುರು ಪತ್ವಂತ್‌ಸಿಂಗ್‌ ಪನ್ನುನ್ ಹತ್ಯೆ ಪ್ರಕರಣ; FBI ಮುಖ್ಯಸ್ಥ ಮುಂದಿನ ವಾರ ಭಾರತಕ್ಕೆ ಭೇಟಿ

ಅಮೆರಿಕದ ಫೆಡೆರೆಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ (FBI) ಡೈರೆಕ್ಟರ್‌ ಕ್ರಿಸ್ಟೋಫರ್‌ ವ್ರೇ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಂತ ಭಾರತದ ಅಮೆರಿಕನ್‌ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ. ಅಂದ ಹಾಗೆ ಸಿಖ್‌ ಮೂಲಭೂತವಾದಿ ಗುರು ಪತ್ವಂತ್‌ಸಿಂಗ್‌ ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತೀಯ ಸರ್ಕಾರಿ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಅಂತ ಅಮೆರಿಕ ಆರೋಪ ಮಾಡಿದೆ. ಇದೀಗ ಪನ್ನುನ್‌ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿಕ್ಕೆ ಕ್ರಿಸ್ಟೋಫರ್‌ ಭಾರತಕ್ಕೆ ಬರಲಿದ್ದಾರೆ ಅಂತ ತಿಳಿದು ಬಂದಿದೆ. ಇತ್ತ ಭಾರತ ಕೂಡ ಇದರ […]

Continue Reading

ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿ; ಇಡೀ ದಕ್ಷಿಣ ಏಷ್ಯಾದಲ್ಲೇ ಮೊದಲ ಪ್ರಕರಣ

ಸುಪ್ರೀಂ ಕೋರ್ಟ್ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಐದು ತಿಂಗಳ ನಂತರ ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದ್ದು ಹಾಗೆ ಮಾಡಿದ ಮೊದಲ ದಕ್ಷಿಣ ಏಷ್ಯಾದ ದೇಶವಾಗಿದೆ. ಟ್ರಾನ್ಸ್-ವುಮನ್ 35 ವರ್ಷದ ಮಾಯಾ ಗುರುಂಗ್ ಮತ್ತು 27 ವರ್ಷದ ಸುರೇಂದ್ರ ಪಾಂಡೆ ಸಲಿಂಗಿಗಳು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ. 2007ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ ಅನುಮತಿ ನೀಡಿತ್ತು. 2015ರಲ್ಲಿ ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನವು ಲೈಂಗಿಕ […]

Continue Reading

ಅಪರಾಧ ಆಧಾರಿತ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಕೊನೆಗೆ ತಾನೇ ಕೊಲೆಗಾರ್ತಿ ಆದವಳ ವಿಚಿತ್ರ ಕಥೆಯಿದು

ಜಗತ್ತಿನಲ್ಲಿ ಎಂಥೆಂಥಾ ವಿಚಿತ್ರ ಹಾಗೂ ಭಯಾನಕ ವ್ಯಕ್ತಿಗಳಿರುತ್ತಾರೆ ಎಂಬುದಕ್ಕೆ ಈಕೆಯೇ ಸಾಕ್ಷಿ. ಅಪರಾಧ ಆಧಾರಿತ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಕೊನೆಗೆ ತಾನೇ ಕೊಲೆಗಾರ್ತಿಯಾದವಳ ವಿಚಿತ್ರ ಕಥೆಯಿದು. ದಕ್ಷಿಣ ಕೊರಿಯಾದಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಹತ್ಯೆಗೈದ ಆರೋಪದಲ್ಲಿ ಜಂಗ್ ಯೂ-ಜಂಗ್ ಎಂಬ ಯುವತಿಗೆ ದಕ್ಷಿಣ ಕೊರಿಯಾದ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ವಿಚಾರಣೆ ವೇಳೆ ತಾನು ಕೊಲೆ ಹೇಗೆ ಮಾಡುವುದು ಮತ್ತು ಕೊಲೆ ಬಳಿಕ ಏನೇನು ಆಗುತ್ತದೆ ಎಂಬ ಬಗ್ಗೆ ಕುತೂಹಲದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಜಂಗ್ […]

Continue Reading

ಸೌದಿ ಅರೇಬಿಯಾ: ಮಂಗಳೂರು ಯೂತ್ ಫೆಡರೇಷನ್ ಅಸ್ತಿತ್ವಕ್ಕೆ

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದ ವಿದ್ಯಾರ್ಥಿವೇತನ, ತೀರಾ ಬಡವರಿಗೆ ಅವಶ್ಯಕವಾದ ವೈದ್ಯಕೀಯ ಚಿಕಿತ್ಸೆ ಹಾಗೂ ಇನ್ನಿತರ ಹಲವಾರು ಅಂಶಗಳನ್ನೊಳಗೊಂಡ ಸಮಾಜಮುಖಿ ಕಾರ್ಯಗಳ ಅಭಿವೃಧ್ಧಿಗಾಗಿ ನವೆಂಬರ್ 18, 2023 ರ ಶನಿವಾರದಂದು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಮಂಗಳೂರು ಯೂತ್ ಫೆಡರೇಷನ್ (MYF) ರಚಿಸಲಾಯಿತು. ಮಂಗಳೂರು ಯೂತ್ ಪೆಡೆರೇಶನ್ ಇದರ ಸಲಹೆಗಾರರಾಗಿ ಮುಶ್ತಾಖ್ ಕುದ್ರೋಳಿ ಮತ್ತು ಸಿರಾಜ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪೆಡೆರೇಷನ್ ಅಧ್ಯಕ್ಷರಾಗಿ ಫಹೀಂ ಅಖ್ತರ್, ಪ್ರಧಾನ ಕಾರ್ಯದರ್ಶಿಯಾಗಿ ಶಾಹ್ ನವಾಝ್, ಉಪಾಧ್ಯಕ್ಷರಾಗಿ ಮುಹಮ್ಮದ್ […]

Continue Reading

ಭಾರತದ ನೌಕಾಪಡೆಯ ಮಾಜಿ ಸಿಬ್ಬಂದಿಗಳ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಖತರ್ ನ್ಯಾಯಾಲಯ

ಭಾರತದ ನೌಕಾಪಡೆಯ 8 ಮಂದಿ ಮಾಜಿ ಸಿಬ್ಬಂದಿಗಳನ್ನು ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಪಡಿಸಿರುವುದನ್ನು ಪ್ರಶ್ನಿಸಿ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್‌ ನ್ಯಾಯಾಲಯ ಪುರಸ್ಕರಿಸಿದೆ. ಅಲ್ಲದೇ, ಪ್ರಕರಣ ಸಂಬಂಧಿಸಿದಂತೆ ನಿರ್ಣಯ ತೆಗೆದುಕೊಳ್ಳುವ ಮುನ್ನ ಮತ್ತೆ ಮರುಪರಿಶೀಲನೆ ನಡೆಸಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ದಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ ಹಾಗೂ ಕನ್ಸಲ್ಟೆನ್ಸಿ ಸೇವೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದ 8 ಮಂದಿ ನೌಕಾ ಸಿಬ್ಬಂದಿಯನ್ನು 2022ರಲ್ಲಿ ಬಂಧಿಸಲಾಗಿತ್ತು. ಅದಾದ ಒಂದು ವರ್ಷದ ಬಳಿಕ ಅ.26ರಂದು ಬಂಧಿತರಿಗೆ ಕತಾರ್‌ ಕೋರ್ಟ್‌ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಇದಕ್ಕೆ ಭಾರತ […]

Continue Reading