ಟಿ.ಡಿ.ಆರ್ ಫೈಲ್ ನನ್ನ ಆಸಕ್ತಿಗೆ ಸಂಬಂಧಿಸಿದ್ದು, ತಕ್ಷಣವೇ ಕ್ಲಿಯರ್ ಮಾಡಬೇಕು ಎಂದು ಶಾಸಕರು ಒತ್ತಡ ಹಾಕಿದ್ದಾದರೂ ಯಾತಕ್ಕೆ.?
ಮೂಡಾ ಕಮೀಷನರ್ ಮನ್ಸೂರ್ ಆಲಿ ಮೇಲೆ ನಡೆದಿಡೆ ಎನ್ನಲಾಗಿರುವ ಲೋಕಾಯುಕ್ತ ರೈಡ್ ಪ್ರಕರಣ ಇದೀಗ ದೊಡ್ಡ ದೊಡ್ಡ ಗುಸುಗುಸಿಗೆ ಕಾರಣವಾಗಿದ್ದು, 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತರು ಅರೆಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ ಅನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ. ಕೆಲವು ತಿಂಗಳ ಹಿಂದೆ ಮೂಡಾದ ಮಹಿಳಾ ಸಿಬ್ಬಂದಿಯೊಬ್ಬರು ಆಯುಕ್ತರ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದು, ಆದರೆ ಅದು ಕೊನೆಗೆ ಹಳ್ಳ ಸೇರಿತ್ತು. ದೂರುದಾರೆ ಸುಖಾಸುಮ್ಮನೆ ಆಯುಕ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವುದು ಬೆಳಕಿಗೆ ಬಂದಿತ್ತು. ಇದಾದ ಕೆಲವೇ ತಿಂಗಳ ಅಂತರದಲ್ಲಿ ಮೂಡಾ ಅಧ್ಯಕ್ಷರನ್ನು ಭ್ರಷ್ಟಾಚಾರದ ಆರೋಪದಡಿ ಬಂಧಿಸಲಾಗಿದೆ.
ಮೂಡಾ ಆಯುಕ್ತರ ಭ್ರಷ್ಟಾಚಾರದ ಕೇಸಿಗೆ ಸಂಬಂಧಿಸಿದಂತೆ ಇದೀಗ ಬೇರೆಯದೇ ಕಥೆ ತೆರೆದುಕೊಳ್ಳುತ್ತಿದೆ. ಆಯುಕ್ತರನ್ನು ಬಲಿಪಶು ಮಾಡಲಾಗಿದೆ ಎಂಬ ವಿಚಾರ ಹೊರಗೆ ಬರುತ್ತಿದೆ.

ದೂರುದಾರ ಗಿರಿಧರ್ ಶೆಟ್ಟಿ ಭೂ ಮಾಫಿಯಾದ ನಂಟು ಹೊಂದಿದ್ದು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಟಿ.ಡಿ.ಆರ್ ನಿಯಮದ ಪ್ರಕಾರ ಜಮೀನಿನ ಮೂಲ ಮಾಲಕನ ಮೂಲಕ ಮಾತ್ರ ಖರೀದಿ ಮಾಡಬೇಕು. ಮಧ್ಯವರ್ತಿ, ಎಗ್ರಿಮೆಂಟ್ ಹೋಲ್ಡರ್ ನ ಜೊತೆಗೆ ಖರೀದಿ ಮಾಡುವ ಹಾಗಿಲ್ಲ. ಹೀಗಿರುತ್ತಾ, ಪಚ್ಚನಾಡಿಯ ಕಸದ ರಾಶಿ (ಡಂಪಿಂಗ್ ಯಾರ್ಡ್) ಗೆ ತಾಗಿಕೊಂಡಿದ್ದ ಯಾರಿಗೂ ಬೇಡವಾಗಿದ್ದ 10.8 ಎಕರೆ ಜಮೀನಿನ ಮೂಲ ಮಾಲಕನ ಬದಲಿಗೆ ಎಗ್ರಿಮೆಂಟ್ ಹೋಲ್ಡರ್ (ಕುಖ್ಯಾತ ರಿಯಲ್ ಎಸ್ಟೇಟ್ ಲಾಭಿಗೆ ಸೇರಿದವರು) ಗಿರಿಧರ್ ಶೆಟ್ಟಿಯೊಂದಿಗೆ ಮಂಗಳೂರು ನಗರ ಪಾಲಿಕೆ ಟಿ.ಡಿ.ಆರ್ ಮೂಲಕ ಖರೀದಿಗೆ ವ್ಯವಹಾರ ಕುದುರಿಸಿದ್ದು, ದಾಖಲೆ ಸಿದ್ದಪಡಿಸಿದ್ದು ಹೇಗೆ, ಇದೊಂದು ಭ್ರಷ್ಟಾಚಾರ, ಡೀಲ್ ಅನ್ನುವುದಕ್ಕೆ ಬೇರೆ ಉದಾಹರಣೆ ಬೇಕೇ.?
