ಅಮಿತ್ ಷಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸಾದರು. ಕೂಡ್ಲಿಗಿಯಲ್ಲಿ ಸೆಟ್ಲಾದರು ಶ್ರೀರಾಮುಲು

ಇಫ್ತಿಕಾರ್ ಅಲಿ ಎಂದರೆ ಸಾಕು. ಕಾಂಗ್ರೆಸ್, ಬಿಜೆಪಿ, ಸಂಘ ಪರಿವಾರ ಸೇರಿದಂತೆ ಎಲ್ಲರ ಜತೆಗೂ ಲಿಂಕಿದೆ. ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ಗುರುವಾರ ಬಿಜೆಪಿ ನಾಯಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರು ರಹಸ್ಯ ಸಭೆ ನಡೆಸಿದ್ದಾರೆ. ವಿಧಾನಸಬೆಯ ಮೊಗಸಾಲೆಯಲ್ಲಿರುವ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ನಡೆದ ಈ ಸಭೆ ಆರೆಸ್ಸೆಸ್ ನಾಯಕರು ತಮಗೆ ನೀಡಿದ ಸಂದೇಶದ ಬಗ್ಗೆ ಚರ್ಚಿಸಿದೆ.ಅಂದ ಹಾಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರ್ಯುದ್ದದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಸ್ಥಳೀಯ ಆರೆಸ್ಸೆಸ್ ನಾಯಕರಿಗೆ ಒಂದು ಸಂದೇಶ ನೀಡಿದ್ದಾರೆ. […]

Continue Reading

ಧರ್ಮಸ್ಥಳದ ವಕೀಲರಿಂದ ಲೀಗಲ್ ನೋಟಿಸ್ ವಂಚನೆ ! ಕಸಾಪ ಅಧ್ಯಕ್ಷ ಮಹೇಶ್ ಜೋಶಿಗೆ ಎಸ್ ಬಾಲನ್ ಲೀಗಲ್ ನೋಟಿಸ್ !

ಧರ್ಮಸ್ಥಳದ ವಕೀಲರು ಲೀಗಲ್ ನೋಟಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಸಾಹಿತಿ-ಚಿಂತಕರ ಸಭೆಗೆ ನೀಡಲಾಗಿದ್ದ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಹೋರಾಟಗಾರರ ಪರವಾಗಿ ಎಸ್ ಬಾಲನ್ ಲೀಗಲ್ ನೋಟಿಸ್ ನೀಡಿದ್ದಾರೆ. ಎಸ್ ಬಾಲನ್ ಅವರು ನೀಡಿರುವ ಲೀಗಲ್ ನೋಟಿಸ್ ನಲ್ಲಿ ”ಧರ್ಮಸ್ಥಳದ ವಕೀಲರ ಹೆಸರಿನಲ್ಲಿ ನೀಡಲಾದ ಲೀಗಲ್ ನೋಟಿಸ್ ಗೆ ವಿಳಾಸ, ಲೆಟರ್ ಹೆಡ್, ಸಂಪರ್ಕ ಸೇರಿದಂತೆ ಯಾವುದೇ ತಲೆ-ಬಾಲ ಇಲ್ಲವಾಗಿದ್ದು, ಸೌಜನ್ಯ ಪರ ಹೋರಾಟಗಾರರನ್ನು ದಾರಿ ತಪ್ಪಿಸಲು ಹೈಕೋರ್ಟ್ […]

Continue Reading

ಕೂಳೂರಿನ ಶಾಕೀರ್ ಎಂಬವರನ್ನು ಕಂಬಕ್ಕೆ ಕಟ್ಟಿ ಹಾಕಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣ; ಎಲ್ಲಾ ಆರೋಪಿಗಳು ಖುಲಾಸೆ

2015ರಲ್ಲಿ ಮಂಗಳೂರು ನಗರದ ಅತ್ತಾವರ ಎಂಬಲ್ಲಿ ಕಂಬಕ್ಕೆ ಕಟ್ಟಿ ಹಾಕಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ1 ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2015ರ ಆ. 14ರಂದು ಸಂಜೆ ಸಹೋದ್ಯೋಗಿಗೆ ಹಣ ಕೊಡಲು ಅತ್ತಾವರಕ್ಕೆ ಬಂದಿದ್ದ ಕೂಳೂರಿನ ಶಾಕೀರ್‌ ಎಂಬವರಿಗೆ ಅನ್ಯಮತೀಯ ಎನ್ನುವ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ಬೈದು, ಕಾರಿನಿಂದ ಎಳೆದು ಹಾಕಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು.ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

