30 ಮಂದಿ ಐಪಿಎಸ್‌ ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಕ್ಕೆ ಬಡ್ತಿಗೆ ಹೈಕೋರ್ಟ್ ಆದೇಶ

ರಾಜ್ಯ ಪೊಲೀಸ್‌ ಸೇವೆಯಲ್ಲಿದ್ದ 30 ಐಪಿಎಸ್‌ ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಕ್ಕೆ ಬಡ್ತಿ ನೀಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.ಎಸ್‌ಪಿ ಹುದ್ದೆಗೆ ಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ 2025ರ ಆಗಸ್ಟ್ 20ರಂದು ನೀಡಿರುವ ಆದೇಶ ರದ್ದುಗೊಳಿಸುವಂತೆ ಕೋರಿ ರಾಜ್ಯ ಗೃಹ ಇಲಾಖೆ ಸಲ್ಲಿಸಿದ್ದ ರಿಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಕೆಎಸ್‌ಎಟಿ ಆದೇಶವನ್ನು ಮಾರ್ಪಾಡು ಮಾಡಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, […]

Continue Reading

ಇರಾನ್ ಹ್ಯಾಕರ್ಸ್ ಗಳಿಂದ ಸೈಬರ್ ದಾಳಿ; ಅಮೆರಿಕನ್ ಮರೀನ್ ಸೈನಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಿ ಸೋರಿಕೆ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಕೇವಲ ಸಮರಭೂಮಿಗೆ ಸೀಮಿತವಾಗಿಲ್ಲ, ಅದು ಡಿಜಿಟಲ್ ಲೋಕಕ್ಕೂ ಹಬ್ಬಿದೆ. ಇರಾನ್ ಬೆಂಬಲಿತ ಹ್ಯಾಕರ್ ಗುಂಪೊಂದು ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ 2,000ಕ್ಕೂ ಹೆಚ್ಚು ಅಮೆರಿಕನ್ ಮರೀನ್ ಸೈನಿಕರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಿ ಸೋರಿಕೆ ಮಾಡಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ದಿ ವಾಲ್ ಸ್ಟ್ರೀಟ್ ಜರ್ನಲ್ ಈ ಕುರಿತು ವರದಿ ಮಾಡಿದ್ದು, ಅಮೆರಿಕದ ರಕ್ಷಣಾ ಇಲಾಖೆ ಈ ಗಂಭೀರ ಭದ್ರತಾ ಲೋಪದ ಬಗ್ಗೆ ತನಿಖೆ ಆರಂಭಿಸಿದೆ. ಈ ದಾಳಿಯ ಹಿಂದೆ […]

Continue Reading

ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿರುವ ಘಟನೆ; ಇವಳೇ ನನ್ನ ಸಹೋದರಿ, ಮೃತ ಪಟ್ಟಿರುವುದಕ್ಕೆ ಇದೇ ಸಾಕ್ಷಿ.!

ತನ್ನ ಮೃತ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಸಾವಿನ ಪುರಾವೆಯಾಗಿ ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ಹೊತ್ತು ತಂದಿರುವ ಘಟನೆ ಒಡಿಶಾದ ಕೆಂಜಿಹಾರ್ ಜಿಲ್ಲೆಯಲ್ಲಿ ನಡೆದಿದೆ. ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ತಂಗಿಯ ಮರಣದ ನಂತರ ಆಕೆಯ ಖಾತೆಯಲ್ಲಿದ್ದ ಹಣ ಬಿಡಿಸಿಕೊಳ್ಳಲು ಬ್ಯಾಂಕಿಗೆ ಅಲೆದಾಡುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ಮರಣ ಪ್ರಮಾಣಪತ್ರ ಸೇರಿದಂತೆ ಸೂಕ್ತ ದಾಖಲೆಗಳನ್ನು ಕೇಳಿದ್ದರು ಎನ್ನಲಾಗಿದೆ. ಇದರಿಂದ ಹತಾಶರಾದ ವ್ಯಕ್ತಿ, ಹೂತುಹಾಕಿದ್ದ ತಂಗಿಯ ಶವವನ್ನು ಹೊರತೆಗೆದು, ಅದರ ಅಸ್ಥಿಪಂಜರವನ್ನೇ ಚೀಲದಲ್ಲಿ ಹಾಕಿಕೊಂಡು ಬ್ಯಾಂಕಿಗೆ ಬಂದಿದ್ದಾರೆ. ಜಿತು […]

