ಕರಾವಳಿ

ಕೊಲ್ತಮಜಲು ರಹಿಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿದ್ದು, ಜಾಮೀನು ಆದೇಶವನ್ನು ಸರಕಾರದ ಪರವಾಗಿ ಮಾನ್ಯ ಅಡ್ವೊಕೇಟ್ ಜನರಲ್ ಅವರು ಪ್ರಶ್ನಿಸಿದ್ದರು. ಇದೀಗ ಹೈಕೋರ್ಟ್ ಆರೋಪಿಗಳಿಗೆ ನೀಡಿರುವ ಜಾಮೀನು ಆದೇಶಕ್ಕೆ ದಿನಾಂಕ 15-10-2026 ರಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕೊಲೆ ಅರೋಪದಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರೂ, ಗೂಂಡಾ ಕಾಯ್ದೆಯಡಿ ಆರೋಪಿಗಳು ಬಿಡುಗಡೆಯಾಗದೆ ಜೈಲಿನಲ್ಲಿಯೇ ಮುಂದುವರಿಯಬೇಕಾಗಿತ್ತು.ಇದೀಗ ಆ ಜಾಮೀನು ಆದೇಶವನ್ನು ಸರಕಾರದ ಪರವಾಗಿ ಮಾನ್ಯ ಅಡ್ವೊಕೇಟ್ ಜನರಲ್ ಅವರ ಮೂಲಕ ಪ್ರಶ್ನಿಸಲಾಯಿತು. ಸುಪ್ರೀಂ ಕೋರ್ಟ್‌ನಲ್ಲಿ […]

ಸಲಿಂಗಕಾಮಿ ಫಾದರ್.. ಪ್ರಾರ್ಥನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ವೆಲೆನ್ಸಿಯಾ ಚರ್ಚ್ ಫಾದರ್ ವಿರುದ್ಧ ಪೋಕ್ಸೋ ದಾಖಲು

ಧಾರ್ಮಿಕ ಕೇಂದ್ರವಾದ ಚರ್ಚ್ ಗೆ ಪ್ರಾರ್ಥನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಚರ್ಚ್ ಫಾದರ್ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಮಂಗಳೂರಿನ ವೆಲೆನ್ಸಿಯಾದ ಸೆಂಟ್ ವಿನ್ಸೆಂಟ್ ಫೆರರ್ ಚರ್ಚ್‌ನ ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಪ್ರಕರಣ ದಾಖಲಾಗಿದ್ದು, ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರಾರ್ಥನೆಗಾಗಿ ಚರ್ಚ್‌ಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕನಿಗೆ ಚಾಕೊಲೇಟ್‌ ನೀಡಿ ಪುಸಲಾಯಿಸುತ್ತಿದ್ದ ಫಾದರ್ ಸಿಪ್ರಿಯನ್ ಪಿಂಟೋ, ನಂತರ […]

ರಾಜ್ಯ

ಸ್ಟಿಂಗ್ ಆಪರೇಷನ್: ಬಿಜೆಪಿ ಸೈಲೆಂಟ್, ಕುಮಾರಣ್ಣ ವೈಲೆಂಟ್.!

ತಾಂಟಲು ‘ನಾಯಕ’ ಫಿಕ್ಸ್..ಖೆಡ್ಡಾ ತೋಡಿ ಹಳ್ಳಕ್ಕೆ ಬಿದ್ದ ‘ಮಹಾನಾಯಕ’ .! 2028 ಕ್ಕೆ ‘ಹಸ್ತ’ ಕ್ಕೆ ಗುನ್ನ ಇಡುತ್ತಾ ಅಹಿಂದ.? 2026 ಮೇ 26. ಕಾಂಗ್ರೆಸ್ ಹೈಕಮಾಂಡ್ ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಕೆಳಗಿಳಿಸಿ ಡಿಕೆಶಿ ಅವರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಿತು. ಕಾಂಗ್ರೆಸ್ಸಿಗರದ್ದು ಇದೆಂತಹಾ ನಡೆ.? ಇದು ತಪ್ಪು ಹೆಜ್ಜೆ ಅಲ್ಲವೇ.? ರಾಜಕೀಯ ವಿಮರ್ಶಕರಿಂದ ಮಾತುಗಳು ಕೇಳಿ ಬಂದಿದ್ದವು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ಸಿಗೆ ಆಸರೆಯಾಗಿದ್ದ ಕರ್ನಾಟಕವನ್ನು ಕೈಯಾರೆ ಕಳೆದುಕೊಳ್ಳುತ್ತಾ ಅನ್ನುವ ಮಾತುಗಳು ಸಾರ್ವಜನಿಕ ವಲಯಗಳಲ್ಲಿ ಹರಿದಾಡಿತ್ತು. ಇದಕ್ಕೆ […]

ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮತ್ತು ನಿರ್ವಹಣಾ ಮಸೂದೆ’ಗೆ ರಾಜ್ಯಪಾಲರ ಅಂಕಿತ

ಅಪಾರ್ಟ್‌ಮೆಂಟ್‌ ನಿವಾಸಿಗಳ ಹಿತರಕ್ಷಣೆ ಹಾಗೂ ಅವರಿಗೆ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಕರ್ನಾಟಕ ಅಪಾರ್ಟ್‌ಮೆಂಟ್‌ ಮಾಲೀಕತ್ವ ಮತ್ತು ನಿರ್ವಹಣಾ ಮಸೂದೆ’ಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕಟ್ಟಡದ ಆವರಣ ಪ್ರದೇಶ ಸೇರಿದಂತೆ ಎಲ್ಲರೂ ಬಳಸುವ ಜಾಗಗಳು (ಕಾಮನ್‌ ಸ್ಪೇಸ್‌), ರಸ್ತೆಗಳು ಹಾಗೂ ಕಾಂಪೌಂಡ್‌ ಗೋಡೆಗಳ ಮಾಲೀಕತ್ವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಫ್ಲ್ಯಾಟ್‌ ಗಳನ್ನು ಸಂಪೂರ್ಣ ಮಾರಾಟ ಮಾಡಿದ ನಂತವೂ ಇಂತಹ ಜಾಗಗಳ ಮೇಲೆ ನಿರ್ಮಾಣ ಕಂಪನಿಗಳ ಮಾಲೀಕರು ಹಕ್ಕುಸ್ವಾಮ್ಯ ಹೊಂದಿದ್ದರು. ಬಳಕೆ ಮಾಡಿಕೊಳ್ಳುತ್ತಿ ದ್ದರು. […]

ರಾಷ್ಟ್ರೀಯ

ಹೋರಾಟ ರಂಗದ ‘ಐರನ್ ಲೇಡಿ’ ನೇಹಾ ಬೋರಾ.. ಕೆಂಪು ನೀಲಂಗಿ ಪಡೆ ವೀರ ವನಿತೆಯರ ಯಶೋಗಾಥೆ.!

‘ನನ್ನನ್ನು ಬಂಧಿಸಬಹುದು. ಆದರೆ ನನ್ನ ಚಳುವಳಿಯನ್ನಲ್ಲ’ ಈ ಒಂದು ಮಾತಿನ ಮೂಲಕ ನವ ತಲೆಮಾರಿನ ಹೋರಾಟಕ್ಕೆ ಕಿಚ್ಚು ಹಬ್ಬಿಸಿದ್ದ ದಿಟ್ಟೆ ನೇಹಾ ಬೋರಾ. ಇಂದು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಲಿ, ಮಾಧ್ಯಮಗಳಲ್ಲಿ ಮಿಂಚುತ್ತಿರುವ ಏಕೈಕ ಹೆಸರು ನೇಹಾ ಬೋರಾ ಅವರದ್ದು. ಮೋದಿ- ಶಾ ಸರ್ಕಾರವನ್ನು ನಡುಗಿಸಿದ್ದ ದಿಟ್ಟ ಹೋರಾಟಗಾರ್ತಿ ಆಕೆ. ಪೊಲೀಸರು ಎಷ್ಟೇ ಬಾರಿ ಬಂಧಿಸಿದರೂ ಛಲ ಬಿಡದೆ ಮುನ್ನುಗ್ಗುವ ಯುವ ನಾಯಕಿ. ಪ್ರತಿಭಟನಾ ರಂಗದಲ್ಲಿ ಆಕೆಯ ರೋಷಾ ವೇಷಾ.. ಫ್ಯಾಶಿಸ್ಟ್ ಆಡಳಿತ ಪಕ್ಷವನ್ನು ಕಾಡುವ […]

ನೀಲಿ ಡ್ರಮ್ ಮರ್ಡರ್ ಪ್ರಕರಣ: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ.!