Continue Reading

ಕಾಂಗ್ರೆಸ್ ಸ್ಥಳೀಯ ಪುಡಾರಿಗಳೇ ಕಂಟಕ… ಬ್ಯಾರಿಗಿಲ್ಲ ‘ಬ್ಯಾರಿ ಭವನ’!

ಅಷ್ಟಕ್ಕೂ ಬ್ಯಾರಿ ಭವನ ನಿರ್ಮಾಣಕ್ಕೆ ಈ ಪರಿಯ ವಿರೋಧ ಏಕೆ.? ಬರೋಬ್ಬರಿ 1200 ವರ್ಷಗಳ ಇತಿಹಾಸದ ದಾಖಲೆಯನ್ನು ಹೊಂದಿದೆ ಬ್ಯಾರಿ ಭಾಷೆ. 25ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ ಬ್ಯಾರಿ ಜನಾಂಗ. ಕರಾವಳಿ ಕರ್ನಾ ಟಕವಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಬ್ಯಾರಿಗಳ ಜನಸಂಖ್ಯೆ ಧಾರಾಳವಿದೆ. ಬ್ಯಾರಿ ಸಾಹಿತ್ಯ-ಸಂಸ್ಕೃತಿಯ ಏಳಿಗೆಗಾಗಿ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸರಕಾರವೇನೂ ಘೋಷಿಸಿ ದಶಕಗಳೇ ಕಳೆದಿದೆ. ಆದರೆ ಭಾಷೆ, ಸಾಂಸ್ಕೃತಿ ಕತೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ಬ್ಯಾರಿ ಭವನ ನಿರ್ಮಾಣ ವಾಗದೆ ಇನ್ನೂ […]

Continue Reading

ಬಂಟ್ವಾಳ ಪುರಸಭೆ: ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ಡಿಜಿಟಲ್ ವಹಿವಾಟಿನ ಬಗ್ಗೆ ಮಾಹಿತಿ ಕಾರ್ಯಕ್ರಮ

ಬಂಟ್ವಾಳ ಪುರಸಭೆಯಲ್ಲಿ ಡೇ ನಲ್ಮ್‌ ಅಭಿಯಾನದಡಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್‌ ನಿಧಿ (ಪಿ.ಯಂ .ಸ್ವ ನಿಧಿ) , ಸ್ವ ನಿಧಿ ಸೆ ಸಮೃದ್ಧಿ ಮೇಳ ಹಾಗೂ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಮೂಲಕ ಡಿಜಿಟಲ್‌ ವಹಿವಾಟಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪುರಸಭೆಯ ಅಧ್ಯಕ್ಷರಾದ ವಾಸು ಪೂಜಾರಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು . ‘ಬೀದಿ ಬದಿ ವ್ಯಾಪಾರಿಗಳು ಸರ್ಕಾರದಿಂದ ನೀಡುವಂತಹ ಸವಲತ್ತುಗಳನ್ನು ಬಳಸಿಕೊಂಡು ಭಾರತ ದೇಶವನ್ನು ಸರಳ ಭಾರತವನ್ನಾಗಿ ರೂಪಿಸುವಲ್ಲಿ […]

Continue Reading

ಮಳೆ, ಗಾಳಿಗೆ ಹಲವು ಮನೆಗಳು ಜಖಂ; ವಾಲ್ಪಾಡಿ, ನೆಲ್ಲಿಕಾರು, ಮಾಂಟ್ರಾಡಿ ಗ್ರಾಮದವರ ಸಂಕಷ್ಟಕ್ಕೆ ಮಿಡಿದ ಬೆದ್ರ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಶಿರ್ತಾಡಿ

