ಪುತ್ತೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಜುಲೈ 14 ರ ಶುಕ್ರವಾರ ಬಾರ್ಯ ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ಫೈಝಲ್ ಮೂರುಗೋಳಿ ಅವರು ಹೊಟ್ಟೆ ನೋವಿನ ಕಾರಣದಿಂದಾಗಿ ತನ್ನ 4 ವರ್ಷ ಪ್ರಾಯದ ಪಹ್ಲಾ ಎಂಬ ಹೆಣ್ಣು ಮಗುವನ್ನು ಪುತ್ತೂರಿನ ಮಕ್ಕಳ ತಜ್ಞರಾದ ಡಾ.ಶ್ರೀಕಾಂತ್ ಅವರ ಬಳಿ ತಪಾಸಣೆಗೆ ಕರೆದು ಕೊಂಡು ಹೋಗುತ್ತಾರೆ.ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಹೊಟ್ಟೆಯ ಸ್ಕ್ಯಾನ್ ಮಾಡಿ ಬರಲು ತಿಳಿಸುತ್ತಾರೆ. ಚೇತನ ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದಲ್ಲಿ ಫಹ್ಲಾಲ ಹೊಟ್ಟೆಯ ಸ್ಕ್ಯಾನ್ ಮಾಡಿಸಿ ಬಂದು ರಿಪೋರ್ಟ್ ತೋರಿಸಿದಾಗ ವೈದ್ಯರು ರಿಪೋರ್ಟ್ ನೋಡಿದ ಡಾ.ಶ್ರೀಕಾಂತ್ ಮಗುವಿಗೆ ಅಪೆಂಡಿಕ್ಸ್ 9 mm ಇದೆ.ತಕ್ಷಣ ಅಡ್ಮೀಟ್ ಆಗಿ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡುವುದು ಒಳ್ಳೆಯದು.ಇಲ್ಲದಿದ್ದರೆ ಮಗುವಿನ ಹೊಟ್ಟೆಯ ಒಳಗಡೆ ಅಪೆಂಡಿಕ್ಸ್ ಸ್ಪೋಟಗೊಂಡರೆ ಅಪಾಯವಿದೆ ಎಂದು ತಿಳಿಸುತ್ತಾರೆ.
ಡಾಕ್ಟರ್ ನೀಡಿದ ಮಾಹಿತಿಯಿಂದ ವಿಚಲಿತರಾದ ಸಾಮಾಜಿಕ ಕಾರ್ಯಕರ್ತರು,ಗ್ರಾಮ ಪಂಚಾಯತ್ ಸದಸ್ಯರು ಆಗಿರುವ ಮಗುವಿನ ತಂದೆ ಫೈಝಲ್ ನೇರವಾಗಿ ತಮ್ಮ ಕುಟುಂಬದ ವೈದ್ಯರನ್ನು ಭೇಟಿ ಮಾಡಿ ರಿಪೋರ್ಟ್ ತೋರಿಸಿದಾಗ ಕುಟುಂಬದ ವೈದ್ಯರು ಇನ್ನೊಂದು ಕಡೆ ಸ್ಕ್ಯಾನಿಂಗ್ ಮಾಡಿ ನೋಡಿ,ನಂತರ ಮುಂದಿನ ಹಂತಕ್ಕೆ ಬರುವ ಎಂದು ತಿಳಿಸುತ್ತಾರೆ. ಕೂಡಲೆೇ ಪುತ್ತೂರು ನಗರದ ಸಿಟಿ ಆಸ್ಪತ್ರೆಯಲ್ಲಿ ಅದೇ ಮಗುವಿನ ಸ್ಕ್ಯಾನಿಂಗ್ ಮಾಡಿಸಿದಾಗ ಅಲ್ಲಿನ ರಿಪೋರ್ಟ್ ನಲ್ಲಿ ಯಾವುದೇ ರೀತಿಯ ಅಪೆಂಡಿಕ್ಸ್ ಇರುವುದಿಲ್ಲ. ನಾರ್ಮಲ್ ಇದೆ.ಎಂದು ಸ್ಕ್ಯಾನಿಂಗ್ ಮಾಡಿದ ವೈದ್ಯರು ತಿಳಿಸುತ್ತಾರೆ.
