ಕಾಸರಗೋಡು: ತೆಯ್ಯಂ ಕೆಟ್ಟ್ ಮಹೋತ್ಸವದ ವೇಳೆ ಪಟಾಕಿ ಸಿಡಿದು ಬೆಂಕಿ ಹತ್ತಿದ ಪರಿಣಾಮ 150 ಮಂದಿಗೆ ಗಾಯ; ಎಂಟು ಮಂದಿಯ ಸ್ಥಿತಿ ಗಂಭೀರ

ಬೆಳಕಿನ ಹಬ್ಬಕ್ಕೆ ಮುನ್ನವೇ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ. ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕೆಟ್ಟ್ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಕ್ಕೂ ಮಿಕ್ಕ ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಈ ಅವಘಡ […]

Continue Reading

ಮಾವ ಅಳಿಯನ ಹೆಸರಿಗೆ ಆಸ್ತಿ ಬರೆದಿದ್ದರೆ ಮಾತ್ರ ಅಳಿಯ ಕೂಡಾ ಆಸ್ತಿಯಲ್ಲಿ ಹಕ್ಕು ಸಾಧಿಸಬಹುದು: ಕೇರಳ ಹೈಕೋರ್ಟ್

ಮಾವ ಸಂಪಾದಿಸಿದ ಆಸ್ತಿಯನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಕೂಡ ಮಾವನ ಆಸ್ತಿಗೆ ಹಕ್ಕು ಸಾಧಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇರಳ ಹೈಕೋರ್ಟಿನ ಪ್ರಕಾರ, ಯಾವುದೇ ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು. ಆದರೆ, ಇದರ ಹಿಂದೆ ವಿಶೇಷ ಕಾರಣವಿರಬೇಕು. ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು. ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು ಕೇಳುತ್ತಿರುವಾಗ, ಮಾವ […]

Continue Reading

ಚೆಕ್ ಅಮಾನ್ಯ ಪ್ರಕರಣ: ದೂರುದಾರ ಒಪ್ಪಿದರೆ ಮಾತ್ರ ರಾಜಿ; ಏಕಪಕ್ಷೀಯವಾಗಿ ಕೇಸ್ ರದ್ದುಪಡಿಸಲಾಗದು: ಸುಪ್ರೀಂ ಕೋರ್ಟ್

ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ತೀರ್ಪೊಂದರಲ್ಲಿ, ದೂರುದಾರ ಒಪ್ಪಿದರೆ ಮಾತ್ರ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಹಾಗೂ ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಚೆಕ್ ಅಮಾನ್ಯ ಪ್ರಕರಣದ ಫಿರ್ಯಾದಿ ರಾಜಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸದೇ ಇದ್ದಾಗ ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್ 482 ಪ್ರಕಾರ ತನ್ನ ಅಂತರ್ಗತ ಅಧಿಕಾರ ಬಳಸಿ ಚೆಕ್ ಅಮಾನ್ಯ ಪ್ರಕರಣವನ್ನು ರದ್ದುಗೊಳಿಸಲಾಗದು […]

Continue Reading

ಜಗನ್‌ಮೋಹನ್ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ

ಬೆಂಗಳೂರಿನ ಯಲಹಂಕದಲ್ಲಿರುವ 20 ಎಕರೆ, ಸರಸ್ವತಿ ಪವರ್‌ ಹಾಗೂ ಇತರ ಕಂಪನಿಗಳಲ್ಲಿರುವ ಷೇರುಗಳ ಹಂಚಿಕೆ ಕುರಿತಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ ರೆಡ್ಡಿ ಹಾಗೂ ಸೋದರಿ ಕಾಂಗ್ರೆಸ್‌ನ ವೈ.ಎಸ್. ಶರ್ಮಿಳಾ ರೆಡ್ಡಿ ನಡುವೆ ದಾಯಾದಿ ಕಲಹ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಮಕ್ಕಳಾದ ಈ ಇಬ್ಬರ ನಡುವಿನ ಪತ್ರ ಸಮರದಲ್ಲಿ, ತಂದೆಯ ನೆನಪುಗಳೊಂದಿಗೆ, ವೈಯಕ್ತಿ ಆರೋಪ ಹಾಗೂ ಪ್ರತ್ಯಾರೋಪಗಳು ಚರ್ಚೆಗೆ ಗ್ರಾಸವಾಗಿದೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಜಗನ್‌ ಗೆಲುವಿಗೆ ಶರ್ಮಿಳಾ […]