ಪಕ್ಷದ ಅಧ್ಯಕ್ಷರಾದವರು ಜನರ ಸೇವೆ ಮಾಡುವುದು ಭಾರೀ ಕಡಿಮೆ. ಪಕ್ಷದ ಸಭೆ, ಪಕ್ಷದ ಬೆಳವಣಿಗೆಗೆ ಪೂರಕವಾಗಿರುವ ಸಲಹೆ, ಅಭಿಪ್ರಾಯಗಳನ್ನು ಅನುಷ್ಠಾನ ಗೊಳಿಸುವುದರಲ್ಲೇ ಮಗ್ನರಾಗಿರುತ್ತಾರೆ. ಆದರೆ ಇಲ್ಲೊಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಪತ್ತಿನ ಕಾಲದಲ್ಲಿ ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಮೂಲಕ ಅಪರೂಪದ ಕೆಲಸ ಮಾಡಿದ್ದಾರೆ. ಅವರು ಬೇರಾರೂ ಅಲ್ಲ. ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶಿರ್ತಾಡಿ. ಮೂಡುಬಿದ್ರಿ ತಾಲೂಕಿನಾದ್ಯಂತ ಹಲವೆಡೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಗಾಳಿಯ ರಭಸಕ್ಕೆ, ಸಿಕ್ಕ ಕೆಲವು ಮರಗಳು ಮನೆಗಳ […]

Continue Reading

ಯುವ ಕಾಂಗ್ರೆಸ್ – ಯುವ ಮೋರ್ಚಾ ಯಾರಿಗೆ ಹೆಚ್ಚು ಪವರ್…?

ಬಿಜೆಪಿ ಯು.ಮೋ ಅಧ್ಯಕ್ಷರಾದವರು ಭವಿಷ್ಯತ್ತಿನ ರಾಜಕಾರಣಿ ಆಗುವುದು ಪಕ್ಕಾ. ಕಾಂಗ್ರೆಸ್ಸಿನಲ್ಲಿ ಅಂತಹ ಟ್ರೆಂಡ್ ಇಲ್ಲದೆ ಇರುವುದು ಪಕ್ಷ ಸೊರಗಲು ಕಾರಣ. ಕಳೆದೊಂದು ತಿಂಗಳಿನಿಂದ ರಾಜ್ಯದ ಕಾಂಗ್ರೆಸ್‌ನಲ್ಲಿ ಹೆಚ್ಚು ಸುದ್ಧಿ ಮಾಡಿದ್ದು ಯುವ ಕಾಂಗ್ರೆಸ್ ಚುನಾವಣೆ. ಹಲವಾರು ತಿಂಗಳ ಹಿಂದೆ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆದರೂ ಫಲಿತಾಂಶ ಹೊರಬಿದ್ದಿದ್ದು ಇತ್ತೀಚೆಗೆ, ಸ್ಪರ್ಧಿಸಿ ದವರೆಲ್ಲ ಗೆದ್ದಿದ್ದಾರೆ. ಕಾಂಗ್ರೆಸ್ ಯುವ ಕಾರ್ಯಕರ್ತರಂತೂ ಜಗತ್ತು ಗೆದ್ದ ಖುಷಿಯಲ್ಲಿದ್ದಾರೆ. ಅಲ್ಲಲ್ಲಿ ನಾಯಕರ ಭೇಟಿ, ಸನ್ಮಾನ, ಹಾರ, ತುರಾಯಿ ಎಲ್ಲವೂ ನಡೆಯುತ್ತಿದೆ. ಅಷ್ಟಕ್ಕೂ ಯುವ ಕಾಂಗ್ರೆಸ್ಸಿಗೇಕೆ […]