Continue Reading

ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜು; ಲೋಕಸಭೆಯಲ್ಲಿರುವ 543 ಸದಸ್ಯರ ಬಲವನ್ನು 850ಕ್ಕೆ ಏರಿಸಲು ಸರ್ಕಾರ ಪ್ರಸ್ತಾವನೆ

ಭಾರತೀಯ ಸಂಸದೀಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬದಲಾವಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಪ್ರಸ್ತುತ ಲೋಕಸಭೆಯಲ್ಲಿರುವ 543 ಸದಸ್ಯರ ಬಲವನ್ನು ಬರೋಬ್ಬರಿ 850ಕ್ಕೆ ಏರಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ದಶಕಗಳಿಂದ ಬಾಕಿ ಉಳಿದಿರುವ ‘ಮಹಿಳಾ ಮೀಸಲಾತಿ’ ಕಾನೂನನ್ನು ಜಾರಿಗೊಳಿಸಲು ಮತ್ತು ಹೊಸ ಕ್ಷೇತ್ರ ಪುನರ್ ವಿಂಗಡಣೆಗೆ ಹಾದಿ ಸುಗಮಗೊಳಿಸಲು ಮೋದಿ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯಂತೆ ಲೋಕಸಭೆಯ ಒಟ್ಟು ಬಲ 850 ಆಗಲಿದೆ. ಇದರಲ್ಲಿ 815 ಸ್ಥಾನಗಳನ್ನು ವಿವಿಧ ರಾಜ್ಯಗಳಿಗೆ […]

Continue Reading

ಗೊಂದಲದ ಗೂಡಾದ ಬೆಳ್ತಂಗಡಿ ಅಂಬೇಡ್ಕರ್ ಜಯಂತಿ: ದಿನಕ್ಕೊಬ್ಬ ಮುಖ್ಯ ಭಾಷಣಕಾರರ ಬದಲಾವಣೆ

ಪ್ರತಿವರ್ಷದಂತೆ ನಡೆಯುವ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಈ ವರ್ಷ ಗೊಂದಲದ ಗೂಡಾಗಿ ಪರಿಣಮಿಸಿದೆ. ದಿನಕ್ಕೊಬ್ಬರಂತೆ ಮುಖ್ಯ ಭಾಷಣಕಾರರು ಬದಲಾವಣೆಗೊಂಡು ಇದೀಗ ಕೊನೆಗಳಿಗೆಯಲ್ಲಿಯೂ ಬದಲಾವಣೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಇತ್ತೀಚೆಗೆ ದಲಿತ ನಾಯಕರ ಸಭೆ ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ದಲಿತ ನಾಯಕರು ಸರ್ವಾನುಮತದಿಂದ ಹಿರಿಯ ತುಳು ಸಾಹಿತಿ ಆತ್ರಾಡಿ ಅಮೃತ ಶೆಟ್ಟಿಯವರ ಹೆಸರನ್ನು ಸೂಚಿಸಿದರು. ಆದರೆ […]

