ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಇಡಿ ಹಾಗೂ ಸಿಬಿಐ ಅಧಿಕಾರಿಗಳಿಂದ ಬಿಗ್ ಶಾಕ್

ರಾಜ್ಯ

ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ಅಧಿಕಾರಿಗಳು ನೋಟಿಸ್

ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದು, ಐಶ್ವರ್ಯಾ ಪಾವತಿಸಿದ್ದ ಫೀಜ್ಹ್ ಬಗ್ಗೆ ಮಾಹಿತಿ ಸಿಬಿಐ ಮಾಹಿತಿ ಕೇಳಿದೆ.

ನನ್ನ ಮಗಳು ಐಶ್ವರ್ಯಾ ಗೆ ಸಿಬಿಐನವರು ನೋಟಿಸ್ ನೀಡಿದ್ದಾರೆ. ಕಾಲೇಜು ಶುಲ್ಕ ಕಟ್ಟಿದ್ದೆಲ್ಲವನ್ನೂ ಕೇಳುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಇನ್ನೊಂದೆಡೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 27 ರ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಡಿಕೆಶಿಗೆ ಸಮನ್ಸ್ ನೀಡಿದ್ದಾರೆ. ದೆಹಲಿಯ ಇಡಿ ಕಚೇರಿಯಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಚುನಾವಣಾ ಹೊತ್ತಿನಲ್ಲಿ ಡಿಕೆಶಿಗೆ ಬಿಗ್ ಶಾಕ್ ಎದುರಾಗಿದೆ.