Continue Reading

ಮುಸ್ಲಿಂ ವ್ಯಕ್ತಿ ಒಂದಕ್ಕಿಂತ ಹೆಚ್ಚು ವಿವಾಹ ನೋಂದಣಿ ಮಾಡಬಹುದು: ಬಾಂಬೇ ಹೈಕೋರ್ಟ್

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪುರುಷನಿಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಅವಕಾಶವಿದ್ದು, ಅದನ್ನು ನೋಂದಾಯಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಹೇಳಿದೆ. ಮುಸ್ಲಿಂ ವ್ಯಕ್ತಿಯೊಬ್ಬ ಅಲ್ಜೀರಿಯಾದ ತನ್ನ ಮೂರನೇ ಪತ್ನಿ ನಡುವಿನ ಮದುವೆಯ ನೋಂದಣಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿ.ಪಿ. ಕೊಲಬವಾಲಾ ಹಾಗೂ ನ್ಯಾ. ಸೋಮಶೇಖರ ಸುಂದರೇಶನ್‌ ಅವರಿದ್ದ ಪೀಠವು, ಇದರ ಸಾಧ್ಯತೆ ಕುರಿತು ವಿವಾಹ ಉಪನೋಂದಣಾಧಿಕಾರಿಗೆ ನಿರ್ದೇಶಿಸಿತ್ತು. ಅರ್ಜಿದಾರ ಮೂರನೇ ಮದುವೆಯಾಗುತ್ತಿದ್ದು, ಮಹಾರಾಷ್ಟ್ರ ವಿವಾಹ ನಿಯಂತ್ರಣ ಹಾಗೂ ನೋಂದಣಿ ಕಾಯ್ದೆಯಡಿ ಸಿಂಧುವಲ್ಲ ಎಂದು ಪ್ರಾಧಿಕಾರವು […]

Continue Reading

ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು; ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ.ಡಿ ಕಸಿಯುವಂತಿಲ್ಲ: ಬಾಂಬೆ ಹೈಕೋರ್ಟ್

ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಸಮನ್ಸ್‌ ಪಡೆದವರ ಹೇಳಿಕೆಗಳನ್ನು ತಡರಾತ್ರಿಯವರೆಗೂ ಪಡೆದುಕೊಳ್ಳುವ ಬದಲು ಕಚೇರಿ ಅವಧಿಗ ಸೀಮಿತಗೊಳಿಸಲು ಎಲ್ಲಾ ಯತ್ನ ಮಾಡುವಂತೆ ಜಾರಿ ನಿರ್ದೇಶನಾಲಯ ತನ್ನ ಅಧಿಕಾರಿಗಳಿಗೆ ಸೂಚಿಸಿದೆ.ಕಳೆದ ಏಪ್ರಿಲ್‌ನಲ್ಲಿ ಬಾಂಬೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಸುತ್ತೋಲೆ ಹೊರಡಿಸಿರುವ ಇ.ಡಿ ತನಿಖೆಗೊಳಗಾದವರ ನಿದ್ರಿಸುವ ಹಕ್ಕನ್ನು ಗೌರವಿಸುವುದು ಮಹತ್ವದ್ದು ಎಂದಿದೆ. ಹೊತ್ತಲ್ಲದ ಹೊತ್ತಿನಲ್ಲಿ ಹೇಳಿಕೆ ದಾಖಲಿಸಿ ವ್ಯಕ್ತಿಯ ನಿದ್ರೆಯ ಹಕ್ಕನ್ನು ಇ ಡಿ ಕಸಿಯುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ತನ್ನ ಅಕ್ರಮ ಬಂಧನ ಪ್ರಶ್ನಿಸಿ 64 ವರ್ಷದ […]

Continue Reading

ಪತ್ರಕರ್ತೆ ಗೌರಿ ಲಂಕೇಶ್ ಹಂತಕ ಶಿಂಧೆ ಬಣದ ಪಕ್ಷಕ್ಕೆ ಸೇರ್ಪಡೆ.. ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಆಯ್ಕೆ!