ಮೂಲಗಳ ಪ್ರಕಾರ ಜಮೀನಿನ ಮೂಲ ಮಾಲಕನಿಂದ ಮಂಗಳೂರಿನ ಲಾಬಿಯ ಪ್ರತಿನಿಧಿ ಗಿರಿಧರ್ ಈ ಜಮೀನು ಖರೀದಿ ಮಾಡಲು ನಿಗದಿ ಮಾಡಿದ್ದು 7 ಕೋಟಿ ರೂಪಾಯಿ. ಅದರಲ್ಲಿ ಮುಂಗಡವಾಗಿ ಕೇವಲ ಒಂದು ಕೋಟಿ ರೂಪಾಯಿ ನೀಡಿ ಜಮೀನು ಖರೀದಿ ಒಪ್ಫಂದ ಮಾಡಿಕೊಂಡಿದ್ದಾರೆ. ಅದೇ ಸಂದರ್ಭ ನಗರ ಪಾಲಿಕೆಯ ಭ್ರಷ್ಟರೊಂದಿಗೆ ಮಾಡಿಕೊಂಡ ಟಿ.ಡಿ.ಆರ್ ಅಡಿ ಜಮೀನು ಪರಭಾರೆ ಡೀಲ್ ಪ್ರಕಾರ ಈ ಜಮೀನಿಗೆ ಸಿಗಲಿರುವ ಟಿ.ಡಿ.ಆರ್ ಮೌಲ್ಯ ಸುಮಾರು 50 ಕೋಟಿ ರೂಪಾಯಿ. ಅಂದರೆ ಕೇವಲ ಒಂದು ಕೋಟಿ ರೂಪಾಯಿ ಹೂಡಿಕೆ ಮಾಡಿ ಅಂದಾಜು 40 ಕೋಟಿ ರೂಪಾಯಿ ಜಾಕ್ ಪಾಟ್ ಲಾಭ.
ಈ ಎಲ್ಲಾ ಡೀಲ್ ಗಳು, ತಾಂತ್ರಿಕ ಸಮಸ್ಯೆ (ಮೂಲ ಮಾಲಕನ ಬದಲಿಗೆ ಎಗ್ರಿಮೆಂಟ್ ಹೋಲ್ಡರ್ ನೊಂದಿಗೆ ಖರೀದಿ) ಅರಿತಿದ್ದ ಮೂಡಾ ಕಮೀಷನರ್ ಮನ್ಸೂರ್ ಅಲಿ ಫೈಲ್ ಕ್ಲಿಯರ್ ಮಾಡಲು ಒಪ್ಪಿರಲಿಲ್ಲ, ಬದಲಿಗೆ ಫೈಲ್ ನ ಸಮಸ್ಯೆಗಳ ಕುರಿತು ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿಕೊಂಡಿದ್ದರು ಎಂಬುದು ಇದೀಗ ಕೇಳಿ ಬರುತ್ತಿರುವ ಸುದ್ದಿ. ಈ ಹಿನ್ನಲೆಯಲ್ಲಿ ಮಂಗಳೂರು ನಗರ ಶಾಸಕ ವೇದವ್ಯಾಸರಾಯರು ಮೂಡಾ ಕಮೀಷನರ್ ರನ್ನು ಲೋಕಾಯುಕ್ತ ದಾಳಿಗೆ ಒಂದು ವಾರ ಮುಂಚಿತವಾಗಿ ಸರ್ಕ್ಯೂಟ್ ಹೌಸಿಗೆ ಕರೆಸಿ ಟಿ.ಡಿ.ಆರ್ ಫೈಲ್ ನನ್ನ ಆಸಕ್ತಿಗೆ ಸಂಬಂಧಿಸಿದ್ದು, ತಕ್ಷಣವೇ ಕ್ಲಿಯರ್ ಮಾಡಬೇಕು ಎಂದು ಒತ್ತಡ ಹಾಕಿದ್ದರು ಎಂಬ ಸುದ್ದಿ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ.
