ಬಂಟ್ವಾಳ ಮೆಸ್ಕಾಂ ಸಹಾಯಕ ಇಂಜಿನಿಯರ್ ಸರ್ವಾಧಿಕಾರಿ ಧೋರಣೆ ವಿರುದ್ಧ ಆಕ್ರೋಶ-ಪ್ರತಿಭಟನೆಗೆ ಸಿದ್ಧತೆ

ಬಂಟ್ವಾಳ ಮೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಇಂಜಿನಿಯರ್ ( ವಿ) ಅರುಣೋದಯ ಅವರ ದುರ್ವರ್ತನೆ ಹಾಗೂ ಸರ್ವಾಧಿಕಾರಿ ಧೋರಣೆಯ ವಿರುದ್ಧ ಗುತ್ತಿಗೆದಾರರು ಹಾಗೂ ಗ್ರಾಹಕರು ವ್ಯಾಪಕ ಆಕ್ರೋಶ ಪಡಿಸಿದ್ದು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ.ಗುತ್ತಿಗೆದಾರರು ಮತ್ತು ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದೆ ಉಢಾಪೆ ಉತ್ತರ ನೀಡುತ್ತಾ, ಕಡತಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬ ಧೋರಣೆ ತೋರುತ್ತಾ, ಅನಗತ್ಯ ನಿರ್ಲಕ್ಷ್ಯ ವಹಿಸುತ್ತಿರುವ ಅರುಣೋದಯ ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲವೇ ಶೀಘ್ರ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿದ್ದು ತಕ್ಷಣ […]

Continue Reading

ಪ್ಲಾಸ್ಟಿಕ್ ಕವರ್ ತಯಾರಿಸುವ ಯಂತ್ರ ಕೊಟ್ಟು‌ ಅಂದ್ರ ಮೂಲದ ಉದ್ಯಮಿಗೆ ಮೋಸ, ಎನ್ವಿ ಬಯೋಟೆಕ್ ಕಂಪೆನಿ ಮಾಲಕನ ವಿರುದ್ದ ದೂರು ದಾಖಲು

ಬೆಳ್ತಂಗಡಿ: ಎನ್ವಿ ಗ್ರೀನ್ ಬಯೋಟೆಕ್ ಕಂಪೆನಿ ಒಡೆಯ ಅಶ್ವಥ್ ಹೆಗ್ಡೆ ಹಾಗೂ ಮೂರು ಮಂದಿ ಸೇರಿ ಪ್ಲಾಸ್ಟಿಕ್ ಕವರ್ ತಯಾರಿಸುವ ಯಂತ್ರ ಕೊಟ್ಟು‌ ಅಂದ್ರ ಮೂಲದ ಉದ್ಯಮಿ ಪ್ರಣಯ್ ಕುಮಾರ್ ಎಂಬವರಿಗೆ ಮೋಸ ಮಾಡಿದ್ದಾರೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ನಕಲಿ ಯಂತ್ರಗಳ ಬಗ್ಗೆ ಪ್ರಚಾರಗಿಟ್ಟಿಸಿ ಹಲವರಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಅಶ್ವಥ್ ಹೆಗ್ಡೆ ಹಾಗೂ ಅವರ ಕಂಪೆನಿಯ ಡೈರೆಕ್ಟರ್ ಗಳಾದ ಅಕ್ಷತಾ‌ ಹೆಗ್ಡೆ, ರಾಘವೇಂದ್ರ ನಾಯಕ್ ಇವರುಗಳ ಮೇಲೆ ಆಂದ್ರ ಮೂಲದ ಉಧ್ಯಮಿ ಪ್ರಣಯ್ ಕುಮಾರ್ […]

Continue Reading

ಜನಪ್ರತಿನಿದಿಗಳ ನಿರ್ಲಕ್ಷಕ್ಕೆ ಕಾರಣವಾಯಿತೇ.. ಹೊಯ್ಸಳ ದೊರೆ ವಿಷ್ಟುವರ್ಧನನ ಸಮಾಧಿ.!

