ತಲೆ ಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಪಾರಿವಾಳ ಕಬೀರನನ್ನು ಬಂಧಿಸಿದ ಬಜಪೆ ಪೊಲೀಸರು

ಕರಾವಳಿ

ತೆಂಕುಳಿಪಾಡಿ ಗ್ರಾಮದ ಕಾಜಲ ಎಂಬಲ್ಲಿರುವ ಪ್ರಕಾಶ್ ಶೆಟ್ಟಿಯವರ ಕಾಜಿಲ ಫಾರಂ ಹೌಸ್‌ ನಲ್ಲಿದ್ದ 4 ದೊಡ್ಡ ಜಾತಿಯ ದನಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ವಾಯಿದೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರನನ್ನು ಬಜಪೆ ಠಾಣಾ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿತನ ಮೇಲೆ ಮಂಗಳೂರು ನಗರದ ವಿವಿಧ ಠಾಣೆಗಳಾದ ಪಣಂಬೂರು, ಬಂದರು, ಪಾಂಡೇಶ್ವರ, ಉಳ್ಳಾಲ, ಉಪ್ಪಿನಂಗಡಿ, ಮಂಗಳೂರು : ಪೂರ್ವ ಠಾಣೆಗಳಲ್ಲಿ ದರೋಡೆ, ಕನ್ನ ಕಳವು, ದನಗಳವು ಪ್ರಕರಣಗಳು ಈ ಹಿಂದೆ ದಾಖಲಾಗಿರುತ್ತವೆ.

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್, IPS ರವರ ಮಾರ್ಗದರ್ಶನದಂತೆ,DCP ಯವರಾದ ಅಂಶು ಕುಮಾರ್,ದಿನೇಶ್ ಕುಮಾರ್,ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ ರವರ ನಿರ್ದೇಶನದಂತೆ, ಬಜಪೆ ಠಾಣಾ ಪಿ.ಐ. ಪ್ರಕಾಶ್, ಪಿ.ಸ್.ಐ. ಗುರು ಕಾಂತಿ, ಪೂವಪ್ಪ, ಎ.ಎಸ್.ಐ. ರಾಮ ಪೂಜಾರಿ, ಮತ್ತು ಹೆಚ್ ಸಿ. ಗಳಾದ ರೋಹಿತ್, ಜಗದೀಶ್‌, ಸುಜನ್, ರಾಜೇಶ್, ಸಂತೋಷ್, ಸಂಜೀವ ಭಜಂತ್ರಿ, ಬಸವರಾಜ್ ಪಾಟೀಲ್‌, ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.