ಶಾಸಕರ ಹುಕುಂ ಗೂ ಮೂಡಾ ಕಮೀಷನರ್ ಮನ್ಸೂರ್ ಅಲಿ ಬಗ್ಗದೇ ಹೋದಾಗ ಲೋಕಾಯುಕ್ತ ಧಾಳಿ ನಡೆಯಿತು ಎಂಬುದು ಲೇಟೆಸ್ಟ್ ಗಾಸಿಪ್. ಅಷ್ಟಕ್ಕೂ ಶಾಸಕ ಒಬ್ಬ ಸೀನಿಯರ್ ಗ್ರೇಡಿನ ಅಧಿಕಾರಿಯನ್ನು ಹೀಗೆ ಸರ್ಕ್ಯೂಟ್ ಹೌಸಿಗೆ ಕರೆಸಿ ತಾನು ಹೇಳಿದಂತೆ ಕೇಳಿ ಫೈಲ್ ಕ್ಲಿಯರ್ ಮಾಡು ಅಂತ ಹುಕುಂ (ಧಮ್ಕಿ) ಹಾಕಬಹುದೆ.? ಶಾಸಕರಿಗೆ ಈ ಫೈಲ್ ಕುರಿತು ಅಷ್ಟೊಂದು ಆಸಕ್ತಿ ಏತಕ್ಕೆ.? ಸರಕಾರದ ಖಜಾನೆಯ ದುಡ್ಡು ನಿಯಮ ಬಾಹಿರವಾಗಿ ಕಂಡವರ ಪಾಲಾಗಲು ಜನಪ್ರತಿನಿಧಿಗಳೇ ಮುಂದಾಳತ್ವ ವಹಿಸಿದರೆ ಹೇಗೆ.? ಈ ಡೀಲ್ ನಲ್ಲಿ ಭಾಗಿಯಾಗಿರುವ ಕಾರ್ಪೊರೇಟರ್ ಗಳ,ಬಿಲ್ಡರ್ ಮಾಫಿಯಾಗಳ ಸಂಖ್ಯೆ ಎಷ್ಟು, ಅವರು ಯಾರ್ರ್ಯಾರು.? ಎನ್ನುವುದು ಇದೀಗ ನಿಗೂಢವಾಗಿ ಉಳಿದಿದೆ.
ಪ್ರಭಾವೀಗಳು ಸೃಷ್ಟಿಸಿದ ಹೊಂಡಕ್ಕೆ ಮೂಡಾ ಕಮೀಷನರ್ ಬಿದ್ದರು ಅನ್ನುವ ಮಾತುಗಳು ಇದೀಗ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಧಿಕಾರಿಗಳು ಒಪ್ಪದೇ ಇದ್ದಾಗ ಪ್ರಭಾವಿಗಳು ಏನೆಲ್ಲಾ ಷಡ್ಯಂತ್ರ ಮಾಡುತ್ತಾರೆ ಅನ್ನುವುದಕ್ಕೆ ಲೋಕಾಯುಕ್ತ ರೈಡ್ ಉತ್ತಮ ಉದಾಹರಣೆಯಾಗಿದೆ ಅನ್ನುವುದು ಇದೀಗ ಚರ್ಚೆಯಾಗುತ್ತಿರುವ ವಿಷಯವಾಗಿದೆ. ರಾಜ್ಯ ಸರಕಾರ ತಕ್ಷಣವೇ ಈ ವಿವಾದಾತ್ಮಕ ಫೈಲ್ ಅನ್ನು ತಡೆ ಹಿಡಿದು ಮಂಗಳೂರು ನಗರದಲ್ಲಿ ನಡೆಯುವ ಭೂ ಮಾಫಿಯವನ್ನು ಬಯಲಿಗೆಳೆಯಬೇಕಾಗಿದೆ. ಇಲ್ಲೊಂದು ಷಡ್ಯಂತರವೂ ನಡೆಯುತ್ತಿದೆ. ಮಂಗಳೂರು ಮೂಡಕ್ಕೆ ಮುಂಚೆ ಇದ್ದ ಕಮೀಷನರ್ ಡಾ.ಭಾಸ್ಕರ್ ರವರನ್ನು ಅ ಸ್ಥಾನದಲ್ಲಿ ಕೂರಿಸಲು ಮೂಡದ ಟೌನ್ ಪ್ಲಾನರ್ ಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. ಕೋಟಿ, ಕೋಟಿ ಕೊಟ್ಟು ಅ ಸ್ಥಾನಕ್ಕೆ ಅವರನ್ನು ಕರೆತರುವ ಹುನ್ನಾರ ನಡೆಯುತ್ತಿದೆ. ಅದೆಲ್ಲದರ ಭಾಗವೇ ಲೋಕಾಯುಕ್ತ ರೈಡು.! ಕಾರಣ ಮಂಗಳೂರು ಮೂಡ ಚಿನ್ನದ ಮೊಟ್ಟೆ ಇಡುವ ಸ್ಥಳ.!