Continue Reading

ಮುಸ್ಲಿಂ ಸಮುದಾಯ ಓದಲೇಬೇಕಾದ ಸ್ಟೋರಿ

ಬಂಟ, ಬ್ರಾಹ್ಮಣರಂತೆ ಬ್ಯಾರಿ ಹುಡುಗರಿಗೂ ವಧು ಸಿಗುತ್ತಿಲ್ಲ.! ಮಸೀದಿ, ಮೊಹಲ್ಲಾ, ಸಂಘ ಸಂಸ್ಥೆಗಳ ಕರ್ತವ್ಯವೇನು.? ಸಮುದಾಯ ಇನ್ನಾದರೂ ಚಿಂತಿಸಲಿ ಮುಸ್ಲಿಂ ಸಮುದಾಯದಲ್ಲಿ ಅದರಲ್ಲೂ ಬ್ಯಾರಿ ಜನಾಂಗದಲ್ಲಿ ಈ ಹಿಂದೆ ವರದಕ್ಷಿಣೆಯ ಪಿಡುಗು ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು . ವಿವಾಹವಾಗುವ ಹೆಣ್ಣು ಕುಟುಂಬಗಳು ವರದಕ್ಷಿಣೆ ನೀಡಲು ಸಾಧ್ಯವಾಗದೇ 30-35 ವರ್ಷ ಮೀರಿದರೂ ಮದುವೆ ಮಾಡಲು ಸಾಧ್ಯವಾಗದೇ ಮನೆಯಲ್ಲೇ ಉಳಿಯುವಂತಾಗುತ್ತಿತ್ತು. ಇಸ್ಲಾಂ ನಲ್ಲಿ ಮಹರ್ ಪದ್ಧತಿ ಜಾರಿಯಲ್ಲಿದ್ದರೂ ಅನಪೇಕ್ಷಿತವಾಗಿ ನುಸುಳಿಕೊಂಡ ವರದಕ್ಷಿಣೆ ಪಿಡುಗು ಸಮುದಾಯವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿತ್ತು. ಇದರ […]

Continue Reading

ಮುಸ್ಲಿಮರು ಪತ್ನಿಯರನ್ನು ಸಮಾನವಾಗಿ ನೋಡಿಕೊಂಡರೆ, ಬಹುಪತ್ನಿತ್ವಕ್ಕೆ ಅವಕಾಶ ಇದೆ: ಅಲಹಾಬಾದ್ ಹೈಕೋರ್ಟ್

ಇಸ್ಲಾಂ ಧರ್ಮದ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಮುಸ್ಲಿಂ ಪುರುಷರು ಪಡೆಯಬಹುದಾದ ವಿವಾಹದ ಹಕ್ಕುಗಳ ಕುರಿತು ಇತ್ತೀಚೆಗೆ ಅಲಹಾಬಾದ್ ನ್ಯಾಯಾಲಯವು ಪ್ರಮುಖ ತೀರ್ಪೊಂದನ್ನು ನೀಡಿದೆ. ಮೊದಲ ಪತ್ನಿ ಜೀವಂತವಾಗಿದ್ದರೂ ಅಥವಾ ಆಕೆಯೊಂದಿಗೆ ವಿಚ್ಛೇದನವಾಗದಿದ್ದರೂ ಸಹ, ಮುಸ್ಲಿಂ ಪುರುಷನು ಎರಡನೇ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ತೀರ್ಪು ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಡಿಯಲ್ಲಿ ಬರುವ ಹಕ್ಕುಗಳನ್ನು ಎತ್ತಿಹಿಡಿದಿದೆ. ಧಾರ್ಮಿಕ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ನಾಲ್ಕು ವಿವಾಹಗಳವರೆಗೆ ಮಾಡಿಕೊಳ್ಳಲು ಅವಕಾಶವಿರುವುದರಿಂದ, ಇದನ್ನು ಕಾನೂನುಬಾಹಿರ ಎಂದು […]

Continue Reading

ತೂತುಕುಡಿ ಲಾಕಪ್ ಡೆತ್ ಪ್ರಕರಣ: ಐತಿಹಾಸಿಕ ತೀರ್ಪು; 9 ಮಂದಿ ಪೊಲೀಸರಿಗೆ ಮರಣದಂಡನೆ

ಅಧಿಕಾರ ದುರುಪಯೋಗದ ಪರಮಾವಧಿ: ನ್ಯಾಯಾಲಯ; “ಅಪರೂಪದಲ್ಲಿ ಅತ್ಯಪರೂಪದ” ಪ್ರಕರಣ ಎಂದು ಪರಿಗಣಿಸಿದ್ದ ಸಿಬಿಐ ಆರು ವರ್ಷಗಳ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ತಮಿಳುನಾಡಿನ ತೂತುಕುಡಿ ಜಿಲ್ಲೆಯ ವ್ಯಾಪಾರಸ್ಥ ಜಯರಾಜ್ ಮತ್ತು ಆತನ ಪುತ್ರ ಬೆನಿಕ್ಸ್ ಈ ಇಬ್ಬರ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ಜಿಲ್ಲಾ ನ್ಯಾಯಾಲಯವು ಸೋಮವಾರ ಐತಿಹಾಸಿಕ ತೀರ್ಪನ್ನು ನೀಡಿದೆ. ಪೊಲೀಸರಿಗೆ ಮರಣದಂಡನೆ ವಿಧಿಸಿರುವ ಕೋರ್ಟ್ ಈ ಭೀಕರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್ ಸೇರಿದಂತೆ ಒಟ್ಟು […]