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ನವೆಂಬರ್ 20 ರಂದು ನಡೆಯಲಿರುವ ಮಹಾ ಕದನ ದೇಶದ ಗಮನ ಸೆಳೆದಿದೆ. ಈ ನಡುವೆಯೇ ಆತಂಕಕಾರಿ ಘಟನೆಯೊಂದು ವರದಿಯಾಗಿದ್ದು, ದೇಶವನ್ನೇ ಬೆಚ್ಚಿಬೀಳಿಸಿದ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀಕಾಂತ್ ಪಂಗರ್ಕರ್ ಏಕನಾಥ ಶಿಂಧೆ ಬಣದ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ಅವರ ನಿವಾಸದ ಎದುರೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಬಲಪಂಥೀಯ ವಿಚಾರಧಾರೆಯ ವಿರುದ್ಧ ಅಕ್ಷರ ಸಮರ ಸಾರಿದ್ದ […]

Continue Reading

ಬಡ್ಡಿ ಸಮೇತ ಪರಿಹಾರ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಗ್ರಾಹಕರ ನ್ಯಾಯಾಲಯ ಆದೇಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರಿಗೆ ಆದ ತೊಂದರೆಗೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಬಡ್ಡಿ ಸಮೇತ ಪರಿಹಾರ ನೀಡಲು ಆದೇಶಿಸಿದೆ. ನಿವೃತ್ತ ಸರಕಾರಿ ಅಭಿಯೋಜಕ ನಾಗರಾಜ ಆಚಾರ್, ಬ್ಯಾಂಕ್ ನ ತಮ್ಮ ಖಾತೆ ವಿವರಗಳನ್ನು 2023 ರ ಸೆಪ್ಟೆಂಬರ್ 28 ರಂದು ಪರಿಶೀಲಿಸಿದಾಗ ಎರಡು ದಿನದ ಹಿಂದೆ ಖಾತೆಯ ಯುಪಿಐ ಮೂಲಕ 99,000 ರೂಪಾಯಿ ಮೊತ್ತ ವರ್ಗಾವಣೆಯಾಗಿತ್ತು. ಅವರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆಗೊಂಡಿದ್ದರ ಬಗ್ಗೆ ಬ್ಯಾಂಕಿಂಗ್ ಓಂಬಡ್ಸ್ ಮನ್ ಮತ್ತು ಸಕ್ಷಮ […]

Continue Reading

ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌

ಅಸ್ಸಾಂಗೆ ವಲಸೆ ಬಂದಿರುವವರಿಗೆ ಪೌರತ್ವ ನೀಡುವ, ಭಾರತೀಯ ಪೌರತ್ವ ಕಾಯ್ದೆಯ ‘ಸೆಕ್ಷನ್‌ 6ಎ’ದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌ ಗುರುವಾರ ಬಹುಮತದ ತೀರ್ಪು ನೀಡಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠವು 4:1 ರ ತೀರ್ಪು ನೀಡಿದ್ದು, ‘ಸೆಕ್ಷನ್ 6ಎ’ದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಸಿಜೆಐ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ.ಎಂ.ಸುಂದ್ರೇಶ್ ಹಾಗೂ ಮನೋಜ್‌ ಮಿಶ್ರಾ ಅವರು ‘ಸೆಕ್ಷನ್‌ 6ಎ’ದ ಸಿಂಧುತ್ವ ಎತ್ತಿ ಹಿಡಿದಿದ್ದರೆ, […]

Continue Reading

ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ದೃಢೀಕರಣ ಮಾಡುವಂತಿಲ್ಲ

ನೋಂದಣಿ ಮಾಡಿಸಿಕೊಂಡಲ್ಲಿ ಅದನ್ನು ಗಂಭೀರ ದುರ್ವರ್ತನೆ ಎಂದು ಪರಿಗಣಿಸಿ, ಅಂತಹ ವಕೀಲರ ವಿರುದ್ಧ ಕಾನೂನು ಕ್ರಮ: ಸಚಿವಾಲಯ ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ನೋಟರಿ ವಕೀಲರಿಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರಗಳ ವಿಭಾಗ ಮಹತ್ವದ ಸೂಚನೆ ಹೊರಡಿಸಿದೆ. ದಿನಾಂಕ 10-10-2024ರಂದು ಕಾನೂನು ವ್ಯವಹಾರಗಳ ವಿಭಾಗ ಎಲ್ಲ ನೋಟರಿ ವಕೀಲರಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಇದರಲ್ಲಿ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ನೋಟರಿ ವಕೀಲರು ವಿವಾಹ ನೋಂದಣಿ ಮತ್ತು ವಿವಾಹ ವಿಚ್ಚೇದನದ ಅಫಿಡವಿಟ್‌ಗೆ ದೃಢೀಕರಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. […]

Continue Reading