ವಿಷ್ಣುವರ್ಧನನ ಸಮಾಧಿ ಎಲ್ಲಿದೆ.? ಹವಳ್ಳಿ ಶಾಸನದಲ್ಲಿರುವುದು ಸುಳ್ಳೆ.?ರಾಜವಿಷ್ಣುವರ್ಧನನ ಶವ ಕಾಣದಂತೆ ಮಾಯಾವಾಗಿದ್ದಾದರೂ ಎಲ್ಲಿ.? ✍️. ಎಂ.ಎ.ಸಲಾವುದ್ದೀನ್ ಹೊಯ್ಸಳರ ಮೂಲ ಸ್ಥಾನ ತಾಲ್ಲೂಕಿನ ಶಶಕಪುರ ಈಗಿನ ಅಂಗಡಿ ಗ್ರಾಮವಾಗಿದ್ದರೆ. ಹೊಯ್ಸಳ ವಂಶದ ನಾಲ್ಕನೇ ಅರಸ ವಿಷ್ಣುವರ್ಧನನ ಸಮಾಧಿ ಮೂಡಿಗೆರೆ ಪಟ್ಟಣದ ಕೆಲವೇ ಕಿಲೋ ಮೀಟರ್ ಗಳ ಅಂತರದಲ್ಲಿ ಗೋಚರಿಸಿದ್ದು ಅಚ್ಚರಿಯ ಸಂಗತಿಯಾಗಿದೆ.ಕಳೇದೆರಡು ವರ್ಷಗಳ ಹಿಂದೆ ಚಂದನ ಸುದ್ದಿ ಪತ್ರಿಕೆ & ಯೂಟ್ಯೂಬ್‌ಗೆ ಈ ಸಮಾಧಿ ಪತ್ತೆಯಾಗಿದ್ದು ವರದಿ ಮತ್ತು ಪ್ರಸಾರವನ್ನು ಮಾಡಿತ್ತು. ವರದಿಯನ್ನು ಗಮನಿಸಿದ ಹಾಸನ ಪುರಾತತ್ವ ಇಲಾಖೆ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರುಗಳ ಮದ್ಯೆ ಹುಳಿ ಹಿಂಡುವ ಪ್ರಯತ್ನ; ಬ್ಲಾಕ್ ಅಧ್ಯಕ್ಷರುಗಳಿಂದ ಪೊಲೀಸ್ ಠಾಣೆಗೆ ದೂರು

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಎಂಟ್ರಿ ನಂತರ ಪಕ್ಷಕ್ಕೆ ಹೊಸ ಹುರುಪು ಬಂದಿದ್ದು, ಸಂಘಟನೆ ಮೂಲಕ ಮತ್ತೆ ಪಕ್ಷವನ್ನು ಗತಕಾಲದ ವೈಭವಕ್ಕೆ ಮರಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಈ ನಡುವೆ ಅನ್ಯಪಕ್ಷದಲ್ಲಿ ಗುರುತಿಸಿಕೊಂಡಿರುವ ಕೆಲವರು ಇಲ್ಲಸಲ್ಲದ ಆರೋಪ ಮಾಡಿ ಜಿಲ್ಲಾ ನಾಯಕರ ಮಧ್ಯೆ ಇನಾಯತ್ ಅಲಿ ಯವರನ್ನು ಎತ್ತಿಕಟ್ಟುವ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದ ಪ್ರಯತ್ನ ನಡೆಸುತ್ತಿದ್ದು, ಈ ಬಗ್ಗೆ ಸುರತ್ಕಲ್,ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸುರತ್ಕಲ್ ಮತ್ತು […]

Continue Reading

ಫೆ. 25,26,27 ಮೂರು ದಿನ ಕಲ್ಲಾಪು ಬಳಿ ಯುನಿಟಿ ಸಭಾಂಗಣದಲ್ಲಿ ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನ

ಮಂಗಳೂರು : ಡಿವೈಎಫ್ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನವು ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ಫೆಬ್ರವರಿ 25, 26, 27-2024 ರಂದು ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮುಖಂಡರು ಮಾಹಿತಿ ನೀಡಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಹುತಾತ್ಮ ವೀರರಾದ ಭಗತ್ ಸಿಂಗ್,‌ ಚಂದ್ರಶೇಖರ್ ಆಜಾದ್, ಅಶ್ಪಾಕುಲ್ಲಾ ಖಾನ್ , ಮೊದಲಾದ ಕ್ರಾಂತಿಕಾರಿಗಳ ಆಶಯದೊಂದಿಗೆ ಪಂಜಾಬಿನ ಲೂಧಿಯಾನದಲ್ಲಿ 1980 ರಲ್ಲಿ ಸ್ಥಾಪನೆಯಾಗಿ ಕಳೆದ 44 ವರ್ಷಗಳಿಂದ “ಸರ್ವರಿಗೂ […]

Continue Reading

ನನ್ನನ್ನು ಒಪ್ಪುವ ಮತ್ತು ಅರಿತಿರೋ ಎಲ್ಲಾ ಜಾತಿ, ಧರ್ಮ, ಪಂಥ, ಪಂಗಡ, ಎಡ-ಬಲ, ಸಮಾನ ಮನಸ್ಕ ಗೆಳೆಯರಿಗಾಗಿಯಷ್ಟೇ…… ಅತೃಪ್ತ ಆತ್ಮಗಳಿಗಲ್ಲ, ನನ್ನ ಬಗ್ಗೆ ಅರಿತಿರೋ ಆತ್ಮೀಯರಿಗೆ.!