Continue Reading

ಕೇರಳ ವಿಧಾನಸಭಾ ಚುನಾವಣೆ; ಎಡರಂಗದ ವೋಟುಗಳ ಮೇಲೆ ಬಿಜೆಪಿ ಪ್ರಭಾವ ಬೀರಲಿದೆ: ಸಿ ವೋಟರ್

ದೇವರನಾಡು ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ವೋಟುಗಳ ಮೇಲೆ ಬಿಜೆಪಿ ಪ್ರಭಾವ ಬೀರಲಿದ್ದು, ಈ ಮೂಲಕ ಯುಡಿಎಫ್‌ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯ ಭವಿಷ್ಯ. ಪಂಚ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಪಕ್ಷಗಳು ಗೆಲುವಿಗೆ ತಯಾರಿ ನಡೆಸುತ್ತಿವೆ. ತಮಿಳುನಾಡು, ಕೇರಳದಲ್ಲಿ ಚುನಾವಣೆ ನಡೆಯುತ್ತಿದ್ದು, ಆಡಳಿತ ಪಕ್ಷಗಳು ಮತ್ತೆ ಚುಕ್ಕಾಣಿ ಹಿಡಿಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇತ್ತ ವಿರೋಧ ಪಕ್ಷಗಳು ತೀವ್ರ ಪೈಪೋಟಿ ನೀಡುತ್ತಿದ್ದು, ಕೇರಳದಲ್ಲಿ ನೇರ ನೇರ ಹಣಾಹಣಿ ಇರಲಿದೆ ಎಂದು ಚುನಾವಣಾ ಪೂರ್ಣ ಸಮೀಕ್ಷೆಗಳು ಹೇಳುತ್ತಿವೆ. […]

Continue Reading

ಭಾರತ ಸರ್ಕಾರದ ಮಹತ್ವದ ಜನಗಣತಿ ಯೋಜನೆ ನಾಳೆಯಿಂದ ಚಾಲನೆ; ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಅವಕಾಶ

ಭಾರತ ಸರ್ಕಾರದ ಮಹತ್ವದ ಯೋಜನೆಗಳಾದ ಜನಗಣತಿ ಪ್ರಕ್ರಿಯೆಗೆ ನಾಳೆಯಿಂದ ಚಾಲನೆ ದೊರೆಯಲಿದೆ.ಡಿಜಿಟಲ್ ರೂಪದಲ್ಲಿ ಮಾಹಿತಿ ನೀಡಲು ಸಾರ್ವಜನಿಕರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಜನಗಣತಿ ಮಾಡುವವರು ಮನೆಗೆ ಬಂದಾಗ ಅವರಿಗೆ ಕೇವಲ ರೆಫರೆನ್ಸ್ ನಂಬರ್ ನೀಡುವ ಮೂಲಕ ಜವಾಬ್ದಾರಿಯನ್ನು ಪೂರ್ಣಗೊಳಿಸಬಹುದಾಗಿದೆ. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು https://test.census.gov.in/se/ ಜಾಲತಾಣಕ್ಕೆ ಲಾಗಿನ್ ಆಗಿ ಸೆನ್ಸಸ್ ನಲ್ಲಿ ಭಾಗವಹಿಸಬಹುದಾಗಿದೆ. ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ OTP ಬಳಸಿ ಲಾಗಿನ್ ಆಗಿ, ಅಲ್ಲಿ ಕಾಣಿಸುವ ‘ಸ್ವಯಂ ಗಣತಿ’ ಐಕಾನ್ […]

Continue Reading