Continue Reading

ಯುರೇಖಾ ಪೋರ್ಬ್ಸ್ ವ್ಯಾಪಾರ ಮಳಿಗೆಯ ವಾಟರ್ ಫಿಲ್ಟರ್ ದೋಷಪೂರಿತ; ಗ್ರಾಹಕ ಶಕೀಲ್ ಸೂರಲ್ಪಾಡಿಗೆ ಪೂರ್ತಿ ವೆಚ್ಚ ಪಾವತಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಮಹತ್ವದ ಆದೇಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಮಹತ್ವದ ಆದೇಶವೊಂದನ್ನು ನೀಡಿದ್ದು, ದೋಷಪೂರಿತ ವಾಟರ್ ಫಿಲ್ಟರ್ ಖರೀದಿಸಿದ ಗ್ರಾಹಕನಿಗೆ ಪೂರ್ತಿ ಹಣ ಹಿಂತಿರುಗಿಸುವಂತೆ ಆದೇಶಿಸಿದೆ. ಮಂಗಳೂರು ತಾಲೂಕಿನ ಸೂರಲ್ಪಾಡಿ ನಿವಾಸಿ ಶಕೀಲ್ ಇವರು ಯುರೇಖಾ ಪೋರ್ಬ್ಸ್ ಇದರ ಮಂಗಳೂರಿನ ವ್ಯಾಪಾರ ಮಳಿಗೆಯಿಂದ 1,18,069 ರೂ. ನೀಡಿ ನೀರು ಶುದ್ದೀಕರಿಸುವ ಯಂತ್ರವನ್ನು ಖರೀದಿಸಿದ್ದರು. ಆದರೆ ಅವರು ಖರೀದಿಸಿದ ವಾಟರ್ ಫಿಲ್ಟರ್ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸದೆ ದೋಷಪೂರಿತವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಹಲವಾರು ಬಾರಿ ಸಂಬಂಧ ಪಟ್ಟವರನ್ನು ಸಂಪರ್ಕಿಸಿದರೂ ಸರಿಯಾದ ಪ್ರತಿಕ್ರಿಯೆ […]

Continue Reading

ಪತ್ನಿಗೆ ಹಲ್ಲೆ ನಡೆಸಿ, ಬಲವಂತದ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ.

ಪತ್ನಿಗೆ ಹಲ್ಲೆ ನಡೆಸಿ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಆರೋಪಿಯನ್ನು ಉಳ್ಳಾಲ ತಾಲೂಕಿನ ಸೋಮೇಶ್ವರ ಕುಂಪಲ ನಿವಾಸಿ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಅಲಿಯಾಸ್ ರೆನ್ಸನ್ ಎಂದು ಗುರುತಿಸಲಾಗಿದೆ. ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಮದ್ಯಪಾನ, ಜೂಜಾಟ ಮತ್ತು ಇತರ ದುಶ್ಚಟಗಳಿಗೆ ವ್ಯಸನಿಯಾಗಿದ್ದು, ಮೇ 11, 2022 ರಂದು, ಶೈಮಾ ಮನೆಯಲ್ಲಿದ್ದ ಸಮಯ ತನ್ನ ಗಂಡನಿಗೆ ಬುದ್ದಿ ಮಾತು ಹೇಳಿದ್ದಳು. ಇದರಿಂದ ಕೋಪಗೊಂಡ ಗಂಡ […]

Continue Reading

ಗಟ್ಟಿಗಿತ್ತಿ ಮಹಿಳೆ ಕೃಷ್ಣವೇಣಿ. ಗಣಿ ಇಲಾಖೆಯಲ್ಲೇ ನಡೆಯುತ್ತಿದೆ ಷಡ್ಯಂತ್ರ.!

ಆಕೆ ಗಣಿಯನ್ನೇ ನುಂಗಿ ನೀರು ಕುಡಿದಿದ್ದಾಳೆ.! ಈಕೆ ಬರೀ ಕೃಷ್ಣವೇಣಿಯಲ್ಲ; ಚಿನ್ನದ ಗಣಿ. ಹೀಗೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೃಷ್ಣವೇಣಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಹಾಕುತ್ತಿದ್ದರೂ ಕೃಷ್ಣವೇಣಿ ಮಗುಮ್ಮಾಗಿ ಕುಳಿತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಗಣಿ ಇಲಾಖೆಯ ಅಧಿಕಾರಿಗಳ ವೈಫಲ್ಯವೇ ಕಾರಣವೆಂದು ಪಕ್ಷ ಭೇದ ಮರೆತು ಎಲ್ಲರ ಗುರಿಯೂ ಕೃಷ್ಣವೇಣಿಯೇ ಆಗಿದ್ದರು.ತಾವು ಮಾತ್ರ ಸತ್ಯ ಹರಿಶ್ಚಂದ್ರರು, ಗಣಿ ಇಲಾಖೆ ಮಾತ್ರ ಅಕ್ರಮ […]

Continue Reading