✍️. ಭರತ್ ರಾಜ್, ದ.ಕ ಜಿಲ್ಲಾ ವರದಿಗಾರ, ಸುವರ್ಣ ನ್ಯೂಸ್ ಕಳೆದ 15 ವರ್ಷಗಳಲ್ಲಿ ವರದಿ ಮಾಡಿದ ಯಾವುದೇ ಸುದ್ದಿಯ ಬಗ್ಗೆ ಏನೇ ಪರ-ವಿರೋಧಗಳು ಬಂದರೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಮಾಧ್ಯಮ ಜಗತ್ತಿನಲ್ಲಿ ಸುದ್ದಿಗಳ ಬಗ್ಗೆ ಟೀಕೆ-ಟಿಪ್ಪಣಿಗಳು ಸಹಜ, ಹಾಗಾಗಿ ಎಲ್ಲವನ್ನೂ ತಾಳ್ಮೆಯಿಂದ ಸ್ವೀಕರಿಸಿದ್ದೇನೆ. ಆದರೆ ಇವತ್ತು ಮಧ್ಯಾಹ್ನದಿಂದ ದೃಶ್ಯ ಮಾಧ್ಯಮದ ತಾಂತ್ರಿಕ ಜ್ಞಾನ ಇರದ ಕೆಲ ಅತೃಪ್ತ ಆತ್ಮಗಳು ವಿಡಿಯೋವೊಂದನ್ನ ಹರಿಬಿಟ್ಟು ಸಾಮಾಜಿಕ ತಾಣಗಳಲ್ಲಿ ಒಂದೇ ಸಮನೇ ಅರಚಾಡುತ್ತಿವೆ. ಹಾಗಂತ ಈ ಅರಚಾಟಕ್ಕೂ ನಾನು ಪ್ರತಿಕ್ರಿಯೆ ನೀಡುವವನಲ್ಲ‌. […]

Continue Reading

ಮಂಗಳೂರು ಮಹಾನಗರ ಪಾಲಿಕೆ: ಇಲ್ಲಿ ಲಂಚ ಮುಟ್ಟದವ ಪಾಪಿ.!

ಯಾರೇ ಅಧಿಕಾರಕ್ಕೂ ಬಂದರೂ ನಿವೃತ್ತಿಯಾದರೂ ಪರ್ಮನೆಂಟ್ ಗೂಟ ಹೊಡೆದ ಆರೋಗ್ಯಾಧಿಕಾರಿ.! ಇಲ್ಲಿದೆ ಬ್ರಹ್ಮಾಂಡ ಭ್ರಷ್ಟಾಚಾರದ ಇಂಚಿಂಚೂ ಕಹಾನಿ ಮಂಗಳೂರು ಮಹಾನಗರ ಪಾಲಿಕೆ ಭ್ರಷ್ಟ ತಿಮಿಂಗಿಲಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಇಲ್ಲಿ ಏನುಂಟು ಏನಿಲ್ಲ.. ಮಹಾನಗರ ಪಾಲಿಕೆಯ ಒಂದೊಂದು ಗೋಡೆಗಳು ಒಂದೊಂದು ಕಥೆ ತೆರೆದಿಡುತ್ತದೆ. ಇಲ್ಲಿ ಅಧಿಕಾರ ಯಾವ ಪಕ್ಷದ್ದು ಅನ್ನುವುದು ಮುಖ್ಯವಲ್ಲ. ಯಾವುದೇ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದ ರೇಟು ಏರಿಕೆಯಾಗುತ್ತಲೇ ಇರುತ್ತದೆ. ಆ ಮಟ್ಟಿಗೆ ಮಂಗಳೂರು ಮಹಾನಗರ ಪಾಲಿಕೆ ಹಂಡಾಲೆದ್ದು ಹೋಗಿದೆ. […]