ಸೌರಭ್‌ ರಾಜ್‌ಪೂತ್‌ ಕೊಲೆ ಪ್ರಕರಣದಲ್ಲಿ ಪತ್ನಿ ಮುಸ್ಕಾನ್‌ ರಾಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾಗೆ ಮರಣದಂಡನೆ ವಿಧಿಸಿದ ಮೀರತ್‌ ನ್ಯಾಯಾಲಯ, ಶಿಕ್ಷೆ ಪ್ರಕಟಿಸುವ ವೇಳೆ ಭಗವದ್ಗೀತೆ ಹಾಗೂ ಮಹಾಭಾರತದ ಉಲ್ಲೇಖಗಳನ್ನು ಮಾಡಿದೆ. ಬುಧವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಧರ್ಮ ಮತ್ತು ಕರ್ತವ್ಯದ ಕುರಿತು ಮಾತನಾಡಿದ್ದಾರೆ. “ನ್ಯಾಯಾಲಯ ತನ್ನ ಕರ್ತವ್ಯವನ್ನು ನಿರ್ವಹಿಸಲಿದೆ ಎಂಬುದನ್ನು ತಿಳಿಸಲು ನ್ಯಾಯಾಧೀಶರು ಮಹಾಭಾರತದ ಉಲ್ಲೇಖಗಳನ್ನು ಮಾಡಿದರು. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದೂ ಧರ್ಮದ ಅರ್ಥವಾಗಿದೆ ಎಂದು ಅವರು ಹೇಳಿದರು. ವ್ಯಾಪಾರಿ […]

ಅಂತಾರಾಷ್ಟ್ರೀಯ

ಸೌದಿ ಅರೇಬಿಯಾ ಮೇಲೆ ಹೌತಿಗಳ ದಾಳಿ ಯಾಕೆ.. ಏನಾಗುತ್ತಿದೆ.?

ಅಕ್ಟೋಬರ್ 6 ರಿಂದ 12ರವರೆಗೆ ಯೆಮೆನ್‌ನ ಹೌತಿ ಬಂಡುಕೋರರು ಸೌದಿಯ ಮೂರು ವಿಮಾನ ನಿಲ್ದಾಣಗಳ (ಅಭಾ, ರಿಯಾದ್, ದಮ್ಮಾಮ್) ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದು, ಕನಿಷ್ಠ 20 ಮಂದಿ ಸಾವನ್ನಪ್ಪಿ 370ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಶನಿವಾರ (ಅ.10) ರಿಯಾದ್‌ನ ಕಿಂಗ್ ಖಾಲಿದ್ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲೇ ಕನಿಷ್ಠ 12 ಜನ ಮೃತಪಟ್ಟು 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಅ.8 ರ ದಾಳಿಯಲ್ಲಿ ಸೌದಿಯಾ ಸಂಸ್ಥೆಯ ಏರ್‌ಬಸ್ A320 ವಿಮಾನವೂ ನಾಶವಾಯಿತು. […]

ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಇತಿಹಾಸ ನಿರ್ಮಿಸಿದ್ದ ವಿಶ್ವದ ಮೊದಲ ವ್ಯಕ್ತಿ ನಿಧನ

ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಇತಿಹಾಸ ನಿರ್ಮಿಸಿದ್ದ ವಿಶ್ವದ ಮೊದಲ ವ್ಯಕ್ತಿ ಮೃತಪಟ್ಟಿದ್ದಾರೆ. ಮ್ಯಾಸೆಚೂಟ್ಸ್‍ನ 62 ವರ್ಷದ ರಿಚರ್ಡ್ ಸ್ಲೇಮನ್ ಅವರು ಕೆಲ ದಿನಗಳ ಹಿಂದೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಅಂತಹ ವ್ಯಕ್ತಿ ದಿಢೀರ್ ನಿಧನರಾಗಿದ್ದು ಅವರ ಸಾವಿಗೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿರುವುದು ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ರಿಕ್ ಸ್ಲೇಮನ್ ಅವರ ಹಠಾತ್ ಮರಣದ ಬಗ್ಗೆ ಮಾಸ್ ಜನರಲ್ ಟ್ರಾನ್ಸ್‍ಪ್ಲಾಂಟ್ ತಂಡವು ತೀವ್ರವಾಗಿ ದುಃಖಿತವಾಗಿದೆ. ಇದು ಅವರ ಇತ್ತೀಚಿನ ಕಸಿ […]

error: Content is protected !!