ವಕೀಲರಿಗೆ ಸಿಹಿ ಸುದ್ದಿ: ಜನವರಿಯಿಂದ ಜಾರಿಗೆ ಬರಲಿದೆ ಡಿಜಿಟಲ್ ವಕಾಲತ್ತು

ರಾಷ್ಟ್ರೀಯ

ತಂತ್ರಜ್ಞಾನದ ಅಭಿವೃದ್ಧಿಯ ಜೊತೆಗೆ ನ್ಯಾಯಾಲಯಗಳೂ ಹೆಜ್ಜೆ ಹಾಕಲು ನಿರ್ಧರಿಸಿದೆ. ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಫಿಸಿಕಲ್ ಕಲಾಪಕ್ಕೆ ಬದಲಾಗಿ ವರ್ಚುವಲ್ ಕಲಾಪಕ್ಕೆ ಜೈ ಎಂದಿದ್ದ ಸುಪ್ರೀಂ ಕೋರ್ಟ್ ಇದೀಗ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ.

ಜನವರಿ ಒಂದರಿಂದ ಕಾಗದ ರಹಿತ ವಕಾಲತ್ತು ಫಾರಂನ್ನು ಬಿಡುಗಡೆ ಮಾಡಲಿದೆ. ಜನವರಿ 1 ರಿಂದ ವಕೀಲರು ತಮ್ಮ ಹಾಜರಾತಿಯನ್ನು ತೋರಿಸಲು ಹಸ್ತಚಾಲಿತ ಸ್ಲಿಪ್ ನೀಡಬೇಕಾಗಿಲ್ಲ. ಅದಕ್ಕೆ ಬದಲಾಗಿ Advocate appearance Portalಗೆ ಲಾಗ್ ಇನ್ ಆದರೆ ಸಾಕು.ಈ ವಿಷಯವನ್ನು ಸ್ವತಃ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಬಹಿರಂಗ ಪಡಿಸಿದ್ದಾರೆ. ಹೊಸ ಹೆಜ್ಜೆಯಾಗಿ ಜನವರಿ ಒಂದರಂದು ಈ ಡಿಜಿಟಲ್ ವೇದಿಕೆಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.