ಪಾರ್ಲಿಮೆಂಟ್ ಚುನಾವಣೆ ಮತ ಚಲಾಯಿಸುವ ಮುನ್ನ ವಿನಾಯಕ ಬಾಳಿಗಾನನ್ನು ನೆನಪಿಸಿ: ನರೇಂದ್ರ ನಾಯಕ್

ಕರಾವಳಿ

ಆರ್ ಎಸ್ ಎಸ್ ಕಾರ್ಯಕರ್ತ ವಿನಾಯಕಾ ಬಾಳಿಗಾ ಹತ್ಯೆಯಾಗಿ 8 ವರುಷ ಸಂದರೂ ಬಿಜೆಪಿಯ ಒಬ್ಬನೇ ಒಬ್ಬ ಜನಪ್ರತಿನಿಧಿಗಳು ಕೊಲೆಯನ್ನು ಈವರೆಗೆ ಕನಿಷ್ಠ ಖಂಡಿಸಲೂ ಇಲ್ಲ ನ್ಯಾಯಕ್ಕಾಗಿ ಆಗ್ರಹಿಸಲೂ ಇಲ್ಲ. ಇದೀಗ ಪಾರ್ಲಿಮೆಂಟ್ ಚುನಾವಣೆ ಘೋಷಣೆಯಾಗಿದೆ ಧರ್ಮ ದೇವರ ಹೆಸರಲ್ಲಿ ರಾಜಕಾರಣ ಮಾಡುವ ಜನಪ್ರತಿನಿಧಿಗಳಿಗೆ ಮತ ಚಲಾಯಿಸುವ ವೇಳೆ ದೇವಸ್ಥಾನದ ಅಕ್ರಮದ ವಿರುದ್ಧ ಧ್ವನಿಯೆತ್ತಿ ಕೊಲೆಯಾದ ವಿನಾಯಕ ಬಾಳಿಗಾನನ್ನು ಜನ ನೆನಪಿಸಿಕೊಳ್ಳಬೇಕೆಂದು ಹಿರಿಯ ವಿಚಾರವಾದಿ ಪ್ರೋ ನರೇಂದ್ರನಾಯಕ್ ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಗೆ ಎಂಟು ವರುಷ ಸಂದ ಈ ದಿನದಂದು (21-3-2024) ವೆಂಕಟರಮಣ ದೇವಸ್ಥಾನದಿಂದ ಬಾಳಿಗಾ ಮನೆಯವರೆಗೆ ನಡೆದ ಮೆರವಣೆಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯನ್ನು ಉದ್ದೇಶಿಸಿ ಖ್ಯಾತ ಮನೋವೈದ್ಯರಾದ ಪಿ.ವಿ ಭಂಡಾರಿ, ಡಿವೈಎಫ್ಐ ರಾಜ್ಯ ಮುಖಂಡರಾದ ಮುನೀರ್ ಕಾಟಿಪಳ್ಳ, ಡಿಎಸ್ಎಸ್ ನ ಹಿರಿಯ ಮುಖಂಡರಾದ ಎಂ.ದೇವದಾಸ್, ಎಂ.ಜಿ ಹೆಗಡೆ ಮಾತನಾಡಿದರು.

ಈ ವೇಳೆ ವಿನಾಯಕ ಬಾಳಿಗಾರ ಸಹೋದರಿಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ , ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್ , ಮಾಜಿ ಕಾರ್ಪೊರೇಟರ್ ಗಳಾದ ಪ್ರಕಾಶ್ ಸಾಲ್ಯಾನ್, ಅಪ್ಪಿ, ದಯಾನಂದ ಶೆಟ್ಟಿ, ಸಾಮರಸ್ಯ ಬಳಗದ ಮಂಜುಳಾ ನಾಯಕ್, ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಡಿಎಸ್ಎಸ್ ಮುಖಂಡರಾದ ರಘು ಎಕ್ಕಾರ್, ಸರೋಜಿನಿ, ಸಂಕಪ್ಪ ಕಾಂಚನ್, ರಾಯ್ ಕ್ಯಾಸ್ಟಲೀನೋ, ಡಿವೈಎಫ್ಐನ ಜಗದೀಶ್ ಬಜಾಲ್, ಸೈಫರ್ ಆಲಿ ಸುರತ್ಕಲ್, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಮಹಿಳಾ ಮುಖಂಡರಾದ ಅಸುಂತ ಡಿಸೋಜ, ಪ್ರಮೀಳಾ ದೇವಾಡಿಗ, ಯೋಗಿತಾ ಉಳ್ಳಾಲ, ಭಾರತೀ ಬೋಳಾರ, ಸಾಮಾಜಿಕ ಕಾರ್ಯಕರ್ತರಾದ ಸಂಜನಾ ಛಲವಾದಿ, ಸುನೀಲ್ ಬಜಿಲಕೇರಿ, ಟಿ. ಸಿ ಗಣೇಶ್ ,ಯುವ ವಕೀಲರಾದ ನಿತಿನ್ ಕುತ್ತಾರ್, ಚರಣ್ ಶೆಟ್ಟಿ ಪಂಜಿಮೊಗರು, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಶ್ಯಾಮ್ ಸುಂದರ್, ಪ್ರಭಾಕರ್ ಕಾಪಿಕಾಡ್, ಸಮರ್ಥ್ ಭಟ್, ಮಂಜಪ್ಪ ಪುತ್ರನ್, ಮುಂತಾದವರು ಉಪಸ್ಥಿತರಿದ್ದರು.

ಸಭೆಯ ನೇತೃತ್ವವನ್ನು ವಹಿಸಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ ಬಜಾಲ್ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.