ಭಾರತಕ್ಕೆ ಕಾಲಿಟ್ಟ ಹಕ್ಕಿ ಜ್ವರ, 2019 ರ ಬಳಿಕ ವಿಶ್ವದಲ್ಲಿ ಕಾಣಿಸಿಕೊಂಡ ಎರಡನೇ ಪ್ರಕರಣ

ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ 4 ವರ್ಷದ ಮಗುವಿನಲ್ಲಿ ಎಚ್ 9ನ್2 (ಹಕ್ಕಿ ಜ್ವರ) ಕಾಣಿಸಿಕೊಂಡಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ದೃಢೀಕರಿಸಿ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಹಕ್ಕಿ ಜ್ವರ ಪೀಡಿತ ಮಗುವಿನ ಶ್ವಾಸಕೋಶದಲ್ಲಿ ತೀವ್ರ ಸೋಂಕು ಕಾಣಿಸಿಕೊಂಡಿದೆ. ಜತೆಗೆ ಭಾರಿ ಜ್ವರದ ಲಕ್ಷಣಗಳು ಕೂಡ ಇದೆ.

2019 ರ ಬಳಿಕ ವಿಶ್ವದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಮಾನವ ಸೋಂಕಿನ ಎರಡನೇ ಪ್ರಕರಣ ಇದಾಗಿದೆ ಎಂದು ಡಬ್ಲ್ಯೂ ಎಚ್ ಒ ಹೇಳಿದೆ.