ಖೋಟಾ ನೋಟು ಚಲಾವಣೆ ಮಂಗಳೂರು ಪೋಲೀಸರಿಂದ ಇಬ್ಬರು ಆರೋಪಿಗಳ ಬಂಧನ.4.5ಲಕ್ಷ ರೂ. ವಶ

ಕರಾವಳಿ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 500 ರೂ. ಮುಖ ಬೆಲೆಯ 4.5ಲಕ್ಷ ಖೋಟ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿವಾಸಿ ನಿಜಾಮುದ್ದೀ ನ್ ಅಲಿಯಾಸ್ ನಿಜಾಂ ( 32 ), ಜೆಪ್ಪು ಮಂಗಳೂರು ನಿವಾಸಿ ರಜೀಮ್ ಅಲಿಯಾಸ್ ರಾಫಿ (31) ಎಂದು ಗುರುತಿಸಲಾಗಿದೆ.

ಜ. 2ರಂದು ಮಂಗಳೂರು ನಗರದ ನಂತೂರು ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಮಯ, ನಂತೂರು ಕಡೆಯಿಂದ ಬಂದ, ಒಂದು ಸ್ಕೂಟರ್ ನಲ್ಲಿ ಇಬ್ಬರು ಸವಾರರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು, ಅತೀ ವೇಗವಾಗಿ ಚಲಾಯಿಸಿ ಪೊಲೀಸರಿಂದ ತಪ್ಪಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಮಂಗಳೂರು ಪೂರ್ವ ಠಾಣೆಯ ಪೊಲೀಸರು ತಡೆದು ಪರಿಶೀಲಿಸಿ. ಅವರ ವಶದಲ್ಲಿದ್ದ ರೂ. 500 ಮುಖಬೆಲೆಯ ರೂ. 4,50,000/- ಖೋಟಾ ನೋಟುಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ನೋಟು ನೋಟುಗಳನ್ನು ಬೆಂಗಳೂರಿನಿಂದ ಡ್ಯಾನಿಯಲ್ ಎಂಬಾತನಿಂದ ಪಡೆದು, ಅವುಗಳನ್ನು ಮಂಗಳೂರು ನಗರದಲ್ಲಿ ನೋಟುಗಳನ್ನು ಚಲಾವಣೆ ಮಾಡುವ ಬಗ್ಗೆ, ಆರೋಪಿಗಳು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿದ ಸ್ಕೂಟರ್ ನಲ್ಲಿ ಅವುಗಳನ್ನು ಚಲಾವಣೆಗೆ ಕೊಂಡು ಹೋಗುತ್ತಿದ್ದ ಸಮಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.