Continue Reading

ವಿವಾದದ ನಡುವೆ ಸಹಾನುಭೂತಿ: ಮಂಗಳೂರಿನ ಮಿಷನರಿ ಶಾಲೆಗಳ ಮಾದರಿ ನಡತೆ

✍️. ಇಸ್ಮಾಯಿಲ್ ಸುನಾಲ್ ವಕೀಲರು ಮಂಗಳೂರು ಸಮುದ್ರದ ತಂಗಾಳಿಯು, ಇತಿಹಾಸದ ಪಿಸುಮಾತುಗಳನ್ನು ಮತ್ತು ವೈವಿಧ್ಯತೆಯ ಪ್ರತಿಧ್ವನಿಗಳನ್ನು ಹೊತ್ತ ಮಂಗಳೂರಿನ ಗದ್ದಲದ ಬೀದಿಗಳಲ್ಲಿ, ಕರುಣೆ ಮತ್ತು ಜ್ಞಾನೋದಯದ ಭದ್ರಕೋಟೆಯಾಗಿ ಸೇವೆ ಸಲ್ಲಿಸಿದ ಮಿಷನರಿ ಶಿಕ್ಷಣ ಸಂಸ್ಥೆಗಳ ಜಾಲವಿದೆ. ಮಿಷನರಿ ಶಾಲೆಗಳು, ಮಾದರಿ ಶಿಕ್ಷಣ ಸಂಸ್ಥೆಗಳಾಗಿ, ವಿದ್ಯಾರ್ಥಿಗಳ ಬದುಕನ್ನು ರೂಪಿಸುತ್ತ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಶಿಕ್ಷಣ ಸಂಸ್ಥೆಗಳು, ತಲೆಮಾರುಗಳವರೆಗೆ ಭರವಸೆಯ ದಾರಿದೀಪಗಳಾಗಿವೆ, ಶಿಕ್ಷಣ, ಸಾಮಾಜಿಕ ಮೌಲ್ಯಗಳನ್ನು ಕಲಿಸುತ್ತಿರುವ ಈ ಸಂಸ್ಥೆಗಳನ್ನು ಅರಿಯಬೇಕಾದರೆ, ನಾವು ಆ ಶಿಕ್ಷಣ ಸಂಸ್ಥೆಗಳ ಹೆಬ್ಬಾಗಿಲುಗಳ […]

Continue Reading

ಮಂಗಳೂರು: ಉಚ್ಚ ನ್ಯಾಯಾಲಯದ ಆದೇಶದ ಪ್ರತಿ ಲಭಿಸದ ಕಾರಣ ಮಳಲಿ ಮಸೀದಿ ಪ್ರಕರಣ ಸೋಮವಾರಕ್ಕೆ ಮುಂದೂಡಿಕೆ

ಮಳಲಿ ಜುಮ್ಮಾ ಮಸೀದಿ ನವೀಕರಣದ ಸಂದರ್ಭದಲ್ಲಿ ನಡೆದ ವಿವಾದ ಹೊಸ ಚರ್ಚೆಗೆ ಗ್ರಾಸವಾಗಿತ್ತು. ಮಳಲಿ ಮಸೀದಿಯ ವಿವಾದವು 2022 ರ ಎಪ್ರಿಲ್ ತಿಂಗಳ 22ರಂದು ಕೋರ್ಟ್ ಮೆಟ್ಟಿಲೇರಿತ್ತು. ಮಳಲಿ ಮಸೀದಿ ವಿವಾದದಲ್ಲಿ ಉತ್ಖನನ ಮಾಡಿ ಸರ್ವೇ ಮಾಡ ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದು ವಕ್ಪ್ ಇಲಾಖೆಗೆ ಸಂಬಂಧ ಪಟ್ಟ ಸ್ಥಳ ಅದ್ದರಿಂದ ವಕ್ಪ್ ಟ್ರಿಬ್ಯೂನಲ್ ನಲ್ಲಿಯೇ ವಿಚಾರಣೆ ನಡೆಸಬೇಕು ಎಂದು ಮಸೀದಿ ಪರ ವಾದ ಮಂಡಿಸಿ, ಕೊನೆ ಗಳಿಗೆಯಲ್ಲಿ ಮಸೀದಿ ಪರ ಪಿರ್ಯಾದಿದಾರರು ಈ ಬಗ್ಗೆ […]

Continue Reading

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗವೊಂದು ರಾಜ್ಯಾಧ್ಯಕ್ಷರ ಭೇಟಿ ಮಾಡಿ, ಲೋಕಸಭಾ ಟಿಕೇಟ್ ಬಗ್ಗೆ ಚರ್ಚೆ

ಮಂಗಳೂರು ಲೋಕಸಭಾ ಕ್ಷೇತ್ರದ ಎಂ.ಪಿ ಟಿಕೆಟ್‌ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಸಂಭಾವ್ಯ ಅಭ್ಯರ್ಥಿಯೊಬ್ಬರ ಬಗ್ಗೆ ಅಪಸ್ವರ ಎತ್ತಿದೆ. ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಟಿಕೆಟ್‌ ಇಲ್ಲ ಎಂಬುದು ಬಹುತೇಕ ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ಸಂಘ ಹಾಗೂ ಯಡಿಯೂರಪ್ಪ ಅವರಿಗೆ ಒಪ್ಪಿತವಾದ ಅಭ್ಯರ್ಥಿಯ ಹೆಸರು ಈಗ ಮುನ್ನೆಲೆಗೆ ಬಂದಿದೆ. ಆದರೆ, ಜಿಲ್ಲೆಯ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬೇರೆ ಹೆಸರು ಪರಿಗಣಿಸುವಂತೆ […]

Continue Reading