ಒಂದು ಕಡೆ ಅಪೆಂಡಿಕ್ಸ್,ಇನ್ನೊಂದು ಕಡೆ ನಾರ್ಮಲ್. ಈ ರಿಪೋರ್ಟ್ ಹಿಡಿದುಕೊಂಡು ಏನು ಮಾಡಬೇಕೆಂದು ತೋಚದ ಮಹಮ್ಮದ್ ಪೈಝಲ್ ತಕ್ಷಣ ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಇಫಾಝ್ ಬನ್ನೂರು ಅವರ ಗಮನಕ್ಕೆ ವಿಷಯ ತಂದಾಗ, ಇಫಾಝ್ ಬನ್ನೂರು ಅವರು ಇನ್ನೊಂದು ಕಡೆ ಸ್ಕ್ಯಾನಿಂಗ್ ಮಾಡಿಸಿ ನೋಡಿ,ನಂತರ ನಾವು ಇದರ ಬಗ್ಗೆ ಗಮನಹರಿಸುವ ಎಂದು ತಿಳಿಸುತ್ತಾರೆ. ಜುಲೈ 15ರ ಶನಿವಾರ ಪುತ್ತೂರಿನ ದಿವ್ಯ ಸ್ಕ್ಯಾನಿಂಗ್ ಸೆಂಟರಿನಲ್ಲಿ ಮೂರನೇ ಬಾರಿಗೆ ಸ್ಕ್ಯಾನಿಂಗ್ ಮಾಡಿಸುತ್ತಾರೆ. ಅಲ್ಲಿನ ರಿಪೋರ್ಟ್ ನಲ್ಲೂ ಕೂಡ ನಾರ್ಮಲ್ ಎಂದು ತೋರಿಸುತ್ತದೆ.
ಅಲ್ಲಿಂದ ಫೈಝಲ್ ಮೂರುಗೋಳಿ ಅವರು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಇಫಾಝ್ ಬನ್ನೂರು ಹಾಗೂ ಅಲಿ ಪರ್ಲಡ್ಕ ಅವರೊಂದಿಗೆ ಮಕ್ಕಳ ವೈದ್ಯರಾದ ಡಾ. ಶ್ರೀಕಾಂತ್ ಅವರ ಬಳಿ ಈ ಬಗ್ಗೆ ವಿಚಾರ ವಿನಿಮಯ ನಡೆಸಿ, ಸ್ವಷ್ಟವಾದ ಮಾಹಿತಿ ಪಡೆಯಲು ಹೋದಾಗ ಡಾ. ಶ್ರೀಕಾಂತ್ ಅವರು ಸರಿಯಾದ ರೀತಿಯಲ್ಲಿ ವರ್ತಿಸದೆ, ಬೇಜಾವಾಬ್ದಾರಿಯಿಂದ ವರ್ತಿಸಿ, ಸರಿಯಾದ ಉತ್ತರವೂ ನೀಡದೆ ನನಗೆ ಈಗ ಸಮಯವಿಲ್ಲ,ನೀವು ಕಾನೂನು ಕ್ರಮ ಕೈಗೊಳ್ಳಿ.ನನಗೇನು ತೊಂದರೆಯೂ ಇಲ್ಲ ಎಂದು ಬಹಳ ಹಗುರವಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿರುತ್ತಾರೆಂದು ಸಂಬಂದ ಪಟ್ಟವರು ದೂರಿರುತ್ತಾರೆ.
ಕೊನೆಗೆ ಅಸ್ಪತ್ರೆಯ ಸಿಬ್ಬಂದಿಗಳು ಚೇತನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಅಡಿಗ ಅವರಿಗೆ ಕರೆ ಮಾಡಿ,ಮಾತಾಡಿಸಿದಾಗ ಡಾ. ಅಡಿಗ ಅವರು ಕೂಡ ಸಮರ್ಪಕವಾದ ಉತ್ತರ ನೀಡದೆ ನೀಡದೆ,ಸ್ಕ್ಯಾನಿಂಗ್ ವಿಭಾಗಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬೇಜವಾಬ್ದಾರಿತನದಿಂದ ಕೂಡಿದ ಹಾರಿಕೆಯಿಂದ ಉತ್ತರ ನೀಡಿದರೆಂದು ಮಗುವಿನ ಸಂಬಂಧಿಕರು ಬೇಸರ ವ್ಯಕ್ತ ಪಡಿಸಿರುತ್ತಾರೆ.
ತಾನು ನಂಬಿದ ವೈದ್ಯರು ಬೇಜಾವಾಬ್ದಾರಿತನ ತೋರಿಸಿ,ನಿರ್ಲಕ್ಷದೊಂದಿಗೆ ಸರಿಯಾಗಿ ಮಾಹಿತಿಯೂ ನೀಡದ ಕಾರಣ ನೊಂದ ಮಗುವಿನ ತಂದೆ ಫೈಝಲ್ ಮೂರುಗೋಳಿಯವರು ಪುತ್ತೂರು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೂ,ಜಿಲ್ಲಾ ಆರೋಗ್ಯ ಕೇಂದ್ರ ದಕ್ಷಿಣ ಕನ್ನಡ ಹಾಗೂ ರಾಜ್ಯದ ಆರೋಗ್ಯ ಸಚಿವರಿಗೂ ದೂರನ್ನು ನೀಡಿರುತ್ತಾರೆ.