ಪರವಾನಗಿ ನವೀಕರಿಸಿಕೊಳ್ಳದ 13,785 ರಿಯಲ್ ಎಸ್ಟೇಟ್ ಏಜೆಂಟರ ನೋಂದಣಿಗಳನ್ನು ಮಹಾರಾಷ್ಟ್ರ ರೇರಾ ರದ್ದುಪಡಿಸಿದೆ. 2017 ರಲ್ಲಿ ಪಡೆದಿದ್ದ ಪರವಾನಗಿಯನ್ನು ಪುನರ್ ನವೀಕರಣ ಮಾಡಿಕೊಳ್ಳದೇ ಇದ್ದುದೆ ಮಹಾರಾಷ್ಟ್ರ ರೇರಾ ನೋಂದಣಿ ರದ್ದು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕಾರಣ. ಪುನರ್ ನವೀಕರಣ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಹಾರಾಷ್ಟ್ರ ರೇರಾ ನಿಗಡಿಪಡಿಸಿರುವ ತರಬೇತಿಗೆ ಹಾಜರಾಗಿ ಪ್ರಮಾಣಪತ್ರವನ್ನು ಪಡೆಯಬೇಕಾಗಿದೆ. ನೋಂದಣಿ ರದ್ದಾದ ಏಜೆಂಟರ ಹೆಸರುಗಳನ್ನು ರೇರಾ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಇತ್ತೀಚೆಗಷ್ಟೇ ಮಹಾರೇರಾ ಏಜೆಂಟರಿಗಾಗಿ ನಾಲ್ಕನೇ ಸುತ್ತಿನ ಪರೀಕ್ಷೆಯನ್ನು ಕೈಗೊಂಡಿತ್ತು. ಪರೀಕ್ಷೆಗೆ ಹಾಜರಾದ ಒಟ್ಟು 1,767 ಅಭ್ಯರ್ಥಿಗಳಲ್ಲಿ 1,527 ಮಂದಿ ಉತ್ತೀರ್ಣಗೊಂಡಿದ್ದರು.
